Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

Dhrishya News by Dhrishya News
02/02/2026
in ಕರಾವಳಿ, ಸುದ್ದಿಗಳು
0
ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!
0
SHARES
2
VIEWS
Share on FacebookShare on Twitter

ಬೆಳ್ತಂಗಡಿ, ಫೆ. 02 : ಕೊಕ್ಕಡದ ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು 330 ಯೂನಿಟ್ ರಕ್ತ ಸಂಗ್ರಹಣೆಯಾಗಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದೆ.

ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ನೈಮಿಷ ವೆಂಚರ್ಸ್, ಸೌತಡ್ಕ, ಇದರ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌(ರಿ.) ಸೌತಡ್ಕ, ಸೇವಾಭಾರತಿ (ರಿ.), ಕನ್ಯಾಡಿ, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ, ಕೆ.ಎಂ.ಸಿ. ರಕ್ತ ನಿಧಿ ಮಂಗಳೂರು, ರೋಟರಿ ಕ್ಯಾಂಸ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ, ದಿ | ಸುಹಾಸ್ ಶೆಟ್ಟಿ ಬಟ್ಟೆ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಫೆಬ್ರವರಿ 01 ರಂದು ಕೊಕ್ಕಡದ ಶ್ರೀ ರಾಮ ಸೇವಾ ಮಂದಿರದಲ್ಲಿ ಜರಗಿತು. ದಿ. ಸುಹಾಸ್ ಶೆಟ್ಟಿಯವರ ತಂದೆ ಮತ್ತು ತಾಯಿ ಶ್ರೀಮತಿ ಸುಲೋಚನ ಎಂ. ಶೆಟ್ಟಿ ಮತ್ತು ಶ್ರೀ ಮೋಹನ್ ಶೆಟ್ಟಿ ರವರು ಉದ್ಘಾಟಿಸಿ, ಶುಭಹಾರೈಸಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ, ಬೆಳ್ತಂಗಡಿ ಧಾರ್ಮಿಕ ಮುಖಂಡರಾದ ಶ್ರೀ ಡಿ. ಕಿರಣ್ ಚಂದ್ರ ಪುಷ್ಪಗಿರಿ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಶ್ರೀ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರು ಹಾಗೂ 50000 SANK ನಿರ್ದೇಶಕರಾದ ಶ್ರೀ ಕುಶಾಲಪ್ಪ ಗೌಡ ಪೂವಾಜೆ, ಕನ್ಯಾಡಿ ಸೇವಾಭಾರತಿ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್, ಸೌತಡ್ಕ ನೈಮಿಷ ವೆಂಚರ್ಸ್ ಉದ್ಯಮಿ ಶ್ರೀ ಬಾಲಕೃಷ್ಣ ನೈಮಿಷ,, ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ.). ಸಂಸ್ಥಾಪಕರುಶ್ರೀ ಲೋಕೇಶ್ ಕೋಡಿಕೆರೆ, ಪಾರಿಜಾತ ಹೋಟೆಲ್ ಮಾಲಕರು ಹಾಗೂ ಸೇವಾಭಾರತಿ ಕನ್ಯಾಡಿ ಆರೋಗ್ಯಮ್ ನ ಸಂಚಾಲಕರಾದ ಶ್ರೀ ಅಖಿಲೇಶ್ ಶೆಟ್ಟಿ ನೇತ್ರಾವತಿ, ಟೀಮ್ ಕಳವಾರಿನ ಸದಸ್ಯರಾದ ಶ್ರೀ ಸಚಿನ್ ಒದ್ದೂರು, ಬಜರಂಗದಳ ಕಾಟಿಪಳ್ಳ ಸುರತ್ಕಲ್ ನ ಸದಸ್ಯರು, ಡಾ. ವಾಣಿಕ KMC ಆಸ್ಪತ್ರೆ, ರೋಟರಿ ಕ್ಯಾಂಸ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ರೋ। ಡಾ. ರಾಮಕೃಷ್ಣ ರಾವ್. KSTA ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಉಜಿರೆಯ ಶ್ರೀಮತಿ ವೇದಾವತಿ ಜನಾರ್ಧನ್, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಇವರುಎಲ್ಲಾ ರಕ್ತದಾನಿಗಳಿಗೂ ಶ್ರೀ ಮದ್ಭಗವತ್ ಗೀತಾ ಪುಸ್ತಕವನ್ನು ನೀಡಿ ಶುಭ ಹಾರೈಸಿದರು. ಸುಮಾರು 54 ಬಾರಿ ರಕ್ತದಾನ ಮಾಡಿದಂತಹ ಹಿರಿಯ ಭಜಕರಾದ ಶ್ರೀ ಪುರುಷೋತ್ತಮ ಮಡ್ಯಲಗುಂಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗುರುತಿಸಿ, ಗೌರವಿಸಲಾಯಿತು. ಶಿಬಿರದ ಯಶಸ್ಸಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.) ಸೌತಡ್ಕ, ಸೇವಾ ಭಾರತಿ (ರಿ.) ಕನ್ಯಾಡಿ ॥, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ, ಉಜಿರೆ ಹವ್ಯಕ ವಲಯ ಉಪ್ಪಿನಂಗಡಿ ಮಂಡಲ, ಯುವ ಕೇಸರಿ ಕಾವು ಕೌಕ್ರಡಿ, ಸಿದ್ದಿವಿನಾಯಕ ಸೇವಾ ಸಮಿತಿ ಗೋಳಿತೊಟ್ಟು, ಯುವಶಕ್ತಿ ಫ್ರೆಂಡ್ ಮುಂಡೂರುಪಳಿಕೆ, ಹಿಂದೂ ಜಾಗರಣ ವೇದಿಕೆ ಶಿಶಿಲ, ಟೀಂ ಸಿಂಧೂರ ನೆಲ್ಯಾಡಿ, ಅಶ್ವಥ ಗೆಳೆಯರ ಬಳಗ ಹೊಸಮಜಲು, ನೆಲ್ಯಾಡಿ, ಶಿವಶಕ್ತಿ ಫ್ರೆಂಡ್ಸ್ ಕಳೆಂಜ, ವೀರ ಕೇಸರಿ ಅನಾರು, ಶಕ್ತಿ ಆಟೋ ಚಾಲಕ ಮಾಲಕರ ಸಂಘ, ಕೊಕ್ಕಡ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಗ್ನಿ ಶಾಖೆ, ಕಳವಾರು, sv7. ಸ್ಪೋರ್ಟ್ಸ್ ಕ್ಲಬ್ ಪಟ್ರಮೆ, ವಿಶ್ವ ಹಿಂದೂ ಪರಿಷದ್ ಬಜರಂಗದಳ ರೆಖ್ಯ, ಫ್ರೆಂಡ್ಸ್ ಧರ್ಮಸ್ಥಳ, ಶ್ರದ್ದಾ ಗೆಳೆಯರ ಬಳಗ ಉಪ್ಪಾರಪಳಿಕೆ, ಟೀಂ ಪುಷ್ಪಗಿರಿ, ಬೆಳ್ತಂಗಡಿ, ನವಶಕ್ತಿ ಆಟೋ ಚಾಲಕ ಮಾಲಕರ ಸಂಘ ಅರಸಿನಮಕ್ಕಿ, ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಪಟ್ಲಡ್ಕ, ನಿಸರ್ಗ ಯುವಜನೇತರ ಮಂಡಲ (ರಿ.) ಬರೆಂಗಾಯ ನಿಡ್ಲೆ, ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ರಿ., ಬಿಜೆಪಿ

