Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೋಟಕ್ ಬಿಜ್‌ ಲ್ಯಾಬ್ಸ್ 3ನೇ ಆವೃತ್ತಿ ದೇಶಾದ್ಯಂತ ವಿಸ್ತರಣೆ: ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ

ಐಐಎಂ ಕಲ್ಕತ್ತಾ ಇನ್ನೋವೇಷನ್ ಪಾರ್ಕ್, ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಕೋಟಕ್‌ ನ ಈ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಗೆ ಇನ್ಕ್ಯುಬೇಟರ್ ಪಾಲುದಾರನಾಗಿ ಕೈಜೋಡಿಸಿದೆ

Dhrishya News by Dhrishya News
25/08/2026
in ಸುದ್ದಿಗಳು
0
ಕೋಟಕ್ ಬಿಜ್‌ ಲ್ಯಾಬ್ಸ್ 3ನೇ ಆವೃತ್ತಿ ದೇಶಾದ್ಯಂತ ವಿಸ್ತರಣೆ: ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ
0
SHARES
2
VIEWS
Share on FacebookShare on Twitter

ಬೆಂಗಳೂರು, ಆಗಸ್ಟ್ 25, 2026: ಕೋಟಕ್ ಮಹೀಂದ್ರಾ ಬ್ಯಾಂಕ್ (ಕೆಎಂಬಿಎಲ್/ ಕೋಟಕ್) ಸಂಸ್ಥೆಯು ಆರಂಭಿಕ ಹಂತದ ಆದಾಯ ಗಳಿಸುತ್ತಿರುವ ಸ್ಟಾರ್ಟ್‌ ಅಪ್‌ ಗಳಿಗಾಗಿ ತನ್ನ ಪ್ರಮುಖ ಸಾಮಾಜಿಕ ಹೊಣೆಗಾರಿಕೆ ಯೋಜನೆಯಾದ ಕೋಟಕ್ ಬಿಜ್‌ ಲ್ಯಾಬ್ಸ್ ಆಕ್ಸಲರೇಷನ್ ಕಾರ್ಯಕ್ರಮದ 3ನೇ ಆವೃತ್ತಿಯನ್ನು ಇಂದು ಘೋಷಿಸಿದೆ. ಈ 3ನೇ ಆವೃತ್ತಿಯು 2026ರ ಆಗಸ್ಟ್‌ ನಿಂದ 2027ರ ಅಕ್ಟೋಬರ್‌ ವರೆಗೆ ನಡೆಯಲಿದ್ದು, ಸೂಕ್ತ ಮಾರ್ಗದರ್ಶನ, ಪರಿಸರ ವ್ಯವಸ್ಥೆಯ ಪ್ರವೇಶಾವಕಾಶ ಮತ್ತು ಉತ್ತೇಜಕ ಧನಸಹಾಯದ ಮೂಲಕ ದೇಶಾದ್ಯಂತ ನೂರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಬೆಂಬಲ ನೀಡಲಿದೆ.

3ನೇ ಆವೃತ್ತಿಯು ಐಐಎಂ ಕಲ್ಕತ್ತಾ ಇನ್ನೋವೇಷನ್ ಪಾರ್ಕ್, ಸಿಐಐಇ ಇನಿಶಿಯೇಟಿವ್ಸ್ (ಐಐಎಂ ಅಹಮದಾಬಾದ್ ವೆಂಚರ್ಸ್), ಐಐಎಂ ಬೆಂಗಳೂರಿನ ಎನ್‌ಎಸ್‌ಆರ್‌ಸಿಇಎಲ್, ಟಿ-ಹಬ್ ಮತ್ತು ಐಐಟಿ ದೆಹಲಿಯ ಎಫ್‌ಐಟಿಟಿ ಸೇರಿ ದೇಶದ ಐದು ಪ್ರಮುಖ ಪೋಷಣಾ ಪಾಲುದಾರರನ್ನು ಹೊಂದಿದೆ.

ಆರಂಭವಾದ ದಿನದಿಂದಲೂ ಈ ಆಕ್ಸಲರೇಷನ್ ಕಾರ್ಯಕ್ರಮಕ್ಕೆ ದೇಶಾದ್ಯಂತದ ಸ್ಟಾರ್ಟ್‌ ಅಪ್‌ ಗಳಿಂದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈವರೆಗೆ ನೂರ ಇಪ್ಪತ್ತೈದಕ್ಕೂ ಹೆಚ್ಚು ಉತ್ತಮ ಸಾಮರ್ಥ್ಯದ ಸಂಸ್ಥೆಗಳಿಗೆ ಆಕ್ಸಲರೇಷನ್ ಬೆಂಬಲ ನೀಡಲಾಗಿದ್ದು, ನೂರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಅನುದಾನ ನೀಡುವ ಮೂಲಕ ಸಂಸ್ಥಾಪಕರು ತಮ್ಮ ನವೀನ ಹಾಗೂ ಸಮಾಜಮುಖಿ ಪರಿಹಾರಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವು ಒದಗಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ-ಸಾಮಾಜಿಕ ಆಡಳಿತ ವಿಭಾಗದ ಮುಖ್ಯಸ್ಥ ಹಿಮಾಂಶು ನಿವ್ಸರ್ಕರ್ ಅವರು, “ಉತ್ತಮ ಆಲೋಚನೆಗಳನ್ನು ಹೊಂದಿದ್ದರೂ ಸೂಕ್ತ ಬೆಂಬಲ ವ್ಯವಸ್ಥೆಯಿಲ್ಲದ ಪ್ರದೇಶಗಳ ಉದ್ಯಮಿಗಳಿಗೆ ಈ 3ನೇ ಆವೃತ್ತಿಯ ಮೂಲಕ ಉನ್ನತ ಮಟ್ಟದ ಬೆಂಬಲ ದೊರೆಯಲಿದೆ. ಐಐಎಂ ಕಲ್ಕತ್ತಾ ಇನ್ನೋವೇಷನ್ ಪಾರ್ಕ್ ಜೊತೆಗಿನ ನಮ್ಮ ಪಾಲುದಾರಿಕೆಯು ಪೂರ್ವ ಮತ್ತು ಈಶಾನ್ಯ ಭಾರತದಾದ್ಯಂತ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲಿದ್ದು, ಕೋಟಕ್ ಬಿಜ್‌ಲ್ಯಾಬ್ಸ್ ಅನ್ನು ಪ್ರಾದೇಶಿಕ ಸ್ಟಾರ್ಟ್‌ಅಪ್ ಕೇಂದ್ರಗಳ ವಿಶಾಲ ಜಾಲದೊಂದಿಗೆ ಜೋಡಿಸುತ್ತದೆ. ಭಾಗವಹಿಸುವ ಪ್ರತಿಯೊಂದು ಸ್ಟಾರ್ಟ್‌ಅಪ್ ತನ್ನ ಮುಂದಿನ ಹಂತದ ಬೆಳವಣಿಗೆಗೆ ಅಗತ್ಯವಿರುವ ಮಾರ್ಗದರ್ಶನ, ಸಂಪರ್ಕ ಜಾಲ ಮತ್ತು ಆರ್ಥಿಕ ನೆರವನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ತಿಳಿಸಿದರು.

