Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ಗೆ ಒಂದು ವರ್ಷ: 694 ರೋಗಿಗಳಿಗೆ ಉಚಿತ ಆರೈಕೆ

Dhrishya News by Dhrishya News
21/09/2026
in ಸುದ್ದಿಗಳು
0
ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ಗೆ ಒಂದು ವರ್ಷ: 694 ರೋಗಿಗಳಿಗೆ ಉಚಿತ ಆರೈಕೆ
0
SHARES
7
VIEWS
Share on FacebookShare on Twitter

ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್ ಒಂದು ವರ್ಷ ಪೂರ್ಣಗೊಳಿಸಿತು.

ವೈದ್ಯಕೀಯ ಕಾಲೇಜು ಮತ್ತು ತೃತೀಯ ಹಂತದ ಆಸ್ಪತ್ರೆ ಈ – ಎರಡೂ ಕೂಡ ಸಂಯೋಜಿತವಾಗಿರುವ ದೇಶದ ಏಕೈಕ ಹಾಸ್ಪೈಸ್ ಆದ ಎಂಎಚ್‌ಆರ್‌ಸಿ ಹದಿನೈದು ಹಾಸಿಗೆಗಳಿಂದ ನಲವತ್ತಕ್ಕೆ ಬೆಳೆದಿದೆ. 694 ರೋಗಿಗಳಿಗೆ ಆರೈಕೆ ಮತ್ತು ಸಾವಿರದ ಮುನ್ನೂರಕ್ಕೂ ಹೆಚ್ಚು ಆರೈಕೆದಾರರಿಗೆ ಬೆಂಬಲ ಎಲ್ಲವೂ ಸಂಪೂರ್ಣ ಉಚಿತ.

ಮಣಿಪಾಲ 21 ಸೆಪ್ಟೆಂಬರ್ 2026 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಇದರ ಅಂಗ ಘಟಕವಾದ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (MHRC) ರೋಗಿಗಳ ಆರೈಕೆಯ ಒಂದು ವರ್ಷವನ್ನು ಪೂರ್ಣಗೊಳಿಸಿದ್ದು, 694 ರೋಗಿಗಳಿಗೆ ಮತ್ತು 1,300 ಕ್ಕೂ ಹೆಚ್ಚು ಕುಟುಂಬದ ಅರೈಕೆದಾರರಿಗೆ ಬೆಂಬಲ ನೀಡಿದೆ. ಈ ಎಲ್ಲ ಸೇವೆಗಳನ್ನು ಉಚಿತವಾಗಿ ಒದಗಿಸಲಾಗಿದೆ.

MAHE ಯ ಒಂದು ಮೊಟ್ಟಮೊದಲ ಉಪಕ್ರಮವಾಗಿ ರೂಪಿಸಲಾದ ಎಂಎಚ್‌ಆರ್‌ಸಿ (MHRC)ಅನ್ನು ಸರಳ ಉದ್ದೇಶಗಳೊಂದಿಗೆ ಸ್ಥಾಪಿಸಲಾಯಿತು: ಗುಣಪಡಿಸಲಾಗದ ಅಥವಾ ಜೀವಿತಾವಧಿಯನ್ನು ಸೀಮಿತಗೊಳಿಸುವ ಖಾಯಿಲೆಗಳಿಂದ ಬಳಲುತ್ತಿರುವ ಯಾವುದೇ ವ್ಯಕ್ತಿ ಮತ್ತು ಅವರನ್ನು ಆರೈಕೆ ಮಾಡುವ ಯಾವುದೇ ಕುಟುಂಬದವರು ಸಾಂತ್ವನಾ ಮತ್ತು ಬೆಂಬಲದಿಂದ ವಂಚಿತವಾಗಬಾರದು.

