Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

2030ರ ವೇಳೆಗೆ ಭಾರತದ 50 ಲಕ್ಷ ಯುವಜನರಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ಕೌಶಲ್ಯ ತರಬೇತಿ ನೀಡಲು ಮುಂದಾದ IBM..!!

Dhrishya News by Dhrishya News
19/12/2025
in मौसम
0
2030ರ ವೇಳೆಗೆ ಭಾರತದ 50 ಲಕ್ಷ ಯುವಜನರಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ಕೌಶಲ್ಯ ತರಬೇತಿ ನೀಡಲು ಮುಂದಾದ IBM..!!
0
SHARES
12
VIEWS
Share on FacebookShare on Twitter

ಬೆಂಗಳೂರು, ಭಾರತ – ಡಿಸೆಂಬರ್ 19, 2025:IBM (NYSE: IBM) ಸಂಸ್ಥೆಯು ಭಾರತದಾದ್ಯಂತ ಇರುವ 50 ಲಕ್ಷ ಯುವ ಜನರಿಗೆ ಕೃತಕ ಬುದ್ಧಿಮತ್ತೆ (ಎಐ), ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ ನಲ್ಲಿ ಕೌಶಲ್ಯ ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದೆ. IBM SkillsBuild ಯೋಜನೆಯ ಭಾಗವಾಗಿ ನಡೆಯಲಿರುವ ಈ ಯೋಜನೆಯು ಸಮಾನ ಸಾಮರ್ಥ್ಯದ, ಭವಿಷ್ಯ ಸಿದ್ಧ ಸಿಬ್ಬಂದಿ ಬಳಗವನ್ನು ನಿರ್ಮಿಸುವ IBMನ ಧ್ಯೇಯಕ್ಕೆ ಪೂರಕವಾಗಿ ಮಾಡಿ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಆಸಕ್ತ ಕಲಿಕಾರ್ಥಿಗಳಿಗೆ ಸುಧಾರಿತ ಡಿಜಿಟಲ್ ಕೌಶಲ್ಯಗಳನ್ನು ಕಲಿಯಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

ಈ ಯೋಜನೆಯ ಮೂಲಕ IBM ಶಾಲೆಗಳು, ವಿಶ್ವವಿದ್ಯಾಲಯಗಳು, ವೃತ್ತಿಪರ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆಗಳಲ್ಲಿ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣವನ್ನು ಒದಗಿಸಲಿದೆ. All India Council for Technical Education (AICTE) ನಂತಹ ಸಂಸ್ಥೆಗಳೊಂದಿಗಿನ ಸಹಯೋಗದಲ್ಲಿ IBM ಪ್ರಾಯೋಗಿಕ ಎಐ ಕಲಿಕಾ ವ್ಯವಸ್ಥೆ, ಅಧ್ಯಾಪಕರ ಸಬಲೀಕರಣ ಯೋಜನೆಗಳು, ಪಠ್ಯಕ್ರಮ ಸಂಯೋಜನೆ, ಹ್ಯಾಕಥಾನ್‌ಗಳು ಮತ್ತು ಇಂಟರ್ನ್‌ಶಿಪ್‌ಗಳನ್ನು ನಡೆಸಲಿದೆ.

*ಈ ಕುರಿತು ಮಾತನಾಡಿರುವ IBMನ ಅಧ್ಯಕ್ಷರು, ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಅರವಿಂದ್ ಕೃಷ್ಣ ಅವರು* , “ಭಾರತವು ಎಐ ಮತ್ತು ಕ್ವಾಂಟಮ್‌ನಲ್ಲಿ ಜಗತ್ತನ್ನು ಮುನ್ನಡೆಸುವ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ನಿಪುಣತೆಯು ಆರ್ಥಿಕ ಸ್ಪರ್ಧಾತ್ಮಕತೆ, ವೈಜ್ಞಾನಿಕ ಪ್ರಗತಿ ಮತ್ತು ಸಾಮಾಜಿಕ ಪರಿವರ್ತನೆಯನ್ನು ನಿರ್ಧರಿಸಲಿದೆ. 50 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ನಮ್ಮ ಯೋಜನೆಯು ನಾವು ಆ ಭವಿಷ್ಯಕ್ಕಾಗಿ ಮಾಡುತ್ತಿರುವ ಹೂಡಿಕೆಯಾಗಿದೆ. ಸುಧಾರಿತ ಕೌಶಲ್ಯಗಳನ್ನು ಎಲ್ಲರಿಗೂ ಒದಗಿಸುವ ಮೂಲಕ ನಾವು ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಹೊಸತನ್ನು ರೂಪಿಸಲು, ಆವಿಷ್ಕಾರ ಮಾಡಲು ಮತ್ತು ಭಾರತದ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತಿದ್ದೇವೆ” ಎಂದು ಹೇಳಿದರು.