ಈ ಬಾರಿಯ 3ನೇ ಆವೃತ್ತಿಯು ಕೃಷಿ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಸುಸ್ಥಿರತೆ, ಆರೋಗ್ಯ ತಂತ್ರಜ್ಞಾನ, ಶಿಕ್ಷಣ ತಂತ್ರಜ್ಞಾನ, ಸ್ವಚ್ಛ ಇಂಧನ, ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಉತ್ಪಾದನಾ ಕ್ಷೇತ್ರಗಳ ಮೇಲೆ ಪ್ರಮುಖವಾಗಿ ಗಮನ ಹರಿಸಲಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಿದೆ. ಈ ಐದು ಪೋಷಣಾ ಕೇಂದ್ರಗಳ ಮೂಲಕ ಭಾಗವಹಿಸುವ ಸ್ಟಾರ್ಟ್‌ಅಪ್‌ಗಳಿಗೆ ಉದ್ಯಮ ತಜ್ಞರ ಮಾರ್ಗದರ್ಶನ, ಸಂಪರ್ಕಗಳು ಮತ್ತು ಬೆಳವಣಿಗೆಗೆ ಪೂರಕ ಬೆಂಬಲ ಸಿಗಲಿದೆ. ಆಯಾ ಪೋಷಣಾ ಸಂಸ್ಥೆಗಳೇ ತಂಡಗಳ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆಗಳನ್ನು ನಿರ್ವಹಿಸಲಿವೆ.

ಕೋಟಕ್ ಬಿಜ್‌ ಲ್ಯಾಬ್ಸ್ ಆಕ್ಸಲರೇಷನ್ ಕಾರ್ಯಕ್ರಮವು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯ ಒಂದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಾಗಿದೆ.

ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ (ಡಿಪಿಐಐಟಿ) ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿಂದ 3ನೇ ಆವೃತ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಸ್ಟಾರ್ಟ್‌ಅಪ್‌ಗಳು ಕೋಟಕ್ ಬಿಜ್‌ಲ್ಯಾಬ್ಸ್ 3ನೇ ಆವೃತ್ತಿಯ ಅಧಿಕೃತ ಅರ್ಜಿ ಪುಟದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜಾಲತಾಣದ ಕೊಂಡಿ: https://kotakbizlabs.accubate.app/ext/form/24005/1/apply

Previous Post

ಕೃಷ್ಣ ಮಠಕ್ಕೆ ರಾಜ್ಯಸಭಾ ಸದಸ್ಯ ಪ್ರೊ. ನಾಗರಾಜ್ ಭೇಟಿ; ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕಾರ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೋಟಕ್ ಬಿಜ್‌ ಲ್ಯಾಬ್ಸ್ 3ನೇ ಆವೃತ್ತಿ ದೇಶಾದ್ಯಂತ ವಿಸ್ತರಣೆ: ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ

ಕೋಟಕ್ ಬಿಜ್‌ ಲ್ಯಾಬ್ಸ್ 3ನೇ ಆವೃತ್ತಿ ದೇಶಾದ್ಯಂತ ವಿಸ್ತರಣೆ: ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ

25/08/2026
ಕೃಷ್ಣ ಮಠಕ್ಕೆ ರಾಜ್ಯಸಭಾ ಸದಸ್ಯ ಪ್ರೊ. ನಾಗರಾಜ್ ಭೇಟಿ; ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕಾರ

ಕೃಷ್ಣ ಮಠಕ್ಕೆ ರಾಜ್ಯಸಭಾ ಸದಸ್ಯ ಪ್ರೊ. ನಾಗರಾಜ್ ಭೇಟಿ; ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕಾರ

25/08/2026
ನಿವೃತ್ತ ಕಂದಾಯ ನಿರೀಕ್ಷಕ ಶಿವರಾಮ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

ನಿವೃತ್ತ ಕಂದಾಯ ನಿರೀಕ್ಷಕ ಶಿವರಾಮ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

25/08/2026
ಮಲ್ಪೆ ಬೋಟಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಆರೋಪಿಯ ಬಂಧನ..!

ಮಲ್ಪೆ ಬೋಟಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಆರೋಪಿಯ ಬಂಧನ..!

25/08/2026

Recent News