Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ–ದಕ್ಷಿಣ ಕನ್ನಡ ಹೆದ್ದಾರಿಗಳು ಮೃತ್ಯುಕೂಪ: ಒಂದೇ ವರ್ಷದಲ್ಲಿ 4,026 ಅಪಘಾತ, 1,010 ಜೀವ ಹಾನಿ…!!

Dhrishya News by Dhrishya News
04/02/2026
in ಕರಾವಳಿ, ಸುದ್ದಿಗಳು
0
ಉಡುಪಿ–ದಕ್ಷಿಣ ಕನ್ನಡ ಹೆದ್ದಾರಿಗಳು ಮೃತ್ಯುಕೂಪ: ಒಂದೇ ವರ್ಷದಲ್ಲಿ 4,026 ಅಪಘಾತ, 1,010 ಜೀವ ಹಾನಿ…!!
0
SHARES
12
VIEWS
Share on FacebookShare on Twitter

ಉಡುಪಿ ಫೆ. 04: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ ಸಾಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಇದು ಸಾರ್ವಜನಿಕರಲ್ಲಿ ಭಯ ಹಾಗೂ ಅಸುರಕ್ಷಿತ ಭಾವನೆಗೆ ಕಾರಣವಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳುಗಳಲ್ಲೇ ಹೆದ್ದಾರಿಗಳು ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ ಅನೇಕ ಅಮೂಲ್ಯ ಜೀವಗಳು ಕಳೆದುಹೋಗಿದ್ದು, ರಸ್ತೆ ಸುರಕ್ಷತೆ ಕುರಿತು ಗಂಭೀರ ಆತಂಕ ಮೂಡಿಸಿದೆ.

ಕಳೆದ ಡಿಸೆಂಬರ್‌ಗೆ ಅಂತ್ಯಗೊಂಡ ಒಂದು ವರ್ಷದಲ್ಲಿ ಉಭಯ ಜಿಲ್ಲೆಗಳಲ್ಲಿ ಒಟ್ಟು 4,026 ಅವಘಡಗಳು ಸಂಭವಿಸಿ, 1,010 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ 2,199 ಅಪಘಾತದಿಂದ 560 ಸಾವು, 2022ರಲ್ಲಿ3,102 ಅಪಘಾತದಿಂದ 553 ಸಾವು, 2023ರಲ್ಲಿ3,177 ಅಪಘಾತದಲ್ಲಿ 554 ಸಾವು ಹಾಗೂ 2024ರಲ್ಲಿ 3,092 ಅಪಘಾತದಲ್ಲಿ 567 ಮಂದಿ ಸಾವನ್ನಪ್ಪಿದ್ದರು.

ರಾ.ಹೆ.66 ಹಾಗೂ 169 ಎ ಭಾಗ ಸಹಿತ ರಾಜ್ಯ ಹೆದ್ದಾರಿಗಳು, ಉಳಿದ ರಸ್ತೆಗಳು ಮೃತ್ಯುಕೂಪಗಳಾಗುತ್ತಿವೆ. ಅದರಲ್ಲೂ ರಸ್ತೆ ವಿಸ್ತರಣೆ, ಅಂಡ‌ರ್ ಪಾಸ್, ಫೈ,,ಓವ‌ರ್ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ದಿನವೂ ಅಪಘಾತಗಳಿಂದ ಸುದ್ದಿಯಾಗು ತ್ತಿವೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಲಾರಿ ಹಾಗೂ ಭಾರೀ ವಾಹನಗಳ ಅತಿವೇಗ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೆದ್ದಾರಿ ಕಾಮಗಾರಿಯಿಂದಾಗಿ ರಸ್ತೆ ಇಳಿಜಾರು, ತಿರುವುಗಳು ಹಾಗೂ ಅಚಾನಕ್ ದಿಕ್ಕು ಬದಲಾವಣೆ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಹಲವೆಡೆ ಡಿವೈಡರ್‌ಗಳು ಅಪೂರ್ಣವಾಗಿದ್ದು, ಪಾದಚಾರಿಗಳಿಗೆ ಸುರಕ್ಷಿತ ದಾಟುವ ವ್ಯವಸ್ಥೆಯ ಕೊರತೆ ಕೂಡ ಗಂಭೀರ ಸಮಸ್ಯೆಯಾಗಿದೆ.

ಜನರ ನಿರ್ಲಕ್ಷ್ಯವೂ ಪ್ರಮುಖ ಕಾರಣ

ಪೊಲೀಸ್ ದಾಖಲೆಗಳ ಪ್ರಕಾರ ಅನೇಕ ಅಪಘಾತಗಳಿಗೆ ಜನರ ನಿರ್ಲಕ್ಷÂವೂ ಪ್ರಮುಖ ಕಾರಣ. ಹೆಲ್ಕೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ಮೊಬೈಲ್ ಬಳಕೆ, ಅಸಮರ್ಪಕ ಓವರ್‌ಟೇಕ್ ಹಾಗೂ ಮದ್ಯಪಾನ ಮಾಡಿ ಚಾಲನೆ ಅಪಘಾತ ಹೆಚ್ಚಿಸುತ್ತಿವೆ.

ತಡೆಗೆ ಕ್ರಮ, ಆದರೂ ಅಪಾಯ

ಅಪಘಾತ ತಡೆಗಾಗಿ ಪೊಲೀಸ್ ಇಲಾಖೆ ಜಾಗೃತಿ ಅಭಿಯಾನ, ತಪಾಸಣೆ ಹಾಗೂ ದಂಡ ವಿಧಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಅಪಘಾತಗಳು ಕಡಿಮೆಯಾಗಿಲ್ಲ. ಅಪಘಾತಗಳು ನಡೆಯುವ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.

ರಸ್ತೆ ಸುರಕ್ಷೆಗೆ ಆಗ್ರಹ

ಹೆದ್ದಾರಿ ಅಪಘಾತಗಳನ್ನು ತಡೆಯಲು ವೈಜ್ಞಾನಿಕ ರಸ್ತೆ ವಿನ್ಯಾಸ, ಸ್ಪಷ್ಟ ಸೂಚನೆ ಫಲಕಗಳ ಅಳವಡಿಕೆ, ವೇಗ ನಿಯಂತ್ರಣ ಕೆಮರಾ ಅಳವಡಿಕೆ, ಪಾದಚಾರಿ ಸೇತುವೆಗಳನ್ನು ತ್ವರಿತಗತಿಯಲ್ಲಿ ನಿರ್ಮಿಸುವ ಅಗತ್ಯವಿದೆ. ಹಲವು ಕಡೆಗಳಲ್ಲಿ ಏಕಮುಖ ಸಂಚಾರ ತಪ್ಪಿಸಲು ವಿರುದ್ಧ ಬದಿಯಿಂದ ವಾಹನಗಳು ಸಂಚರಿಸಿ ಅವಘಡ ಸಂಭವಿಸುತ್ತಿವೆ. ರಸ್ತೆಯ ನಡುಭಾಗದಲ್ಲಿ ವಾಹನಗಳು ಕೆಟ್ಟುನಿಂತ ಸಂದರ್ಭ ಸೂಕ್ತ ಮಂಜಾಗ್ರತ ಕ್ರಮ ತೆಗೆದುಕೊಳ್ಳದ ಕಾರಣ ಹಿಂಬದಿಯಿಂದ ಢಿಕ್ಕಿ ಹೊಡೆಯುವಂತಹ ಘಟನೆಗಳೂ ನಡೆಯುತ್ತಿವೆ.

ಹೆದ್ದಾರಿಗಳಲ್ಲಿ ಸುರಕ್ಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಲವೆಡೆ ಎಚ್ಚರಿಕೆ ಫಲಕ ಸಹಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವೆಡೆ ಕಾಮಗಾರಿ ಗಳು ನಡೆಯುತ್ತಿದ್ದು, ಆಯಕಟ್ಟಿನ ಭಾಗಗ ಳಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಗುರಿ ಇದೆ. -ಅಬ್ದುಲ್ ಜಾವೇದ್, ಯೋಜನಾ ನಿರ್ದೇಶಕ, ರಾ.ಹೆ.

Previous Post

ಮಲ್ಪೆ ಬಂದರಿನಲ್ಲಿ ಫೆ.5ರಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ…!!

Next Post

ಗಾಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆ: ಆನ್‌ಲೈನ್ ಗೇಮ್ ವ್ಯಸನದಿಂದ ಮೂವರು ಸಹೋದರಿಯರ ಆತ್ಮಹತ್ಯೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗಾಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆ: ಆನ್‌ಲೈನ್ ಗೇಮ್ ವ್ಯಸನದಿಂದ ಮೂವರು ಸಹೋದರಿಯರ ಆತ್ಮಹತ್ಯೆ….!

ಗಾಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆ: ಆನ್‌ಲೈನ್ ಗೇಮ್ ವ್ಯಸನದಿಂದ ಮೂವರು ಸಹೋದರಿಯರ ಆತ್ಮಹತ್ಯೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

31/07/2026
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹11 ಲಕ್ಷ ವಂಚನೆ; ಪ್ರಕರಣ ದಾಖಲು

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹11 ಲಕ್ಷ ವಂಚನೆ; ಪ್ರಕರಣ ದಾಖಲು

31/07/2026
ಉಡುಪಿ ಜಿಲ್ಲಾ ಬಿಜೆಪಿಯ ನೂತನ ಕಛೇರಿಯ ಕಟ್ಟಡ ಕಾಮಗಾರಿ ವೀಕ್ಷಿಸಿದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್..!

ಉಡುಪಿ ಜಿಲ್ಲಾ ಬಿಜೆಪಿಯ ನೂತನ ಕಛೇರಿಯ ಕಟ್ಟಡ ಕಾಮಗಾರಿ ವೀಕ್ಷಿಸಿದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್..!

31/07/2026
ಕನ್ನಡ ಚಿತ್ರನಟ ರಾಜೇಶ್ ನಟರಂಗ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಕನ್ನಡ ಚಿತ್ರನಟ ರಾಜೇಶ್ ನಟರಂಗ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

31/07/2026

Recent News