Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ

ವಂದೇ ಮಾತರಂ ಗೀತೆಗೆ ರಾಷ್ಟ್ರ ಮಟ್ಟದ ಪ್ರಮುಖ್ಯತೆ ಸಿಕ್ಕಿರುವುದು ಸಾರ್ಥಕ ತಂದಿದೆ : ಸಂಸದ ಕೋಟ

Dhrishya News by Dhrishya News
16/07/2026
in ಸುದ್ದಿಗಳು
0
ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ
0
SHARES
4
VIEWS
Share on FacebookShare on Twitter

ಉಡುಪಿ : ವಂದೇ ಮಾತರಂ ದೇಶದಲ್ಲಿ ನಡೆದು ಬಂದ ಕ್ಷಣಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ವಂದೇ ಮಾತರಂ ಗೆ ರಾಷ್ಟ್ರಗೀತೆ ಸಮನಾದ ಪ್ರಾಮುಖ್ಯತೆ ಸಿಕ್ಕಿರುವುದು ಸಂತೋಷ ತರೋ ವಿಚಾರ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ವಂದೇ ಮಾತರಂನ 150 ರ ಸಂಭ್ರಮಾಚರಣೆ ಸಂದರ್ಭದಲ್ಲಿ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಮೂಲಕ ಹಮ್ಮಿಕೊಂಡ ಯುವ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಸಂಪೂರ್ಣ ದೇಶ ವಂದೇ ಮಾತರಂಗೆ ತೆರೆದು ಕೊಂಡಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬಾರದು ಎಂಬ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಇದೀಗ ದೇಶಾದ್ಯಂತ ಸುಮಾರು 20 ಲಕ್ಷ ಮಂದಿ ಸೇರುವ 4,000 ಕಲಾವಿದರ ಭಾಗವಹಿಸುವಿಕೆಯಲ್ಲಿ ಈ ಕಾರ್ಯಕ್ರಮ ಏಕಕಾಲದಲ್ಲಿ ನಡೆಯುತ್ತಿದೆ ಎಂದ ಅವರು ಉಡುಪಿಗೆ ಈ ಕಾರ್ಯಕ್ರಮವನ್ನು ತಂದ ರಂಗಭೂಮಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಮಣಿಪಾಲ ಮಾಹೆಯ ಸಹಕುಲಾದಿಪತಿ, ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸಲು ರಂಗಭೂಮಿ ಉಡುಪಿ ಸಂಸ್ಥೆ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇದು ಇಂದಿನ ಅಗತ್ಯತೆಯಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.

ವಂದೇ ಮಾತರಂ ಬಗ್ಗೆ ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ ಭಾರತೀಯ ರಂಗಭೂಮಿ ಮೂಲಕ ದೇಶಪ್ರೇಮ ಸಂಸ್ಕೃತಿ ಪ್ರೀತಿ ಬೆಸೆಯುವ ಸಲುವಾಗಿ ಭಾರತದಾದ್ಯಂತ 150 ರಂಗ ಪ್ರಯೋಗ ಆಯೋಜನೆಗೊಂಡಿದೆ. ಭಾರತೀಯ ರಂಗಭೂಮಿ ಮತ್ತು ಸಾಹಿತ್ಯಕ್ಕೆ ಭಾರತೀಯ ದರ್ಶನ ಕಾಣಿಕೆ ನೀಡಿರುವ ಕಾಳಿದಾಸನ ಜಯಂತಿಯೂ ಇದರಲ್ಲಿ ಸೇರ್ಪಡೆಗೊಂಡಿದೆ. 39 ಕ್ಕೂ ಹೆಚ್ಚು ಭಾಷೆ ಉಪಭಾಷೆಗಳಲ್ಲಿ ರಂಗ ಸಾಧ್ಯತೆ ತೆರೆದುಕೊಳ್ಳಲಿದೆ. ಎಲ್ಲ ರಾಜ್ಯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಒಂದು ದೇಶ ಒಂದು ಆಚರಣೆ ಎಂಬ ಭಾವೈಕ್ಯ ಸಾರಲು ಈ ರಂಗಮಹೋತ್ಸವ ಸಜ್ಜಾಗಿದೆ. 4 ಸಾವಿರ ರಂಗಕರ್ಮಿಗಳು ಪಾಲ್ಗೊಳ್ಳುತ್ತಿರುವ ಈ ಮಹೋತ್ಸವದಲ್ಲಿ ದೇಶಾದ್ಯಂತ 150 ಕ್ಕೂ ಹೆಚ್ಚು ಸಂಸ್ಥೆಗಳು ಇದರ ಸಹಭಾಗಿತ್ವ ತೆಗೆದುಕೊಂಡಿವೆ ಎಂದರು.