ಈ ಕೇಂದ್ರವು ಕ್ಯಾನ್ಸರ್ (ಮುಂದುವರೆದ ಕ್ಯಾನ್ಸರ್ ಸೇರಿದಂತೆ), ಹಾಗೂ ಪಾರ್ಷ್ವವಾಯು (ಸ್ಟ್ರೋಕ್), ಮೋಟಾರ್ ನ್ಯೂರಾನ್ ಖಾಯಿಲೆ, ಮತ್ತು ಇತರ ಪ್ರಗತಿಶೀಲ ನರವೈಜ್ಞಾನಿಕ ಖಾಯಿಲೆಗಳು, ಮುಂದುವರಿದ ಹೃದ್ರೋಗ, ದೀರ್ಘಕಾಲೀನ ಶ್ವಾಸಕೋಶದ ಖಾಯಿಲೆ, ಮತ್ತು ಮುಂದುವರಿದ ಮೂತ್ರಪಿಂಡ ಅಥವಾ ಯಕೃತಿನ ಖಾಯಿಲೆಯಂತಹ ಗಂಭೀರ ಪ್ರಗತಿಶೀಲ ಖಾಯಿಲೆಗಳಿರುವ ಜನರನ್ನು ದಾಖಲಿಸಿಕೊಳ್ಳುತ್ತದೆ. ರೋಗಿಗಳಿಗೆ ವಿಶೇಷ ಉಪಶಮನ ಆರೈಕೆ, ಹಾಸ್ಪೈಸ್ ಆರೈಕೆ, ಜೀವನದ ಅಂತ್ಯದ ಆರೈಕೆ, ವಿಶ್ರಾಂತಿ, ರೆಸ್ಪೈಟ್ ಅಥವಾ ಪುನರ್ವಸತಿ ಆರೈಕೆ ಅಗತ್ಯವಿದ್ದಾಗ ಅವರನ್ನು ದಾಖಲಿಸಿಕೊಳ್ಳಬಹುದು. ನೋವು ಅಥವಾ ಉಸಿರಾಟದ ತೊಂದರೆಯಂತಹ ಕಠಿಣ ಲಕ್ಷಣಗಳಿಗಾಗಿ, ಹೆಚ್ಚುತ್ತಿರುವ ಪರಾವಲಂಬನೆಗಾಗಿ, ಜೀವನದ ಅಂತ್ಯದಲ್ಲಿ ಬೆಂಬಲಕ್ಕಾಗಿ ಅಥವಾ ನಿರಂತರ ಆರೈಕೆಯಿಂದ ಕುಟುಂಬಗಳಿಗೆ ವಿರಾಮ ಬೇಕಾದಾಗ ಅಲ್ಭಾವದಿಯ ವಿಶ್ರಾಂತಿಗಾಗಿ ದಾಖಲಾತಿ ಅಗತ್ಯವಾಗಬಹುದು.

ಎಂಎಚ್‌ಆರ್‌ಸಿಯಲ್ಲಿ ಒಂದೇ ಸೂರಿನಡಿ, 24 ಗಂಟೆಗಳ ಕಾಲ ಬಹುಶಿಸ್ತೀಯ ತಜ್ಞರ ತಂಡದಿಂದ ಸಮಗ್ರ ಉಪಶಮನ ಆರೈಕೆ ಒದಗಿಸಲಾಗುತ್ತದೆ. ಉಪಶಮನ ಆರೈಕೆಯಲ್ಲಿ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಕೌನ್ಸೆಲರ್‌ಗಳು, ಫಿಸಿಯೋಥೆರಪಿಸ್ಟ್‌ಗಳು, ಆಕ್ಯುಪೇಷನಲ್ ಥೆರಪಿಸ್ಟ್‌ಗಳು, ಸಮಾಜ ಕಾರ್ಯಕರ್ತರು, ಆಧ್ಯಾತ್ಮಿಕ ಆರೈಕೆ ಸೇವೆ ಒದಗಿಸುವವರು ಹಾಗೂ ತರಬೇತಿ ಪಡೆದ ಸ್ವಯಂಸೇವಕರು ಈ ತಂಡದ ಭಾಗವಾಗಿದ್ದಾರೆ.

ಈ ತಂಡವು ರೋಗಿಗಳ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಸಮಗ್ರವಾಗಿ ಗುರುತಿಸಿ, ಸೂಕ್ತ ಆರೈಕೆ ಮತ್ತು ಬೆಂಬಲವನ್ನು ಒದಗಿಸುತ್ತದೆ.

ಎಂಎಚ್‌ಆರ್‌ಸಿಯಲ್ಲಿ ಕುಟುಂಬದ ಸದಸ್ಯರೂ ಆರೈಕೆಯ ಪ್ರಮುಖ ಭಾಗವಾಗಿದ್ದಾರೆ. ರೋಗದ ಅವಧಿಯಲ್ಲಿ ಅವರಿಗೆ ಅಗತ್ಯವಿರುವ ಸಮಾಲೋಚನೆ, ಪ್ರಾಯೋಗಿಕ ಮಾರ್ಗದರ್ಶನ ಹಾಗೂ ಭಾವನಾತ್ಮಕ ಬೆಂಬಲವನ್ನು ನೀಡಲಾಗುತ್ತದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ನಂತರವೂ ಈ ಬೆಂಬಲ ಮುಂದುವರಿಯುತ್ತದೆ. ದುಃಖ ನಿರ್ವಹಣೆ ಮತ್ತು ಶೋಕಪರಿಹಾರ ಆರೈಕೆ (Bereavement Care) ಮೂಲಕ ಕುಟುಂಬದ ಸದಸ್ಯರಿಗೆ ಅಗತ್ಯವಾದ ಭಾವನಾತ್ಮಕ ಬೆಂಬಲವನ್ನು ಒದಗಿಸಲಾಗುತ್ತದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ 4.4 ಕಿಲೋಮೀಟರ್ ದೂರದಲ್ಲಿ 12 ಎಕರೆ, ಆವರಣದಲ್ಲಿ ನೆಲೆಗೊಂಡಿರುವ ಎಂಹೆಚ್ಆರ್‌ಸಿಯನ್ನು ಸೌಕರ್ಯ ಘನತೆ ಮತ್ತು ಸುಲಭ ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ತೆರೆದ ಅಂಗಳಗಳು, ನೈಸರ್ಗಿಕ ಬೆಳಕು, ಶುದ್ಧ ಗಾಳಿ ಮತ್ತು ಹಸಿರು, ಬಹಳ ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಆವರಣವೂ ಅಡೆ-ತಡೆ ಮುಕ್ತವಾಗಿದ್ದು ಗಾಲಿ ಕುರ್ಚಿಗಳು, ನಡೆದಾಡುವ ಸಾಧನಗಳು ಮತ್ತು ಆಸ್ಪತ್ರೆ ಹಾಸಿಗೆಗಳ ಸುಲಭ ಸಂಚಾರಕ್ಕಾಗಿ ವಿಶಾಲವಾದ ಕಾರಿಡಾರ್ಗಳನ್ನು ಹೊಂದಿದೆ.

MHRC ಯಲ್ಲಿ ಜೀವನವನ್ನು ನಿರಂತರವಾಗಿ ಸಂಭ್ರಮಿಸಲಾಗುತ್ತದೆ. ಹಬ್ಬಗಳು, ಜನ್ಮದಿನಗಳು, ವಾರ್ಷಿಕೋತ್ಸವಗಳು ಮತ್ತು ಕುಟುಂಬದ ಸಂದರ್ಭಗಳನ್ನು ರೋಗಿಗಳು ಮತ್ತು ಅವರ ಪ್ರೀತಿ ಪಾತ್ರರೊಂದಿಗೆ ಆಚರಿಸಲಾಗುತ್ತದೆ. ಈ ಕ್ಷಣಗಳು ಗಂಭೀರ ಕಾಯಿಲೆಯು ಕುಟುಂಬದಲ್ಲಿ ಅವರ ಸ್ಥಾನವನ್ನು, ಅವರ ಸಂಬಂಧಗಳನ್ನು ಅಥವಾ ಸಂತೋಷ ಮತ್ತು ಬಾಂಧವ್ಯದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂಬುದನ್ನು ರೋಗಿಗಳಿಗೆ ನೆನಪಿಸುತ್ತವೆ.

