ಉಡುಪಿ: ಫೆಬ್ರವರಿ 21: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೃಶ್ಯ ಮೀಡಿಯಾ ತನ್ನ “ನಮ್ಮ ಊರಿನ ಪ್ರೇರಣಾದಾಯಕ ಮಹಿಳೆ – 2026” ಸ್ಪರ್ಧೆಯನ್ನು ಪ್ರಾರಂಭಿಸಿದೆ.
ನಮ್ಮ ಸಮಾಜದಲ್ಲಿ ಪ್ರತಿದಿನವೂ ತಮ್ಮ ಪರಿಶ್ರಮ, ಸಮರ್ಪಣೆ ಹಾಗೂ ಸಾಧನೆಯ ಮೂಲಕ ಬದಲಾವಣೆ ತರುವ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಸ್ಪರ್ಧೆ ನಡೆಯುತ್ತಿದೆ. ಶಿಕ್ಷಕಿ, ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ, ತಾಯಿ, ಆರೋಗ್ಯ ಸೇವಕಿ, ಕೃಷಿಕ ಮಹಿಳೆ ಅಥವಾ ಮೌನವಾಗಿ ಸಮಾಜ ಪರಿವರ್ತನೆಗೆ ಕಾರಣವಾಗಿರುವ ಯಾವುದೇ ಮಹಿಳೆಯರು ನಾಮನಿರ್ದೇಶನ ಮಾಡಿ ಕೊಳ್ಳಬಹುದು
👉 ಸ್ವಯಂ ನಾಮನಿರ್ದೇಶನ (Self-Nomination) ಸೂಚನೆಗಳು
ಸ್ಪರ್ಧೆಗೆ ನಾನು ನನ್ನನ್ನೇ ನಾಮನಿರ್ದೇಶನ ಮಾಡಬಹುದು.
ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವ ಮಹಿಳೆ ಸ್ವತಃ ಅವರ ಸಾಧನೆ, ಕೊಡುಗೆ ಮತ್ತು ಪ್ರೇರಣೆಯ ಬಗ್ಗೆ 150–300 ಪದಗಳಲ್ಲಿ ಬರೆಯಬೇಕು.
ಅರ್ಜಿ ಸಲ್ಲಿಸುವ ವೇಳೆ ಒಂದು ಸ್ಪಷ್ಟ ಫೋಟೋ ಕಳುಹಿಸಬೇಕು.
📝 ಭಾಗವಹಿಸುವ ವಿಧಾನ
ನಾಮನಿರ್ದೇಶನ ಸಲ್ಲಿಸಲು:
📸 ಫೋಟೋ + ✍️ 150–300 ಪದಗಳ ಪರಿಚಯ ಲೇಖನ
📲 ವಾಟ್ಸಾಪ್: 94801 15547
📧 ಇಮೇಲ್: Info@dhrishyanews.com
ಸೂಚನೆ: ನೀವು ಯಾವುದೇ ಮೌಲ್ಯಮಾಪನಕ್ಕೆ ಅರ್ಹರಾಗಿದ್ದರೆ, ನಿಮ್ಮ ಸ್ವಂತ ಕಥೆಯನ್ನು ಹಂಚಿಕೊಳ್ಳಿ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ.
🏆 ಆಯ್ಕೆ ಪ್ರಕ್ರಿಯೆ
ಆಯ್ಕೆಯಾದ ಲೇಖನಗಳನ್ನು ದೃಶ್ಯ ಮೀಡಿಯಾ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುತ್ತದೆ.
ಪ್ರಕಟಿತ ಲೇಖನಗಳಿಗೆ ಲಭ್ಯವಾಗುವ ಆನ್‌ಲೈನ್ ವೀಕ್ಷಣೆ (Views) ಆಧಾರದ ಮೇಲೆ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
🎁 ಬಹುಮಾನಗಳು
ವಿಜೇತ ಮತ್ತು ರನ್ನರ್-ಅಪ್‌ಗಳಿಗೆ ಗೌರವ ಪ್ರಶಸ್ತಿ ಹಾಗೂ ಪ್ರಮಾಣಪತ್ರ.
ದೃಶ್ಯ ವೀಕ್ಲಿ ಡಿಜಿಟಲ್ ಮ್ಯಾಗಜಿನ್ ಮತ್ತು ದೃಶ್ಯ ನ್ಯೂಸ್ ವೆಬ್‌ಸೈಟ್‌ನಲ್ಲಿ ವಿಶೇಷ ಲೇಖನ.
📅 ಪ್ರಮುಖ ದಿನಾಂಕಗಳು
📌 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಮಾರ್ಚ್ 1
📌 ಆನ್‌ಲೈನ್ ವೀಕ್ಷಣೆ ಅವಧಿ: ಮಾರ್ಚ್ 6
📌 ಫಲಿತಾಂಶ ಪ್ರಕಟಣೆ: ಮಾರ್ಚ್ 8 (ಮಹಿಳಾ ದಿನ)
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
📱 77950 07124
📱 94801 15547







