ಉಡುಪಿ: ನಿದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಮಂಚದಿಂದ ಉರಳಿಬಿದ್ದು, ತಲೆಭಾಗಕ್ಕೆ ಗಾಯಗೊಂಡು ಸಾವನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರು ಉಡುಪಿಯ ಕೋರ್ಟ್ ಎದುರಿರುವ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೃತರನ್ನು ರಾಮರಥನ್ ಅಡ್ಯಂತಾಯ(64 ವರ್ಷ) ಎಂದು ಗುರುತಿಸಲಾಗಿದೆ. ದುರಂತದ ವಿಷಯವನ್ನು ತಡವಾಗಿ ತಿಳಿದ ಸಂಬಂಧಿಕರು, ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳದಲ್ಲಿದ್ದು, ನಗರ ಪೋಲಿಸ್ ಠಾಣೆಯ ಎಸ್.ಐ ಭರತೇಶ್, ಮುಖ್ಯ ಆರಕ್ಷಕರಾದ ಸಂತೋಷ್, ಬಶೀರ್, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು.
ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಿ, ಇಲಾಖೆಗೆ ನೆರವಾದರು.