IBM ಸಂಸ್ಥೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಎಐ ಪಠ್ಯಕ್ರಮವನ್ನು ಸಹಯೋಗದ ಮೂಲಕ ಅಭಿವೃದ್ಧಿಪಡಿಸುತ್ತಿದ್ದು, ಈ ಮೂಲಕ ಶಾಲಾ ಮಟ್ಟದಲ್ಲಿಯೂ ಸಿದ್ಧತೆಯನ್ನು ಬಲಪಡಿಸುತ್ತಿದೆ. ಇದರೊಂದಿಗೆ AI Project Cookbook, Teacher Handbook ಮತ್ತು ವಿವರಣಾ ಮಾಡ್ಯೂಲ್‌ಗಳಂತಹ ಬೋಧನಾ ಸಾಮಗ್ರಿಗಳನ್ನೂ ಸಹ ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಗಳನ್ನು ಲೆಕ್ಕಶಾಸ್ತ್ರೀಯ ಚಿಂತನೆ (ಕಂಪ್ಯೂಟೇಷನಲ್ ಥಿಂಕಿಂಗ್) ಮತ್ತು ಜವಾಬ್ದಾರಿಯುತ ಎಐ ತತ್ವಗಳನ್ನು ಬೇಗನೇ ಅರಿತುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಶಿಕ್ಷಕರು ಎಐ ಶಿಕ್ಷಣವನ್ನು ಆತ್ಮವಿಶ್ವಾಸದಿಂದ ಮತ್ತು ದೊಡ್ಡ ಪ್ರಮಾಣದಲ್ಲಿ ತಲುಪಿಸಬಹುದಾಗಿದೆ.

ಈ ಯೋಜನೆಯ ಕೇಂದ್ರಬಿಂದುವಾಗಿರುವ IBM SkillsBuild, ಜಗತ್ತಿನ ಅತ್ಯಂತ ಸುಲಭವಾಗಿ ದೊರೆಯುವ ತಂತ್ರಜ್ಞಾನ ಕಲಿಕಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಕಲಿಕಾರ್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಎಐ, ಸೈಬರ್‌ ಸೆಕ್ಯುರಿಟಿ, ಕ್ವಾಂಟಮ್, ಕ್ಲೌಡ್, ಡೇಟಾ, ಸಸ್ಟೈನಬಿಲಿಟಿ ಮತ್ತು ಕಾರ್ಯಸ್ಥಳ ಸಿದ್ಧತೆ ಮುಂತಾದ ವಿಷಯದಲ್ಲಿ 1,000ಕ್ಕೂ ಹೆಚ್ಚು ಕೋರ್ಸ್‌ಗಳನ್ನು ನೀಡುತ್ತದೆ. ಜಾಗತಿಕವಾಗಿ 1.6 ಕೋಟಿಯಷ್ಟು ವಿದ್ಯಾರ್ಥಿಗಳನ್ನು ಹೊಂದಿರುವ SkillsBuild, ಇತರ ಯೋಜನೆಗಳ ಜೊತೆಗೆ 2030ರ ವೇಳೆಗೆ ಜಗತ್ತಿನಾದ್ಯಂತ 3 ಕೋಟಿ ಜನರಿಗೆ ತರಬೇತಿ ನೀಡುವ IBMನ ಉದ್ದೇಶದ ಕೇಂದ್ರಸ್ಥಾನದಲ್ಲಿದ್ದು, ಸಂಸ್ಥೆಯ ಈ ಉದ್ದೇಶ ಸಾಧನೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸಲಿದೆ.

Previous Post

ಕೆಎಂಸಿ ಮಣಿಪಾಲದಲ್ಲಿ ಸ್ಪಾರ್ಕ್ ಸಿ ಎಂ ಇ , ಪ್ರಾಯೋಗಿಕ ಕಾರ್ಯಾಗಾರ ಮತ್ತು ಮೊನೊಗ್ರಾಫ್ ಬಿಡುಗಡೆ..!!

Next Post

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಮಹಿಳೆಯರು ಅನುಸರಿಸಬಹುದಾದ 7 ಸುಲಭ ಮಾರ್ಗಗಳು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಮಹಿಳೆಯರು ಅನುಸರಿಸಬಹುದಾದ 7 ಸುಲಭ ಮಾರ್ಗಗಳು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ನಡೆದ ವೈಯಕ್ತಿಕ ತೇಜೋವಧೆಗೆ ಖಂಡನೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ನಡೆದ ವೈಯಕ್ತಿಕ ತೇಜೋವಧೆಗೆ ಖಂಡನೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

09/10/2026
ಉಡುಪಿಯಲ್ಲಿ ಬೃಹತ್ ಫುಡ್ ಅಂಡ್ ಬಿಸಿನೆಸ್ ಎಕ್ಸ್‌ಪೋ ಆರಂಭ

ಉಡುಪಿಯಲ್ಲಿ ಬೃಹತ್ ಫುಡ್ ಅಂಡ್ ಬಿಸಿನೆಸ್ ಎಕ್ಸ್‌ಪೋ ಆರಂಭ

09/10/2026
ಅಕ್ಟೋಬರ್ 10 : ಉದ್ಯಾವರದಲ್ಲಿ ಪಂಚ ಗ್ಯಾರಂಟಿ ಸಂಭ್ರಮೋತ್ಸವ

ಅಕ್ಟೋಬರ್ 10 : ಉದ್ಯಾವರದಲ್ಲಿ ಪಂಚ ಗ್ಯಾರಂಟಿ ಸಂಭ್ರಮೋತ್ಸವ

09/10/2026
ಕುಂದಾಪುರ: ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹1.64 ಲಕ್ಷ ವಂಚನೆ

ಕುಂದಾಪುರ: ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹1.64 ಲಕ್ಷ ವಂಚನೆ

09/10/2026

Recent News

imunify-bot-check