ಮಂಗಳೂರು, ಮಾ.10: ಮಂಗಳೂರು ಜಂಕ್ಷನ್–ತಿರುನಲ್ವೇಲಿ ನಡುವೆ (ಮಧುರೈ ಮಾರ್ಗವಾಗಿ) ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ಹಸಿರು ನಿಶಾನೆ ನೀಡಿದೆ.
ಈ ರೈಲು ತಿರುನಲ್ವೇಲಿಯಿಂದ ಬುಧವಾರ ಮಧ್ಯಾಹ್ನ 3.45ಕ್ಕೆ ಹೊರಟು ಸಂಜೆ 5.55ಕ್ಕೆ ಮಧುರೈ ತಲುಪಲಿದ್ದು, ಬಳಿಕ ಗುರುವಾರ ಬೆಳಗ್ಗೆ 6.55ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ. ಹಿಂತಿರುಗುವ ಪ್ರಯಾಣದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಸಂಜೆ 4.30ಕ್ಕೆ ಮಧುರೈ ತಲುಪಲಿದ್ದು, ಮುಂದಿನ ದಿನವಾದ ಶುಕ್ರವಾರ ಬೆಳಗ್ಗೆ 7.45ಕ್ಕೆ ತಿರುನಲ್ವೇಲಿ ತಲುಪಲಿದೆ.
ರಾಮೇಶ್ವರಂ ರೈಲು ಶೀಘ್ರ ಆರಂಭದ ಸಾಧ್ಯತೆ
ಇದೇ ವೇಳೆ ಪ್ರಸ್ತಾವಿತ ಮಂಗಳೂರು ಸೆಂಟ್ರಲ್–ರಾಮೇಶ್ವರಂ ವಾರಾಂತ್ಯ ಎಕ್ಸ್‌ಪ್ರೆಸ್ ರೈಲಿಗೆ ತಮಿಳುನಾಡಿನ ತಿರೂರ್, ಉದುಮಲಿಪೆಟ್ಟೈ ಹಾಗೂ ಪರಮಕ್ಕುಡಿ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆಗೆ ಅನುಮತಿ ನೀಡಲಾಗಿದೆ.
ಇದರಿಂದಾಗಿ ಬಹುಕಾಲದಿಂದಲೂ ಮುಂದಿಡಲಾಗುತ್ತಿದ್ದ ಮಂಗಳೂರು–ರಾಮೇಶ್ವರಂ ನೇರ ರೈಲು ಸೇವೆ ಆರಂಭಗೊಳ್ಳುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.







