Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆಯಲ್ಲಿ ‘ರೈತರ ಬೆಳೆ ಸಮೀಕ್ಷೆ 2026-27’ ಕುರಿತು ತರಬೇತಿ ಹಾಗೂ ಮೊಬೈಲ್ ಆ್ಯಪ್ ಬಳಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ.

Dhrishya News by Dhrishya News
02/07/2026
in ಸುದ್ದಿಗಳು
0
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆಯಲ್ಲಿ ‘ರೈತರ ಬೆಳೆ ಸಮೀಕ್ಷೆ 2026-27’ ಕುರಿತು ತರಬೇತಿ ಹಾಗೂ ಮೊಬೈಲ್ ಆ್ಯಪ್ ಬಳಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ.
0
SHARES
27
VIEWS
Share on FacebookShare on Twitter

ಬ್ರಹ್ಮಾವರ :ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆಯ ಪ್ರಧಾನ ಕಛೇರಿಯಲ್ಲಿ, ಸಂಸ್ಥೆಯು ಆಯ್ಕೆ ಮಾಡಿಕೊಂಡಿರುವ ಆಸಕ್ತ ಯುವಕ ಯುವತಿಯರಿಗೆ ಮೊಬೈಲ್ ಆ್ಯಪ್ ಮೂಲಕ ನಿಖರವಾದ ಬೆಳೆ ವಿವರಗಳನ್ನು ದಾಖಲಿಸುವ ಬಗ್ಗೆ ತರಬೇತಿ ಕಾರ್ಯಕ್ರಮವನ್ನು 27-06-2026 ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಮಹತ್ವದ ಕಾರ್ಯಕ್ರಮವನ್ನು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಇವರ ಅಧ್ಯಕ್ಷತೆಯಲ್ಲಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಕ್ಷಮಾ ಪಾಟೀಲ್ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ನಿಧೀಶ್ ಹೊಳ್ಳ ಅವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ TAPCMS ನ ನಿರ್ದೇಶಕರಾದ ಶ್ರೀ ಶ್ರೀಧರ್ ವಿ ಶೆಟ್ಟಿ ಆರೂರು, ಸಂಘದ ನಿರ್ದೇಶಕರು, ಆಡಳಿತ ನಿರ್ದೇಶಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕರ್ನಾಟಕ ಸರ್ಕಾರವು ರೈತರ ಅನುಕೂಲಕ್ಕಾಗಿ ಬಿಡುಗಡೆ ಮಾಡಿರುವ ಅಧಿಕೃತ ‘ರೈತರ ಬೆಳೆ ಸಮೀಕ್ಷೆ 2026-27’ ಮೊಬೈಲ್ ಆ್ಯಪ್ ಅನ್ನು ರೈತರು ಸುಲಭವಾಗಿ ಬಳಸುವಂತೆ ಮಾಡಲು ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಸಂಘದಿಂದ ಆಯ್ಕೆಯಾದ ಉತ್ಸಾಹಿ ಯುವಕ ಯುವತಿಯರು ಈ ಆ್ಯಪ್ ಮೂಲಕ ರೈತರ ಜಮೀನಿನ ಬೆಳೆ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದೆ, ಅತ್ಯಂತ ನಿಖರವಾಗಿ ನಮೂದಿಸುವ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಅದರಂತೆ ಕಾರ್ಯವ್ಯಾಪ್ತಿಯ ರೈತ ಸದಸ್ಯರಿಗೆ ಬೆಳೆ ನಮೂದು ಮಾಡುವ ಬಗ್ಗೆ ಸಹಕರಿಸುವಂತೆ ಪ್ರೇರೇಪಿಸಲಾಗಿದೆ.

ಡಿಜಿಟಲ್ ದಾಖಲಾತಿಗಳು ನಿಖರವಾಗಿದ್ದಾಗ ಮಾತ್ರ ರೈತರಿಗೆ ಸರ್ಕಾರದ ಸೌಲಭ್ಯಗಳು, ಬೆಳೆ ವಿಮೆ ಹಾಗೂ ಪರಿಹಾರ ಯಾವುದೇ ವಿಳಂಬವಿಲ್ಲದೆ ತಲುಪಲು ಸಾಧ್ಯವಾಗುತ್ತದೆ ಎಂದು ಶ್ರೀಮತಿ ಕ್ಷಮಾ ಪಾಟೀಲ್ ಜಂಟಿ ನಿರ್ದೇಶಕರು ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು.