ಈ ಸಂದರ್ಭದಲ್ಲಿ ಮಹಾಕವಿ ಕಾಳಿದಾಸ ಜಯಂತಿ ಬಗ್ಗೆ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಹಾಗೂ ಚಿಂತಕ ಪ್ರಭಾಕರ್ ಜಿ.ಪಿ. ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲೆಯ ಶಾಸಕರುಗಳಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಡಿ, ಗುರುರಾಜ ಗಂಟಿಹೊಳೆ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಹೆಯ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ. ಗಾಯತ್ರಿ ಗಿರಿಧರ್ ಪೈ, ಡಾ. ದೇವಿದಾಸ ನಾಯಕ್, ಡಾ.ವಿಶ್ವನಾಥ ಪೈ , ಡಾ. ಮಾಲತಿ ದೇವಿ , ರಂಗಭೂಮಿಯ ಪದಾಧಿಕಾರಿಗಳು, ಜಿಲ್ಲೆಯ ರಂಗ ತಂಡಗಳ, ವಿವಿಧ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಯುವ ರಂಗೋತ್ಸವ ಕಾರ್ಯಕ್ರಮದಡಿ ಸ್ವಾತಂತ್ರ್ಯ ಶರದಿ ನಾಟಕ ಪ್ರಸ್ತುತಗೊಂಡಿತು.

Previous Post

ಭಾರತದ ಮಹಿಳಾ ಉದ್ಯಮಿಗಳ ಕನಸಿಗೆ ಮತ್ತಷ್ಟು ಉತ್ತೇಜನ: ಕೋಟಕ್ ಬಿಝ್ ಲ್ಯಾಬ್ಸ್ ಮತ್ತು ಎನ್ಎಸ್ಆರ್ ಸಿಇಎಲ್ ನಿಂದ ಮಹಿಳಾ ನವೋದ್ಯಮ ಯೋಜನೆಯ ಮುಂದಿನ ಆವೃತ್ತಿ ಘೋಷಣೆ

Next Post

ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆ: ಉದಯ ಶೆಟ್ಟಿ ಮುನಿಯಾಲು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆ: ಉದಯ ಶೆಟ್ಟಿ ಮುನಿಯಾಲು

ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆ: ಉದಯ ಶೆಟ್ಟಿ ಮುನಿಯಾಲು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆ: ಉದಯ ಶೆಟ್ಟಿ ಮುನಿಯಾಲು

ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವ ಮಹತ್ವದ ಹೆಜ್ಜೆ: ಉದಯ ಶೆಟ್ಟಿ ಮುನಿಯಾಲು

16/07/2026
ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ

ರಂಗಭೂಮಿ ಉಡುಪಿ ವತಿಯಿಂದ ವಂದೇ ಮಾತರಂ 150 ನೇ ಸಂಭ್ರಮಾಚರಣೆ

16/07/2026
ಭಾರತದ ಮಹಿಳಾ ಉದ್ಯಮಿಗಳ ಕನಸಿಗೆ ಮತ್ತಷ್ಟು ಉತ್ತೇಜನ: ಕೋಟಕ್ ಬಿಝ್ ಲ್ಯಾಬ್ಸ್ ಮತ್ತು ಎನ್ಎಸ್ಆರ್ ಸಿಇಎಲ್ ನಿಂದ ಮಹಿಳಾ ನವೋದ್ಯಮ ಯೋಜನೆಯ ಮುಂದಿನ ಆವೃತ್ತಿ ಘೋಷಣೆ

ಭಾರತದ ಮಹಿಳಾ ಉದ್ಯಮಿಗಳ ಕನಸಿಗೆ ಮತ್ತಷ್ಟು ಉತ್ತೇಜನ: ಕೋಟಕ್ ಬಿಝ್ ಲ್ಯಾಬ್ಸ್ ಮತ್ತು ಎನ್ಎಸ್ಆರ್ ಸಿಇಎಲ್ ನಿಂದ ಮಹಿಳಾ ನವೋದ್ಯಮ ಯೋಜನೆಯ ಮುಂದಿನ ಆವೃತ್ತಿ ಘೋಷಣೆ

15/07/2026
ಮಾಹೆ ಹಾಗೂ ಧ್ರುವ ಸ್ಪೇಸ್ ನಡುವೆ ಒಪ್ಪಂದ: ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ

ಮಾಹೆ ಹಾಗೂ ಧ್ರುವ ಸ್ಪೇಸ್ ನಡುವೆ ಒಪ್ಪಂದ: ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ

15/07/2026

Recent News