Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

Dhrishya News by Dhrishya News
28/08/2026
in ಸುದ್ದಿಗಳು
0
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ
0
SHARES
4
VIEWS
Share on FacebookShare on Twitter

ಮಣಿಪಾಲ, ಆಗಸ್ಟ್ 28, 2026 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಯು 4ನೇ ಯುಕೆ-ಭಾರತ ಹೆಲ್ತ್‌ಟೆಕ್ ಅಕ್ಸೆಲರೇಟರ್ 2026 ಕಾರ್ಯಕ್ರಮದಲ್ಲಿ ವಿಜೇತ ಆರು ಸಂಸ್ಥೆಗಳಿಗೆ ಹೃತ್ಪೂರ್ವಕವಾಗಿ ಅಭಿನಂದಿಸಿದೆ. ಈ ಅಕ್ಸೆಲರೇಟರ್ ಕಾರ್ಯಕ್ರಮವನ್ನು ಕಳೆದ ತಿಂಗಳು ಮಣಿಪಾಲದಲ್ಲಿ ಬ್ರಿಟಿಷ್ ಹೈ ಕಮಿಷನ್, ಹೆಲ್ತ್‌ಕೇರ್ ಯುಕೆ, ಯುನೈಟೆಡ್ ಕಿಂಗ್ಡಮ್ಮಿನ ವ್ಯವಹಾರ ಹಾಗೂ ವಾಣಿಜ್ಯ ಇಲಾಖೆ ಯುಕೆ ಡಿಪಾರ್ಟ್‌ಮೆಂಟ್ ಫಾರ್ ಬಿಸಿನೆಸ್ ಅಂಡ್ ಟ್ರೇಡ್ ಹಾಗೂ ಭುವನೇಶ್ವರ ಸಿಟಿ ನಾಲೆಡ್ಜ್ ಇನೋವೇಶನ್ ಕ್ಲಸ್ಟರ್ (ಬಿಸಿಕೆಐಸಿ) ಸಹಯೋಗದಲ್ಲಿ ಮಾಹೆ ಆಯೋಜಿಸಿತ್ತು.

ಇದೇ ಜುಲೈ 22ರಿಂದ 24ರವರೆಗೆ ಮಣಿಪಾಲ ಕ್ಯಾಂಪಸ್‌ನಲ್ಲಿ ನಡೆದ ‘4ನೇ ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026’ ಕಾರ್ಯಕ್ರಮವು, ಭಾರತೀಯ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಿಗಳು ಮತ್ತು ಯುಕೆಯ ತಜ್ಞರು ಒಂದೆಡೆ ಸೇರಲು ವೇದಿಕೆಯನ್ನೊದಗಿಸಿದ್ದು, ಔದ್ಯಮಿಕ ಸಹಭಾಗಿತ್ವವನ್ನು ಉತ್ತೇಜಿಸುವುದು, ಮಾರುಕಟ್ಟೆಯ ಲಭ್ಯತೆಯನ್ನು ಬಲಪಡಿಸುವುದು ಹಾಗೂ ನವೀನ ಆರೋಗ್ಯ ಸೇವಾ ಪರಿಹಾರಗಳ ಅಳವಡಿಕೆಯನ್ನು ತ್ವರಿತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು. ಯುಕೆ–ಭಾರತ ಸಮಗ್ರ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದದ (ಸಿಇಟಿಎ) ಅನುಷ್ಠಾನದ ಹಿನ್ನೆಲೆಯಲ್ಲಿ ಈ ಉಪಕ್ರಮವು ಮಹತ್ವ ಪಡೆದುಕೊಂಡಿದ್ದು, ಈ ಒಪ್ಪಂದವು ಉಭಯ ದೇಶಗಳ ನಡುವಿನ ವ್ಯಾಪಾರ, ನವೋದ್ಯಮ ಮತ್ತು ಗಡಿಯಾಚೆಗಿನ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಈ ಕಾರ್ಯಕ್ರಮದಲ್ಲಿ ಮನ್ನಣೆಗಳಿಸಿದ ಆರು ಸಂಸ್ಥೆಗಳೆಂದರೆ,
Azooka Labs Pvt. Ltd., ಬೆಂಗಳೂರು
Bioscan Research Private Limited ಅಹಮದಾಬಾದ್
Turtle Shell Technologies Pvt. Ltd. (Dozee), ಬೆಂಗಳೂರು
EZERX Health Tech Pvt. Ltd., ಭುವನೇಶ್ವರ
OrthoHeal Pvt. Ltd., ವಡೋದರಾ
TatvaCare, ಅಹಮದಾಬಾದ್
ಮನ್ನಣೆಪಡೆದ ಸಂಸ್ಥೆಗಳನ್ನು ಗುರುವಾರ ಬೆಂಗಳೂರಿನಲ್ಲಿ ನಡೆದ ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ MAHEಯ ಕುಲಪತಿ ಡಾ. ಶರತ್ ಕೆ. ರಾವ್ ಅಭಿನಂದಿಸಿದರು. ಯುಕೆ ಸರ್ಕಾರ ಮತ್ತು ಬ್ರಿಟಿಷ್ ರಾಜತಾಂತ್ರಿಕ ನಿಯೋಗಗಳ ಹಿರಿಯ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಇವತ್ತಿನ ದಿನದ ಸಂಕೀರ್ಣ ಆರೋಗ್ಯ ಸವಾಲುಗಳನ್ನು ಎದುರಿಸಲು ನವೋದ್ಯಮಿಗಳು, ಆರೋಗ್ಯ ಕ್ಷೇತ್ರದ ತಜ್ಞರು, ಉದ್ಯಮ ಮತ್ತು ಸರ್ಕಾರವನ್ನು ಒಂದೆಡೆ ಸೇರುವ ಅಗತ್ಯವಿದೆ. ಯುಕೆ–ಭಾರತ ಹೆಲ್ತ್‌ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮವು ಈ ಆಶಯವನ್ನು ಎತ್ತಿಹಿಡಿದಿದೆ. ಈ ಉಪಕ್ರಮವನ್ನು ಬೆಂಬಲಿಸುವಲ್ಲಿ, ಹಾಗೂ ಭಾರತೀಯ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳು ಜಾಗತಿಕ ಆರೋಗ್ಯ ಸೇವಾ ವ್ಯವಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ರಚನಾತ್ಮಕ ಹೆಜ್ಜೆಯನ್ನಿರಿಸುತ್ತಿರುವುದಕ್ಕೆ ಈ ಕಾರ್ಯಕ್ರಮ ದೃಷ್ಟಾಂತವಾಗಿದೆ. ಇಂಥ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಮಾಹೆ ಅಭಿಮಾನ ಪಡುತ್ತದೆ.” ಎಂದು ಹೇಳಿದರು.

ಮಾಹೆ ಪ್ರಶಸ್ತಿ ಪುರಸ್ಕೃತರಿಗೆ ಅವರ ಸಾಧನೆಗಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಈ ವಿಶೇಷ ಕಾರ್ಯಯೋಜನೆಯಿಂದ ಹೊರಹೊಮ್ಮಲಿರುವ ಸಹಯೋಗಗಳು, ನವೀನ ಆವಿಷ್ಕಾರಗಳು ಹಾಗೂ ಆರೋಗ್ಯ ಸೇವಾ ಪರಿಹಾರಗಳು ಭಾರತ, ಯುಕೆ ಹಾಗೂ ಜಾಗತಿಕ ಮಟ್ಟದಲ್ಲಿ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವ ಸಾಮರ್ಥ್ಯ ಹೊಂದಿವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತದೆ.

Previous Post

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

28/08/2026
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

28/08/2026
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಸಮುದ್ರ ಪೂಜೆ..!

ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಸಮುದ್ರ ಪೂಜೆ..!

28/08/2026
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಪ್ರಣವ್ ಹೆಗ್ಡೆ ಅವರ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಪ್ರಣವ್ ಹೆಗ್ಡೆ ಅವರ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ

28/08/2026

Recent News