ಸೆಪ್ಟೆಂಬರ್ 1, 2025, ರಂದು ರೋಗಿ ಆರೈಕೆಯನ್ನು ಆರಂಭಿಸಿದಾಗಿನಿಂದ 15 ಹಾಸಿಗೆಗಳಿಂದ 40 ಹಾಸಿಗೆಗಳಿಗೆ ಬೆಳೆದಿದ್ದು, ತನ್ನ ಸಾಮರ್ಥ್ಯವನ್ನು 100 ಹಾಸಿಗೆಗಳಿಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಎಮ್ ಎಚ್ ಆರ್ ಸಿ ಯ ನಿರ್ದೇಶಕರು ಮತ್ತು ಉಪಶಮನ ಆರೈಕೆ ವೈದ್ಯರಾದ ಡಾ. ಸೀಮಾ ಆರ್ ರಾವ್ ರವರು “ಉಪಶಮನ ಆರೈಕೆಯನ್ನು ಸಾಮಾನ್ಯವಾಗಿ ಕಾಯಿಲೆಯ ಅಂತಿಮ ಹಂತದ ಆರೈಕೆ ಮಾತ್ರ ಎಂದು ತಪಾಗಿ ಭಾವಿಸಲಾಗುತ್ತದೆ. ವಾಸ್ತವದಲ್ಲಿ ಯಾವುದೇ ರೋಗಿ ಗಂಭೀರ ಕಾಯಿಲೆಯನ್ನು ನೋವಿನಲ್ಲಿ ಭಯದಲ್ಲಿ ಅಥವಾ ಏಕಾಂಗಿಯಾಗಿ ಎದುರಿಸದಂತೆ ಇದು ಖಚಿತಪಡಿಸುತ್ತದೆ. ಇದನ್ನು ಕಾಯಿಲೆಯ ಯಾವುದೇ ಹಂತದಲ್ಲಿ ನೀಡಬಹುದು. ನಮ್ಮ ಮೊದಲ ವರ್ಷದಲ್ಲೇ 694 ರೋಗಿಗಳು ಮತ್ತು ಅವರ ಕುಟುಂಬಗಳು ನಮಗೆ ಒಂದು ಪಾಠ ಕಲಿಸಿದೆ. ಜೀವನಕ್ಕೆ ನಾವು ದಿನಗಳನ್ನು ಸೇರಿಸಲಾಗದಿದ್ದರೂ, ಪ್ರತಿ ದಿನಕ್ಕೂ ಸಾಂತ್ವನ, ಅರ್ಥ ಮತ್ತು ಘನತೆಯನ್ನು ಸೇರಿಸಬಹುದು. ಅವರೆಲ್ಲರೂ ಈ ಆರೈಕೆಯನ್ನು ಸಂಪೂರ್ಣ ಉಚಿತವಾಗಿ ಪಡೆದದ್ದು ನಮ್ಮ ಕಡೆಯ ದಾನವಲ್ಲ; ಅದು MHRC ನಿಂತಿರುವ ಮೂಲತತ್ವವೇ ಆಗಿದೆ” ಎಂದರು.

MHRC ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ. ನವೀನ್ ಸಾಲಿನ್ಸ್ ಅವರು “ಹಾಸ್ಪೆಸ್ ಆರೈಕೆಯು ಜೀವನದ ಅಂತಿಮ ದಿನಗಳಿಗೆ ಮಾತ್ರ ಸೀಮಿತವಲ್ಲ, ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಜನರು ಸಾಧ್ಯವಾದಷ್ಟು ಸೌಕರ್ಯದಿಂದ ಮತ್ತು ಅರ್ಥಪೂರ್ಣವಾಗಿ ಬದುಕಲು ಸಹಾಯ ಮಾಡುವುದು ಮತ್ತು ಆರೈಕೆಯ ಬಹುಪಾಲು ಜವಾಬ್ದಾರಿಯನ್ನು ಹೊರುವ ಕುಟುಂಬಗಳಿಗೆ ಬೆಂಬಲ ನೀಡುವುದು ಇದರ ಉದ್ದೇಶ. ರೋಗಿಗಳು ಮತ್ತು ಕುಟುಂಬಗಳಿಗೆ ಅವರ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಸೂಕ್ತ ಆರೈಕೆ ದೊರೆಯುವಂತೆ ಎಮ್ ಎಚ್ ಆರ್ ಸಿ ವಿಶೇಷ ಉಪಶಮನ ಆರೈಕೆ, ವಿಶ್ರಾಂತಿ ಆರೈಕೆ ಮತ್ತು ಜೀವನದ ಅಂತ್ಯದ ಆರೈಕೆಯನ್ನು ಒಟ್ಟಿಗೆ ತರುತ್ತದೆ” ಎಂದರು.

MAHEಯ ಕುಲಪತಿಗಳಾದ ಡಾ. ಶರತ್ ಕುಮಾರ್ ರಾವ್ ಕೆ ಅವರು “ಒಂದು ಸಂಸ್ಥೆಯು ಅದು ಗುಣಪಡಿಸುವ ಕಾಯಿಲೆಗಳಿಂದ ಮಾತ್ರವಲ್ಲ, ಗುಣಪಡಿಸುವಿಕೆಯು ಸಾಧ್ಯವಿಲ್ಲದಿದ್ದಾಗ ಅದು ತೋರುವ ಕರುಣೆಯಿಂದ ಅಳೆಯಲಾಗುತ್ತದೆ ಎಂದು ಮಾಹೆ ಯಾವಾಗಲೂ ನಂಬಿರುವುದನ್ನು ಎಂ ಎಚ್ ಆರ್ ಸಿ ಪ್ರತಿಬಿಂಬಿಸುತ್ತದೆ. ಪ್ರತಿ ಕುಟುಂಬಕ್ಕೂ ನಮ್ಮ ಬಾಗಿಲುಗಳನ್ನು ಉಚಿತವಾಗಿ ತೆರೆದಿಟ್ಟು, ಒಂದೇ ವರ್ಷದಲ್ಲಿ 15 ಹಾಸಿಗೆಗಳಿಂದ ನಲವತ್ತಕ್ಕೆ ಬೆಳೆಯಲು ಸಾಧ್ಯವಾದದ್ದು ನಮ್ಮೊಂದಿಗೆ ಕೈಜೋಡಿಸಿದ ಉದಾರ ಹಸ್ತಗಳಿಂದ ಮಾತ್ರ ಸಾಧ್ಯ. ಒಂದೇ ಒಂದು ರೂಪಾಯಿಯೂ ಕೈ ಬದಲಾಗದಂತೆ ಈ ಆರೈಕೆ ಪ್ರತಿ ರೋಗಿಗೂ ತಲುಪುವಂತೆ ಮಾಡಿದ ಶ್ರೀಯುತ ಹರೀಶ್ ಷಾ, ಅಧ್ಯಕ್ಷರು, ಹರೀಶ್ & ಬೀನಾ ಷಾ ಫೌಂಡೇಶನ್ ಹಾಗೂ ಇತರ ದಾನಿಗಳು, ಹಿತೈಷಿಗಳು ಮತ್ತು ಕಾರ್ಪೊರೇಟ್ ಪಾಲುದಾರರಿಗೆ ನಾನು ನಮ್ಮ ಆಳವಾದ ಕೃತಜ್ಞತೆಯನ್ನು ದಾಖಲಿಸುತ್ತೇನೆ. ಒಂದು ವರ್ಷ ಸರಿದಿದೆ, ಬಹಳ ದೊಡ್ಡ ಪಯಣ ಮುಂದಿದೆ ಮತ್ತು ಈ ಪಯಣದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುವಂತೆ ನಾವು ಸಮುದಾಯವನ್ನು ಆಹ್ವಾನಿಸುತ್ತೇವೆ” ಎಂದರು.

ಎಮ್ ಎಚ್ ಆರ್ ಸಿ ತನ್ನ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಹಾಸ್ಪೈಸ್, ವಿಶ್ರಾಂತಿ, ಪುನರ್ವಸತಿ, ಕುಟುಂಬ ಮತ್ತು ದುಃಖ ಶಮನ ಆರೈಕೆಯನ್ನು ಬಲಪಡಿಸುತ್ತಾ ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ಯೋಜಿಸಿದೆ. ಇದರ ಭರವಸೆ ಸರಳವಾಗಿ ಉಳಿದಿದೆ. ಗುಣಪಡಿಸುವಿಕೆಯು ಸಾಧ್ಯವಿಲ್ಲದಿದ್ದಾಗಲೂ ಸಂಕಟವನ್ನು ನಿವಾರಿಸಲು, ಕುಟುಂಬಗಳಿಗೆ ಬೆಂಬಲ ನೀಡಲು, ಜೀವನವನ್ನು ಸಂಭ್ರಮಿಸಲು ಮತ್ತು ಘನತೆಯನ್ನು ಕಾಪಾಡಲು ಇದು ಯಾವಾಗಲೂ ಸಾಧ್ಯವಿದೆ.

Previous Post

ಸೆಪ್ಟೆಂಬರ್ 25ರಂದು ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ..!

Next Post

ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

ರಾಯಚೂರಿನಲ್ಲಿ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ

21/09/2026
ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ಗೆ ಒಂದು ವರ್ಷ: 694 ರೋಗಿಗಳಿಗೆ ಉಚಿತ ಆರೈಕೆ

ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ಗೆ ಒಂದು ವರ್ಷ: 694 ರೋಗಿಗಳಿಗೆ ಉಚಿತ ಆರೈಕೆ

21/09/2026
ಸೆಪ್ಟೆಂಬರ್ 25ರಂದು ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ..!

ಸೆಪ್ಟೆಂಬರ್ 25ರಂದು ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ..!

21/09/2026
ಶಂಕರನಾರಾಯಣ: ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ದ್ರಾವಣ ಸೇವಿಸಿ ವ್ಯಕ್ತಿ ಮೃತ್ಯು

ಉಡುಪಿ: ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

21/09/2026

Recent News

imunify-bot-check