ಯುವಮೋರ್ಚ ಬೆಳ್ತಂಗಡಿ ಮಂಡಲ, ಅಶ್ವಸಿರಿ ಗೆಳೆಯರ ಬಳಗ ಪಾಂಡಿಬೆಟ್ಟು, ಕೊಣಾಲು, ಜೈ ಶ್ರೀ ರಾಮ್ ಫ್ರೆಂಡ್ಸ್ ಪಾರ್ಪಿಕಲ್ಲು ಸಹಕರಿಸಿದ್ದಾರೆ. ಟೀಮ್ ಸುಹಾಸ್ ಶೆಟ್ಟಿ ಸದಸ್ಯರಾದ ಶ್ರೀ ರುಮ್ಮಯ್ಯ ಮಡಿವಾಳ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಶ್ರೀ ಕೇಶವ ಹಳ್ಳಿಂಗೇರಿ ನಿರೂಪಿಸಿ, ಶ್ರೀ ಬಾಲಕೃಷ್ಣ ನೈಮಿಷ ಕಾರ್ಯಕ್ರಮದ ಬಗ್ಗೆ ಶುಭನುಡಿಗಳನ್ನಾಡಿ ಧನ್ಯವಾದವಿತ್ತರು. ಶಿಬಿರದಲ್ಲಿ ಒಟ್ಟು 330 ಯೂನಿಟ್ ರಕ್ತ ಸಂಗ್ರಹಣೆಯಾಯಿತು.

Previous Post

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಕೇಂದ್ರ ಬಜೆಟ್: ಉದಯ ಶೆಟ್ಟಿ ಮುನಿಯಾಲು

Next Post

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

02/02/2026
ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

02/02/2026
ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

02/02/2026
ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

02/02/2026

Recent News

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

02/02/2026
ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

ರೈತರಿಗೆ ಸಿಹಿಸುದ್ದಿ: ಟ್ರ್ಯಾಕ್ಟರ್ ಖರೀದಿಗೆ ಶೇ.20ರಿಂದ 50ರಷ್ಟು ಸರ್ಕಾರಿ ಸಬ್ಸಿಡಿ…!

02/02/2026
ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

ಜಾಗತಿಕ ಮಾರುಕಟ್ಟೆ ಪರಿಣಾಮ: ಒಂದೇ ದಿನ 10 ಗ್ರಾಂ ಚಿನ್ನಕ್ಕೆ ₹9,000ಕ್ಕೂ ಹೆಚ್ಚು ಇಳಿಕೆ…!!

02/02/2026
ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ: ಕೊಕ್ಕಡದಲ್ಲಿ 330 ಯೂನಿಟ್ ರಕ್ತ ಸಂಗ್ರಹ…!!

02/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved