Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಿಂದ “ಪ್ರಗತಿ” ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ

Dhrishya News by Dhrishya News
03/06/2026
in ಮುಖಪುಟ
0
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಿಂದ “ಪ್ರಗತಿ” ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ
0
SHARES
1
VIEWS
Share on FacebookShare on Twitter

ಮಣಿಪಾಲ, : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯವು ಮೆದುಳು ಅಭಿವೃದ್ಧಿ ಸಮಸ್ಯೆ ಹೊಂದಿರುವ ಮಕ್ಕಳಿಗಾಗಿ “ಪ್ರಗತಿ” ಎಂಬ ಕುಟುಂಬ ಕಾರ್ಯಕ್ರಮವನ್ನು ಮೇ 26, 2026 ಮತ್ತು ಮೇ 28, 2026 ರಂದು ಆಯೋಜಿಸಿತ್ತು. ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ಪ್ರಸಾದ್ ಎಸ್.ಎಸ್. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡೀನ್ ಡಾ. ಅರುಣ್ ಜಿ. ಮೈಯ ಅವರು ಗೌರವ ಅತಿಥಿಗಳಾಗಿದ್ದರು. ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸವಿತಾ ಸೋಮನ್ ಮತ್ತು ನ್ಯೂರೋಡೆವಲಪ್ ಮೆಂಟಲ್ ಚಿಕಿತ್ಸಾಲಯದ ಉಸ್ತುವಾರಿ ಡಾ. ಅಮೃತವರ್ಷಿಣಿ ಆರ್. ಅವರು ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಸಾದ್ ಎಸ್.ಎಸ್., ಮೆದುಳು ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳ ಆರಂಭಿಕ ಗುರುತಿಸುವಿಕೆ ಮತ್ತು ಬಹು ಆಯಾಮದ ಚಿಕಿತ್ಸಾ ಕ್ರಮದ ಮಹತ್ವವನ್ನು ಹೇಳಿದರು . ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಸಮಗ್ರ ಬೆಂಬಲವನ್ನು ವಿಸ್ತರಿಸುವಲ್ಲಿ ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ನ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

 

ಬೆಳವಣಿಗೆಯ ಸವಾಲುಗಳನ್ನು ಹೊಂದಿರುವ ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮಕ್ಕಳ ಪುನಸ್ಚೇತನ ಮತ್ತು ಕುಟುಂಬ ಕೇಂದ್ರಿತ ಆರೈಕೆಯ ಪಾತ್ರವನ್ನು ಡಾ. ಅರುಣ್ ಜಿ. ಮೈಯ ಒತ್ತಿ ಹೇಳಿದರು. ಆರೋಗ್ಯ ವೃತ್ತಿಪರರು ಮತ್ತು ಆರೈಕೆದಾರರಿಂದ ಸಂಘಟಿತ ಬೆಂಬಲವು ಮಗುವಿನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

 

“ಪ್ರಗತಿ” ಯಂತಹ ಜಾಗೃತಿ ಕಾರ್ಯಕ್ರಮಗಳು ಪೋಷಕರು ಮೆದುಳು ಬೆಳವಣಿಗಯ ಸಮಸ್ಯೆ ಹೊಂದಿರುವ ಮಕ್ಕಳ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಕಾಲಿಕ ಚಿಕಿತ್ಸೆಯ ಮೂಲಕ ಸಮಾಜದ ಸ್ವೀಕಾರವನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಡಾ. ಅವಿನಾಶ್ ಶೆಟ್ಟಿ ಹೇಳಿದರು.

 

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಡಾ. ಸುಧಾಕರ್ ಕಂಟಿಪುಡಿ ಅವರು, ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ಒದಗಿಸುವ ಸಮರ್ಪಿತ ಸೇವೆಗಳನ್ನು ಶ್ಲಾಘಿಸಿದರು ಮತ್ತು ಸಮಗ್ರ ಮಕ್ಕಳ ಬೆಳವಣಿಗೆಗೆ ಮನೋವೈದ್ಯಶಾಸ್ತ್ರ, ಮಕ್ಕಳ ಚಿಕಿತ್ಸೆ, ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ ಮತ್ತು ಕುಟುಂಬದ ಭಾಗವಹಿಸುವಿಕೆಯನ್ನು ಒಳಗೊಂಡ ಸಮಗ್ರ ಆರೋಗ್ಯ ರಕ್ಷಣಾ ವಿಧಾನಗಳ ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಭಾಗವಾಗಿ, ಮೆದುಳು ಬೆಳವಣಿಗೆಯ ಸಮಸ್ಯೆ ಹೊಂದಿರುವ ಪೋಷಕರು ಮತ್ತು ಮಕ್ಕಳಿಗಾಗಿ ಮೇ 26, 2026 ರಂದು ವಿವಿಧ ವಿನೋದಾವಳಿ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು, ಇದು ಪರಸ್ಪರ ಕ್ರಿಯೆ, ಬಾಂಧವ್ಯ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸಿತು. ಮೇ 28, 2026 ರಂದು, ಮೆದುಳು ಬೆಳವಣಿಗೆಯ ಸಮಸ್ಯೆ ಕುರಿತು ಪೋಷಕರಿಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ನಡೆಯಿತು. ಮಕ್ಕಳ ಮನೋವೈದ್ಯಶಾಸ್ತ್ರ, ಮಕ್ಕಳ ವೈದ್ಯಕೀಯಶಾಸ್ತ್ರ, ಕ್ಲಿನಿಕಲ್ ಸೈಕಾಲಜಿ, ಆಕ್ಯುಪೇಷನಲ್ ಥೆರಪಿ, ಫಿಸಿಯೋಥೆರಪಿ ಹಾಗೂ ವಾಕ್ ಮತ್ತು ಶ್ರವಣ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳು ಒಳನೋಟವುಳ್ಳ ಅವಶ್ಯ ಜಾಗೃತಿ ಶಿಕ್ಷಣ ನೀಡಿದರು.

 

ಡಾ. ಅಮೃತವರ್ಷಿಣಿ ಆರ್. ಸ್ವಾಗತಿಸಿ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಡಾ. ಮಹೇಶ್ ಮೋಹನ್ ಧನ್ಯವಾದಗಳನ್ನು ಅರ್ಪಿಸಿದರು. *ನ್ಯೂರೋಡೆವಲಪ್ ಮೆಂಟಲ್ ಕ್ಲಿನಿಕ್ ಪ್ರತಿ ಬುಧವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆರ್ಟಿ ಫೀಸಿಯಲ್ ಲಿಂಬ್ ಸೆಂಟರ್ ನ (ALC) ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ದೂ. ಸಂಖ್ಯೆ 6364074903 ಸಂಪರ್ಕಿಸಬಹುದು.*

Previous Post

ಹಿರಿಯಡ್ಕ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

Next Post

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್  ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳದಲ್ಲಿ ಹಿಟ್ ಆ್ಯಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಂಭೀರ ಗಾಯ..!

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್  ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಂಗಳೂರು-ಮಂತ್ರಾಲಯ ಪ್ರಯಾಣ ಈಗ ಮತ್ತಷ್ಟು ಸುಲಭ; ವಿಶೇಷ ರೈಲು ಸೇವೆ ಆರಂಭ

ಮಂಗಳೂರು-ಮಂತ್ರಾಲಯ ಪ್ರಯಾಣ ಈಗ ಮತ್ತಷ್ಟು ಸುಲಭ; ವಿಶೇಷ ರೈಲು ಸೇವೆ ಆರಂಭ

03/06/2026
ಬ್ರಹ್ಮಾವರದಲ್ಲಿ ಕೆಲಸಕ್ಕೆ ಬಂದಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

ಸ್ನೇಹಾಲಯ ವೃದ್ಧಾಶ್ರಮದಿಂದ ವ್ಯಕ್ತಿ ನಾಪತ್ತೆ; ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು

03/06/2026
ಕಾಣೆಯಾಗಿದ್ದ ಮಹಿಳೆ ನದಿಯಲ್ಲಿ ಶವವಾಗಿ ಪತ್ತೆ..!

ತೆಂಗಿನ ಮರದಿಂದ ಬಿದ್ದು ಕಾರ್ಮಿಕ ದುರ್ಮರಣ

03/06/2026
ಕಾರ್ಕಳದಲ್ಲಿ ಹಿಟ್ ಆ್ಯಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಂಭೀರ ಗಾಯ..!

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್  ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

03/06/2026

Recent News

ಮಂಗಳೂರು-ಮಂತ್ರಾಲಯ ಪ್ರಯಾಣ ಈಗ ಮತ್ತಷ್ಟು ಸುಲಭ; ವಿಶೇಷ ರೈಲು ಸೇವೆ ಆರಂಭ

ಮಂಗಳೂರು-ಮಂತ್ರಾಲಯ ಪ್ರಯಾಣ ಈಗ ಮತ್ತಷ್ಟು ಸುಲಭ; ವಿಶೇಷ ರೈಲು ಸೇವೆ ಆರಂಭ

03/06/2026
ಬ್ರಹ್ಮಾವರದಲ್ಲಿ ಕೆಲಸಕ್ಕೆ ಬಂದಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

ಸ್ನೇಹಾಲಯ ವೃದ್ಧಾಶ್ರಮದಿಂದ ವ್ಯಕ್ತಿ ನಾಪತ್ತೆ; ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲು

03/06/2026
ಕಾಣೆಯಾಗಿದ್ದ ಮಹಿಳೆ ನದಿಯಲ್ಲಿ ಶವವಾಗಿ ಪತ್ತೆ..!

ತೆಂಗಿನ ಮರದಿಂದ ಬಿದ್ದು ಕಾರ್ಮಿಕ ದುರ್ಮರಣ

03/06/2026
ಕಾರ್ಕಳದಲ್ಲಿ ಹಿಟ್ ಆ್ಯಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಂಭೀರ ಗಾಯ..!

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್  ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

03/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved