ಸಿದ್ದಾಪುರ, ಫೆ.26: ಮಲ್ಪೆಯಿಂದ ಮೀನಿನ ಸರಕು ತುಂಬಿಕೊಂಡು ಸಾಗರದತ್ತ ತೆರಳುತ್ತಿದ್ದ ಟೆಂಪೋ ವಾಹನವು ಶಂಕರನಾರಾಯಣ–ಸಿದ್ದಾಪುರ ರಸ್ತೆಯ ಐರಬೈಲು ಸಮೀಪ ಅಪಘಾತಕ್ಕೀಡಾಗಿದೆ.
ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ತೀವ್ರ ಹಾನಿಗೊಂಡಿವೆ.
ಘಟನೆಯ ಕುರಿತು ಟೆಂಪೋ ಚಾಲಕ ಸಚಿನ್ ಮಿರಾಂದ್ ಬಜೆ ಅವರು ನೀಡಿದ ದೂರಿನ ಆಧಾರದಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







