ಕಾರ್ಕಳದ ಮಾಜಿ ಶಾಸಕರು, ಕಾಂಗ್ರೆಸ್ ನಾಯಕರಾದ ದಿವಂಗತ ಗೋಪಾಲ ಭಂಡಾರಿಯವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯು ಕಾರ್ಕಳ ದೇವಾಡಿಗ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮವು ನಡೆಯಿತು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗೋಪಾಲ ಭಂಡಾರಿಯವರ ಅಭಿಮಾನಿಗಳು, ಹಿತೈಷಿಗಳು ಶಿಭಿರದಲ್ಲಿ ರಕ್ತದಾನವನ್ನು ಮಾಡಿದರು.
ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗೋಪಾಲ ಭಂಡಾರಿಯವರು ಎರಡು ಅವಧಿಗೆ ಶಾಸಕರಾಗಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಶುದ್ದಹಸ್ತರಾಗಿದ್ದವರು, ಅವರ ಆದರ್ಶ ನಮಗೆ ಸದಾ ಪ್ರೇರಣೆಯಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ ಗೋಪಾಲ ಭಂಡಾರಿಯವರ ತೋರಿಸಿದ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ನೀಡುವ ಬಹುದೊಡ್ಡ ಗೌರವ ಎಂದರು.
ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ ಅವರು ತಮ್ಮ ಮಾತುಗಳಲ್ಲಿ ಗೋಪಾಲ ಭಂಡಾರಿಯವರ ಆಡಳಿತ ನೈಪುಣ್ಯತೆಯನ್ನು ನೆನೆದರು. ಹಿರಿಯ ಕಾಂಗ್ರೆಸಿಗ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಅವರು ಮಾತನಾಡಿ ದಿ. ಗೋಪಾಲ ಭಂಡಾರಿಯವರ ಆದರ್ಶಗಳನ್ನು ಕಾರ್ಕಳದ ಮೂಲೆ ಮೂಲೆಗೂ ಬಿತ್ತುವ ಕೆಸಲವನ್ನು ನಾವು ಮಾಡಬೇಕಿದೆ ಎಂದರು. ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್ ನುಡಿ ನಮನಗಳನ್ನು ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗೋಪಾಲ ಭಂಡಾರಿಯವರ ಅಭಿಮಾನಿಗಳು, ಹಿತೈಷಿಗಳು ಶಿಭಿರದಲ್ಲಿ ಭಾಗವಹಿಸಿ ಒಟ್ಟು 56 ಯೂನಿಟ್ ರಕ್ತದಾನವನ್ನು ಮಾಡಿದರು. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಶಿಕ್ಷಣಕ್ಕೆ ಸಹಾಯ ಧನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಶೇಖರ ಮಡಿವಾಳ, ಸಿರಿಯಣ್ಣ ಶೆಟ್ಟಿ, ಸುಭಿತ್ ಎನ್.ಆರ್, ಅಜಿತ್ ಹೆಗ್ಡೆ ಮಾಳ, ಕೃಷ್ಣ ಶೆಟ್ಟಿ ನಲ್ಲೂರು ಸುನಿಲ್ ಭಂಡಾರಿ, ಉದಯ ಶೆಟ್ಟಿ ಕುಕುಂದೂರು, ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ಅಶ್ಪಕ್ ಅಹ್ಮದ್, ಶೇಖ್ ಶಬೀರ್ ಮಿಯ್ಯಾರು, ಶ್ರೀಮತಿ ಭಾನು ಬಾಸ್ಕರ ಪೂಜಾರಿ, ಶ್ರೀಮತಿ ಅನಿತಾ ಡಿಸೋಜ, ಸುಧಾಕರ ಶೆಟ್ಟಿ ಮುಡಾರು, ರೀನಾ ಜೂಲಿಯೆಟ್ ಡಿಸೋಜ, ರಾಜೇಂದ್ರ ದೇವಾಡಿಗ, ಸೂರಜ್ ಶೆಟ್ಟಿ ನಕ್ರೆ, ಶೋಭಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಭಾಕರ ಬಂಗೇರ ಸ್ವಾಗತಿಸಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಧನ್ಯವಾದವಿತ್ತರು. ಬ್ಲಾಕ್ ಉಪಾದ್ಯಕ್ಷರಾದ ಜಾರ್ಜ್ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.







