ಉಡುಪಿ : ಉಡುಪಿಯಲ್ಲಿ ಆಗಸ್ಟ್ 27ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಕಲ್ಸಂಕದ ಧರಣಿ ಆರ್ಕೇಡ್‌ನಲ್ಲಿರುವ ಡಿಬಿಎಸ್ ಬ್ಯಾಂಕ್‌ನಲ್ಲಿ ಸಂದರ್ಶನ ಆಯೋಜಿಸಲಾಗಿದೆ.
ರಿಲೇಷನ್‌ಶಿಪ್ ಮ್ಯಾನೇಜರ್ ಹಾಗೂ ರಿಲೇಷನ್‌ಶಿಪ್ ಆಫೀಸರ್ ಹುದ್ದೆಗಳಿಗೆ ಪಿಯುಸಿ, ಡಿಪ್ಲೊಮಾ ಮತ್ತು ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಅಂಕಪಟ್ಟಿ, ರೆಸ್ಯೂಮ್ ಅಥವಾ ಸಿವಿ ಹಾಗೂ ಆಧಾರ್ ಕಾರ್ಡ್‌ನ್ನು ತರಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ತಿಳಿಸಿದೆ.






