Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಸುಮನಸಾ ಕೊಡವೂರು ರಂಗಹಬ್ಬ-14 ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ : ಡಾ.ತಲ್ಲೂರು ಅಭಿಮತ

Dhrishya News by Dhrishya News
27/02/2026
in ಮುಖಪುಟ
0
ಸುಮನಸಾ ಕೊಡವೂರು ರಂಗಹಬ್ಬ-14 ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ : ಡಾ.ತಲ್ಲೂರು ಅಭಿಮತ
0
SHARES
5
VIEWS
Share on FacebookShare on Twitter

ಉಡುಪಿ : ಸಂಘಟನೆ ಎಂದರೆ ಏನು ? ಎತ್ತ ? ಎಂಬುದನ್ನು ಕೊಡವೂರಿನ ಸುಮನಸಾ ಸಾಂಸ್ಕೃತಿಕ ಸಂಘಟನೆಯಿoದ ನೋಡಿ ಕಲಿಯಬೇಕು. ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ, ಬೆಳೆಯುತ್ತದೆ. ತನು ಮನ ಧನ ಮಾತ್ರವಲ್ಲ ಪ್ರೇಕ್ಷಕರ ಪ್ರೋತ್ಸಾಹವೂ ಸಿಗಬೇಕು ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಬುಧವಾರ ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ನ ಬಯಲು ರಂಗಮoದಿರದಲ್ಲಿ ಕೊಡವೂರಿನ ಸಾಂಸ್ಕೃತಿಕ ಸಂಘಟನೆ ಸುಮನಸಾ ವತಿಯಿಂದ ಹಮ್ಮಿಕೊಂಡ ‘ರಂಗಹಬ್ಬ-14’ ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಟಕಗಳು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಉತ್ತಮ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚನೆಗೆ ಹಚ್ಚುವುದು ಈ ನಾಟಕಗಳು. ಹಾಗಾಗಿ ಯಕ್ಷಗಾನ, ನಾಟಕಗಳು ಬರೀ ಮನೋರಂಜನೆಗೆ ಮಾತ್ರವಲ್ಲ, ನಮ್ಮ ಮನೋವಿಕಾರವನ್ನು ತಿದ್ದುವ, ಸಮಾಜವನ್ನು ಉತ್ತಮ ದಿಕ್ಕಿಗೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ. ಸರಿದಾರಿಯಲ್ಲಿ ನಡೆಯಲು ಬೆಳಕು ತೋರುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.

ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ನಾಟಕ ಅಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ ಎಂದರು.

ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಡೆಂಟಿಸ್ಟ್ ಡಾ. ವಿಜಯೇಂದ್ರ ವಸಂತ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಅವರಿಗೆ ರಂಗ ಸಾಧಕ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ಬಿ.ಜಿ. ಸುಬ್ಬರಾವ್, ಮಲ್ಪೆಯ ಉದ್ಯಮಿ ಅಭಿನಂದನ್ ಕೆ. ಕೋಟ್ಯಾನ್, ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

ವಿದ್ದು ಉಚ್ಚಿಲ್ ಸ್ವಾಗತಿಸಿ, ರಾಗಿಣಿ ಹರೀಶ್ ವಂದಿಸಿದರು, ಕಾರ್ತಿಕ್ ಪ್ರಭು, ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

Previous Post

36ನೇ ಮಣಿಪಾಲ ನರ್ಸಿಂಗ್ ಕಾಲೇಜು ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕೋತ್ಸವ: ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಾಧನೆಗೆ ಗೌರವ

Next Post

ಧರ್ಮಸ್ಥಳ :ಮಾರ್ಚ್ 3ರಂದು ಚಂದ್ರಗ್ರಹಣದ ಹಿನ್ನೆಲೆ ಮಂಜುನಾಥ ಸ್ವಾಮಿ ದರ್ಶನ ಸಮಯದಲ್ಲಿ ಬದಲಾವಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಧರ್ಮಸ್ಥಳ :ಮಾರ್ಚ್ 3ರಂದು ಚಂದ್ರಗ್ರಹಣದ ಹಿನ್ನೆಲೆ ಮಂಜುನಾಥ ಸ್ವಾಮಿ ದರ್ಶನ ಸಮಯದಲ್ಲಿ ಬದಲಾವಣೆ..!!

ಧರ್ಮಸ್ಥಳ :ಮಾರ್ಚ್ 3ರಂದು ಚಂದ್ರಗ್ರಹಣದ ಹಿನ್ನೆಲೆ ಮಂಜುನಾಥ ಸ್ವಾಮಿ ದರ್ಶನ ಸಮಯದಲ್ಲಿ ಬದಲಾವಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

01/03/2026
ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026

Recent News

ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

01/03/2026
ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

ಮೆದುಳಿನ ನರಕೋಶಗಳನ್ನು ಗುರಿಯಾಗಿಸುವ ಮಾರಕ ಶಿಲೀಂಧ್ರದ ರಹಸ್ಯ ಬಯಲು – ಮಾಹೆ–ಶ್ರೋಡಿಂಗರ್ ಸಂಯುಕ್ತ ಅಧ್ಯಯನದಿಂದ ಮಹತ್ವದ ಸಾಧನೆ..!!

28/02/2026
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

28/02/2026
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

28/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved