Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮ್ಯಾಟ್ರಿಮೋನಿ ಹೆಸರಿನಲ್ಲಿ ಮದುವೆ ಮೋಸ: 6.60 ಲಕ್ಷ ಪಡೆದು ನಾಪತ್ತೆ – ಆರೋಪಿ ಬಂಧನ…!

Dhrishya News by Dhrishya News
11/02/2026
in ಸುದ್ದಿಗಳು
0
ಮ್ಯಾಟ್ರಿಮೋನಿ ಹೆಸರಿನಲ್ಲಿ ಮದುವೆ ಮೋಸ: 6.60 ಲಕ್ಷ ಪಡೆದು ನಾಪತ್ತೆ – ಆರೋಪಿ ಬಂಧನ…!
0
SHARES
3
VIEWS
Share on FacebookShare on Twitter

ಮಂಗಳೂರು, ಫೆ. 11: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯಗೊಂಡ ಮಹಿಳೆಯನ್ನು ಮಹಾರಾಷ್ಟ್ರದ ನವಿ ಮುಂಬಯಿಯ ಘನಸೋಳಿಯಲ್ಲಿ ಮದುವೆಯಾಗಿ, ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿದ್ದ ಆರೋಪಿ ಹಾಗೂ ಅವನಿಗೆ ಸಹಾಯ ಮಾಡಿದ್ದ ಮತ್ತೊಬ್ಬನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರಾ (32) ಹಾಗೂ ಮೂಲ್ಕಿ ನಿವಾಸಿ ಭಾಸ್ಕರ್ (53) ಎಂದು ಗುರುತಿಸಲಾಗಿದೆ.

2025ರ ಫೆ.2ರಂದು ಮಂಗಳೂರು ಮೂಲದ ದೂರುದಾರ ಮಹಿಳೆಯನ್ನು ಆರೋಪಿ ಸುಶಾಂತ್ ಮದುವೆಯಾಗಿದ್ದಾನೆ. ಬಳಿಕ ಅವರಿಂದ ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ನ.15ರಂದು ಹಠಾತ್ ನಾಪತ್ತೆಯಾಗಿದ್ದ. ಈ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಹಾಗೂ ಈ ಮೊದಲು ಒಂದು ಮದುವೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಕಾವೂರು ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫೆ.5ರಂದು ಆತನನ್ನು ಬಂಧಿಸಿದ್ದಾರೆ.

ಹಲವರಿಗೆ ವಂಚನೆ:

2021ರಲ್ಲಿ ಉಡುಪಿಯ ಇಬ್ಬರು ಹುಡುಗಿಯರು ಹಾಗೂ ಮುಂಬಯಿನ ಇಬ್ಬರು ಹುಡುಗಿಯರಿಂದ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ಮಾತ್ರವಲ್ಲದೆ ಕಾರ್ಕಳದ ಓರ್ವ ಹುಡುಗಿಗೂ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಸಹಕರಿಸಿದಾತನ ಬಂಧನ:

ಮುಂಬಯಿನ ಮಹಿಳೆಗೆ ಮತ್ತು ಆಕೆ ಕುಟುಂಬದವರಿಗೆ ಸುಶಾಂತ್ ತನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿದ್ದ ಮೂಲ್ಕಿ ನಿವಾಸಿ ಭಾಸ್ಕರ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬಯಿಯಲ್ಲಿನಡೆದ ಮದುವೆಯಲ್ಲಿ ಭಾಸ್ಕರ್ ಪಾಲ್ಗೊಂಡು ಮದುವೆ ನಡೆಸಿದ್ದ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ವಿವಿಧ ಠಾಣೆಗಳಲ್ಲಿ ಪ್ರಕರಣ:

ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಉರ್ವ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣೆಯಲ್ಲಿ ಮಾನವಕಳ್ಳಸಾಗಣೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಾಗಿವೆ.

Previous Post

ಅಕ್ರಮ ಜೂಜಾಟಕ್ಕೆ ಕಡಿವಾಣ: ಕೋಳಿ ಅಂಕದಲ್ಲಿ ಪೊಲೀಸರ ದಾಳಿ…!

Next Post

ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ವಿರುದ್ಧ ಗಡಿಪಾರು ಪ್ರಸ್ತಾವನೆ ; ಫೆ. 25ಕ್ಕೆ ವಿಚಾರಣೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ವಿರುದ್ಧ ಗಡಿಪಾರು ಪ್ರಸ್ತಾವನೆ ; ಫೆ. 25ಕ್ಕೆ ವಿಚಾರಣೆ….!

ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ವಿರುದ್ಧ ಗಡಿಪಾರು ಪ್ರಸ್ತಾವನೆ ; ಫೆ. 25ಕ್ಕೆ ವಿಚಾರಣೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

11/02/2026
ಹರಾಜು ಹೆಸರಿನಲ್ಲಿ 4.78 ಕೋಟಿ ವಂಚನೆ; ದಂಪತಿ ವಿರುದ್ಧ ಉದ್ಯಮಿಯಿಂದ ದೂರು….!

ಹರಾಜು ಹೆಸರಿನಲ್ಲಿ 4.78 ಕೋಟಿ ವಂಚನೆ; ದಂಪತಿ ವಿರುದ್ಧ ಉದ್ಯಮಿಯಿಂದ ದೂರು….!

11/02/2026
ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

11/02/2026
ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

11/02/2026

Recent News

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

ರಾಜ್ಯದಿಂದ ಪ್ರಸ್ತಾವ ನಿರೀಕ್ಷೆ: ನಂದಿಕೂರಿಗೆ ಸಬ್ ಏರ್‌ಪೋರ್ಟ್ ಸಾಧ್ಯತೆ -ರಾಮ್ ಮೋಹನ್ ನಾಯ್ಡು…!

11/02/2026
ಹರಾಜು ಹೆಸರಿನಲ್ಲಿ 4.78 ಕೋಟಿ ವಂಚನೆ; ದಂಪತಿ ವಿರುದ್ಧ ಉದ್ಯಮಿಯಿಂದ ದೂರು….!

ಹರಾಜು ಹೆಸರಿನಲ್ಲಿ 4.78 ಕೋಟಿ ವಂಚನೆ; ದಂಪತಿ ವಿರುದ್ಧ ಉದ್ಯಮಿಯಿಂದ ದೂರು….!

11/02/2026
ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

ಸುರತ್ಕಲ್‌ನಲ್ಲಿ ಅಂತರ್ ಧರ್ಮ ಮದುವೆ ವಿವಾದ, ಪೊಲೀಸ್ ಠಾಣೆಯಲ್ಲಿ ದೂರು…!

11/02/2026
ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಪೂರ್ಣ ಗಾಯನಕ್ಕೆ ಸೂಚನೆ…!

11/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved