Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ

Dhrishya News by Dhrishya News
05/09/2026
in ಸುದ್ದಿಗಳು
0
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ
0
SHARES
1
VIEWS
Share on FacebookShare on Twitter

ಕಾರ್ಕಳ : ತನ್ನ ಜೀವನದ ಮೊದಲ ಅಕ್ಷರ ಪಾಠ ಕಲಿಸಿದ ಪ್ರೀತಿಯ ಶಿಕ್ಷಕಿಯನ್ನು ಮರೆಯದೆ, ಅವರ ಮನೆಗೆ ತೆರಳಿ ಗೌರವ ಸಲ್ಲಿಸುವ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅವರು ತಮ್ಮ ಗುರುಭಕ್ತಿಯನ್ನು ಮೆರೆದರು.

ಪುಲ್ಕೇರಿ ರಾಮಪ್ಪ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ತಮಗೆ ಮೊದಲ ಅಕ್ಷರ ಪಾಠ ಕಲಿಸಿದ ಮನೋರಮಾ ಟೀಚರ್ ಅವರ ಮನೆಗೆ ತೆರಳಿದ ಶುಭದರಾವ್ ಅವರು, ಶಾಲು, ಹಾರ, ಫಲಪುಷ್ಪ ಹಾಗೂ ಉಡುಗೊರೆ ನೀಡಿ ಆತ್ಮೀಯವಾಗಿ ಗೌರವಿಸಿದರು.

ವಿಶೇಷವೆಂದರೆ, ಬಾಲ್ಯದಲ್ಲಿ ಶಿಕ್ಷಕಿ ಕಲಿಸಿದ್ದ ಆ ಮೊದಲ ಅಕ್ಷರವನ್ನು ಮತ್ತೊಮ್ಮೆ ಅವರಿಂದಲೇ ಬರೆಸಿಕೊಂಡ ಕ್ಷಣ ಅತ್ಯಂತ ಭಾವುಕವಾಗಿತ್ತು. ಬಾಲ್ಯದ ನೆನಪುಗಳು ಮರುಕಳಿಸಿದ ಆ ಕ್ಷಣದಲ್ಲಿ ಗುರು-ಶಿಷ್ಯರ ಬಾಂಧವ್ಯದ ಭಾವನಾತ್ಮಕತೆ ಎಲ್ಲರ ಮನಮುಟ್ಟಿತು.

ತಮ್ಮ ವಿದ್ಯಾರ್ಥಿಯನ್ನು ಬಾಲ್ಯದಿಂದಲೇ ಪ್ರೀತಿಯಿಂದ ಕಂಡ ಮನೋರಮಾ ಟೀಚರ್ ಅವರು, ವರ್ಷಗಳ ನಂತರವೂ ಅದೇ ಆತ್ಮೀಯತೆಯಿಂದ ಅವರನ್ನು ಸ್ವಾಗತಿಸಿ, ಸ್ವತಃ ಅಡುಗೆ ಕೋಣೆಗೆ ತೆರಳಿ ಚಹಾ ತಯಾರಿಸಿ ಕುಡಿಸಿದರು.

ಅನಿರೀಕ್ಷಿತವಾಗಿ ಮನೆಗೆ ಬಂದ ತಮ್ಮ ವಿದ್ಯಾರ್ಥಿಯ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ಕಂಡ ಶಿಕ್ಷಕಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮನಬಿಚ್ಚಿ ಮಾತನಾಡಿದ ಅವರು, ಗುರು-ಶಿಷ್ಯರ ಸಂಬಂಧದ ಸೌಂದರ್ಯವನ್ನು ಮತ್ತೊಮ್ಮೆ ನೆನಪಿಸಿದರು.

ಅಕ್ಷರ ಕಲಿಸಿದ ಗುರುವನ್ನು ಜೀವನಪೂರ್ತಿ ಮರೆಯದಿರುವುದೇ ನಿಜವಾದ ಗುರುಭಕ್ತಿ.
ಮನೋರಮಾ ಟೀಚರ್ ಅವರಂತಹ ಶಿಕ್ಷಕರಿಗೆ ಸಲ್ಲಿಸಿದ ಈ ಗೌರವ, ಗುರು-ಶಿಷ್ಯರ ಅಮರ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

Previous Post

ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಉಭಯ ಶ್ರೀಪಾದರಿಂದ ಅರ್ಘ್ಯ ಪ್ರಧಾನ..!

Next Post

ಸೆ. 6 : ಉದ್ಯಾವರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸೆ. 6 : ಉದ್ಯಾವರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಸೆ. 6 : ಉದ್ಯಾವರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸೆ. 6 : ಉದ್ಯಾವರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಸೆ. 6 : ಉದ್ಯಾವರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

06/09/2026
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ

ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ

05/09/2026
ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಉಭಯ ಶ್ರೀಪಾದರಿಂದ ಅರ್ಘ್ಯ ಪ್ರಧಾನ..!

ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಉಭಯ ಶ್ರೀಪಾದರಿಂದ ಅರ್ಘ್ಯ ಪ್ರಧಾನ..!

05/09/2026
ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ಪ್ರಯುಕ್ತ ತರಕಾರಿ ಮುಹೂರ್ತ

05/09/2026

Recent News