ಪ್ರತಿಬಾರಿ ಬೆಳೆ ವಿಮೆಯಂತಹ ಉತ್ತಮ ಯೋಜನೆಗೆ ಕಾರ್ಯವ್ಯಾಪ್ತಿಯ ರೈತರ ಬೆಳೆಗಳನ್ನು ಸೇರಿಸಲು ಬೆಳೆ ಸಮೀಕ್ಷೆಯ ದಾಖಲೆಗಳಲ್ಲಿನ ಲೋಪ ನೇರವಾಗಿ ಕಾರಣವಾಗಿ ಹಲವು ರೈತರು ಯೋಜನೆಯಿಂದ ಪ್ರತೀ ಬಾರಿ ವಂಚಿತರಾಗುವುದು ಸಂಘದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಬೆಳೆ ಸಮೀಕ್ಷೆಗೆ ರೈತರಿಗೆ ನೀಡಲಾದ ಅವಕಾಶದಲ್ಲಿ ಅವರಿಗೆ ಸರಿಯಾದ ಸಹಕಾರ, ಮಾರ್ಗದರ್ಶನ ನೀಡಿ ಮಿಶ್ರ ಬೆಳೆಗಳನ್ನು ಒಳಗೊಂಡಂತೆ ನೈಜ ಬೆಳೆಯ ಸಮೀಕ್ಷೆಯಾಗುವಂತೆ ನೋಡಿಕೊಳ್ಳಲು ಸದ್ರಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರು ಅವರ ಮಾತಿನಲ್ಲಿ ತಿಳಿಸಿದರು.

ಪ್ರಾಯೋಗಿಕ ಪ್ರಾತ್ಯಕ್ಷಿಕೆ (Field Visit & Demo):
ಸಭೆಯ ಕಾರ್ಯಕ್ರಮದ ನಂತರ, ಸಂಘದ ಕಾರ್ಯವ್ಯಾಪ್ತಿಯ ಕೃಷಿಕರೊಬ್ಬರ ತೋಟಕ್ಕೆ ಅಧಿಕಾರಿಗಳು ಮತ್ತು ತರಬೇತಿ ನಿರತರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸದರಿ ‘ರೈತರ ಬೆಳೆ ಸಮೀಕ್ಷೆ 2026-27’ ಮೊಬೈಲ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಉಪಯೋಗಿಸಿ, ಜಿಪಿಎಸ್ ಆಧಾರಿತ ಬೆಳೆ ನಮೂದನ್ನು ಅತ್ಯಂತ ನಿಖರವಾಗಿ ಹೇಗೆ ಮಾಡಬೇಕು ಎಂಬ ಬಗ್ಗೆ ಆಸಕ್ತ ಯುವಕ ಯುವತಿಯರಿಗೆ ಸ್ಥಳದಲ್ಲೇ ಸವಿಸ್ತಾರವಾದ ಪ್ರಾತ್ಯಕ್ಷಿಕೆಯನ್ನು ನೀಡಿ ಮನವರಿಕೆ ಮಾಡಿಕೊಡಲಾಯಿತು.

ತರಬೇತಿ ಪಡೆದ ಈ ಯುವಕರು ಸಂಘದ ಕಾರ್ಯವ್ಯಾಪ್ತಿಯ ಬೆಳೆಸಾಲ ಹೊಂದಿರುವ ರೈತ ಸದಸ್ಯರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗಲಿದ್ದಾರೆ.

Previous Post

ಶ್ರೀಕೃಷ್ಣ ಮಠದಲ್ಲಿ ಮುಖ್ಯಪ್ರಾಣ ದೇವರ ಪಂಚಕಜ್ಜಾಯ ತಯಾರಿಕೆಗೆ ನೂತನ ಯಂತ್ರಗಳ ಲೋಕಾರ್ಪಣೆ..!

Next Post

9ನೇ ತರಗತಿ ವಿದ್ಯಾರ್ಥಿ ಅಪಹರಣ: ಕೇರಳಕ್ಕೆ ಕರೆದೊಯ್ದು ಬಲವಂತದ ಕೆಲಸ, ಹಲ್ಲೆ – ಇಬ್ಬರ ಬಂಧನ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
9ನೇ ತರಗತಿ ವಿದ್ಯಾರ್ಥಿ ಅಪಹರಣ: ಕೇರಳಕ್ಕೆ ಕರೆದೊಯ್ದು ಬಲವಂತದ ಕೆಲಸ, ಹಲ್ಲೆ – ಇಬ್ಬರ ಬಂಧನ..!

9ನೇ ತರಗತಿ ವಿದ್ಯಾರ್ಥಿ ಅಪಹರಣ: ಕೇರಳಕ್ಕೆ ಕರೆದೊಯ್ದು ಬಲವಂತದ ಕೆಲಸ, ಹಲ್ಲೆ – ಇಬ್ಬರ ಬಂಧನ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

23/08/2026
ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

23/08/2026
ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

22/08/2026
ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

22/08/2026

Recent News