ಕೊಂಜಾಡಿ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ ಇದರ 13ನೇ ವರ್ಷದ ನವರಾತ್ರಿ ಮಹೋತ್ಸವದ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕಲ್ಮಕ್ಕಿ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸತೀಶ್ ಚಂದ್ರ ಹೆಗಡೆ ಕೊಂಜಾಡಿ ಮೇಲ್ಮನೆ ಹಾಗೂ ಗೌರವ ಸಲಹೆಗಾರರಾಗಿ ಶರತ್ ಕುಮಾರ್ ಶೆಟ್ಟಿ ಕೊಂಜಾಡಿ ಸಂಪಿಗೆ ಮನೆ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಆನಂದ್ ಶೆಟ್ಟಿ ನೀರ್ಗಡಿಗೆ, ನಾರಾಯಣ ನಾಯ್ಕ ಕಲ್ಮರ್ಗಿ ಹಾಗೂ ಜಯರಾಮ ಕೊಠಾರಿ ಕಾಟ್ಕೇರಿ, ಕಾರ್ಯದರ್ಶಿಯಾಗಿ ಪ್ರತಾಪ್ ಕಿಬ್ಬೆಲು, ಉಪ ಕಾರ್ಯದರ್ಶಿಯಾಗಿ ಜಗನ್ನಾಥ ಕಲ್ಮರ್ಗಿ ಹಾಗೂ ಖಜಾಂಚಿಯಾಗಿ ದಿವಾಕರ ಶೆಟ್ಟಿ ಹಡಿಗಾರ ಮನೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕ್ರೀಡಾ ಕಾರ್ಯದರ್ಶಿಗಳಾಗಿ ರಾಜು ಕೊಂಜಾಡಿ, ರಜನೀಶ ಕೊಠಾರಿ ಕೊಂಜಾಡಿ, ರಾಮ ನಾಯ್ಕ ಗಂಟುಬಿಳು ಹಾಗೂ ನಾಗೇಶ್ ಆಚಾರ್ಯ ಕೊಂಜಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಾಂಸ್ಕೃತಿಕ ಸಮಿತಿಯಲ್ಲಿ ಸುದರ್ಶನ್ ಶೆಟ್ಟಿ ಆರ್ಡಿ, ರಾಘವೇಂದ್ರ ಆಚಾರ್ಯ, ಅಧ್ಯಾಪಕರು, ಆಳ್ವಾಸ್ ಕಾಲೇಜು ಮೂಡುಬಿದ್ರೆ, ಉದಯ ಜನನಿ ಆರ್ಟ್ಸ್ ಗೋಳಿಯಂಗಡಿ ಹಾಗೂ ದಯಾನಂದ ನಾಯ್ಕ ಕಬ್ಬಿನಾಲೆ ಅವರು ಇದ್ದಾರೆ.
ಇದೇ ವೇಳೆ ನವರಾತ್ರಿ ಮಹೋತ್ಸವ ಸಮಿತಿಗೆ ಉದಯ ಪ್ರಸಾದ್ ಆರ್ಡಿ, ಶೋಭಾ ಶೆಟ್ಟಿ ಕಲ್ಮಕ್ಕಿ, ಪ್ರವೀಣ್ ಶೆಟ್ಟಿ ಹಡಿಗಾರು ಮನೆ, ಶಿಲ್ಪಾ ಪ್ರಶಾಂತ್ ಶೆಟ್ಟಿ ತೊನ್ನಾಸೆ, ಗಣೇಶ ಕೊಠಾರಿ ತೊನ್ನಾಸೆ, ಆಶಾಲತಾ ಶೆಡ್ತಿ ಹಡಿಗಾರು ಮನೆ, ಸೂರ್ಯ ಶೆಟ್ಟಿ ಆರ್ಡಿ ಮೆಲ್ಬೆಟ್ಟು ಜೆಡ್ಡು, ಮೀರಾ ಪ್ರಶಾಂತ್ ಶೆಟ್ಟಿ ಆರ್ಡಿ, ಸತೀಶ್ ಕುಮಾರ್ ಶೆಟ್ಟಿ ಹಡಿಗಾರು ಮನೆ, ಸುದೀಪ್ ಹೆಗ್ಡೆ ಶೇಡಿಮನೆ, ಶಿವನಂದ ಕೊಠಾರಿ ಕಾಟ್ಕೇರಿ, ಸತೀಶ್ ಕುಮಾರ್ ಗುಡ್ಡೆಯಂಗಡಿ, ದಿನೇಶ್ ನಾಯ್ಕ ಬರೆಗದ್ದೆ, ದೇವು ನಾಯ್ಕ ತುಂಬಿನಕೆರೆ, ಮಿಥುನ್ ಶೆಟ್ಟಿ ಆರ್ಡಿ, ಪ್ರಕಾಶ್ ಚಂದ್ರ ಶೆಟ್ಟಿ ಹಡಿಗಾರು ಮನೆ (ಉಳ್ಳೂರು), ಸಂತೋಷ ಪೂಜಾರಿ ಆರ್ಡಿ ಮೆಲ್ಬೆಟ್ಟು ಜೆಡ್ಡು, ಆನಂದ ನಾಯ್ಕ ಗಂಟುಬೀಳು ಹೊಳೆಕಡು, ಗುಂಡನಾಯ್ಕ ಗಂಟುಬೀಳು, ಯಶೋದ ಕೃಷ್ಣ ಗಂಟುಬೀಳು, ಬಾಬಣ್ಣ ನಾಯ್ಕ ಹಾಡಿಮನೆ, ಸುರೇಶ್ ಹೆಗ್ಡೆ ಶೇಡಿಮನೆ, ಗಣಪತಿ ನಾಯ್ಕ ಆರ್ಡಿ, ಸದಾಶಿವ ಪೂಜಾರಿ ಹಳ್ಳನೀರು ಬೆಟ್ಟು, ರವಿ ನಾಯ್ಕ ಆರ್ಡಿ, ಬಸವ ಹಾಂಡ ಕೊಂಜಾಡಿ, ಸುನೀತಾ ರಂಜೀತ ಕೊಠಾರಿ, ಆಶಾ ಶೆಡ್ತಿ ಮಹಿಳಾ ಭಜನಾ ಮಂಡಳಿ ಹಾಗೂ ಕೃಷ್ಣ ನಾಯ್ಕ ಕೊಂಜಾಡಿ ಗುಡ್ಡೆ ಅವರನ್ನು ನೇಮಕ ಮಾಡಲಾಗಿದೆ.
ಊಟೋಪಚಾರ ಹಾಗೂ ನಗರ ಮೆರವಣಿಗೆ ಸಮಿತಿಯಲ್ಲಿ ಮಲ್ಲಿಕಾರ್ಜುನ ಯುವ ಸಂಘಟನೆ ಕಲ್ಮರ್ಗಿ, ರಿಕ್ಷಾಮಾಲಕರು ಚಾಲಕರ ಸಂಘ ಕೊಂಜಾಡಿ, ಮಲ್ಲಿಕಾರ್ಜುನ ಆರಾಧನಾ ಕೂಡುಕಟ್ಟು ಸಮಿತಿ (ರಿ.) ಕಲ್ಮರ್ಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಡಿ-ಕೊಂಜಾಡಿ-ಅಲ್ಬಾಡಿ, ಶ್ರಮದಾನ ತಂಡ ಕೊಂಜಾಡಿ ಹಾಗೂ ಕಾರ್ಮಿಕ ಸಂಘ (BMS) ಕೊಂಜಾಡಿ ಪಾಲ್ಗೊಳ್ಳಲಿವೆ.
ನವರಾತ್ರಿ ಮಹೋತ್ಸವವನ್ನು ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ಆಚರಿಸಲು ನೂತನ ಸಮಿತಿ ಸಿದ್ಧತೆಗಳನ್ನು ಕೈಗೊಳ್ಳಲಿದೆ.







