Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ : 52 ರನ್ ಗಳ ಭರ್ಜರಿ ಗೆಲುವು..!!

Dhrishya News by Dhrishya News
03/11/2025
in ಸುದ್ದಿಗಳು
0
0
SHARES
6
VIEWS
Share on FacebookShare on Twitter

ನವದೆಹಲಿ: ನವೆಂಬರ್ 03: ದಕ್ಷಿಣ ಆಫ್ರಿಕಾವನ್ನು 52 ರನ್‌ಗಳ ಅಂತರದಲ್ಲಿ ಸೋಲಿಸಿ, ಭಾರತ ಮಹಿಳಾ ತಂಡವು ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಹೆಣ್ಣುಮಕ್ಕಳು ಇತಿಹಾಸ ರಚಿಸಿದ್ದಾರೆ.

ಈ ಜಯದ ಮೂಲಕ 150 ಕೋಟಿ ಭಾರತೀಯರ ಕನಸನ್ನು ನೆರವೇರಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ, ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಮತ್ತೆ ಎತ್ತರಿಸಿದೆ.

ಬದಲಿ ಆಟಗಾರ್ತಿಯಾಗಿ ವಿಶ್ವಕಪ್‌ಗೆ ಸೇರಿದ ಶಫಾಲಿ ವರ್ಮಾ ಈ ಪಂದ್ಯದಲ್ಲಿ ಸಿಡಿಲಿನಂತಾದ 87 ರನ್‌ಗಳ ಇನ್ನಿಂಗ್ಸ್‌ ಆಡಿದರು ಮತ್ತು ಬೌಲಿಂಗ್‌ನಲ್ಲಿ ಪ್ರಮುಖ 2 ವಿಕೆಟ್ ಪಡೆದರು. ಇತ್ತ ದೀಪ್ತಿ ಶರ್ಮಾ ತಮ್ಮ ಆಲ್‌ರೌಂಡರ್‌ ಕೌಶಲ್ಯವನ್ನು ಪ್ರದರ್ಶಿಸಿ 58 ರನ್‌ಗಳ ಇನ್ನಿಂಗ್ಸ್‌ ಜೊತೆಗೆ ಐದು ವಿಕೆಟ್ ಪಡೆದು ತಂಡವನ್ನು ಗೆಲುವಿನ ದಾರಿಗೆ ಕರೆದೊಯ್ದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅದ್ಭುತ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ಕಟ್ಟಿದರು. ಸ್ಮೃತಿ 45 ರನ್‌ಗಳಿಸಿ ಔಟಾದರೂ, ಶಫಾಲಿಯ ಸ್ಫೋಟಕ ಆಟದಿಂದ ತಂಡದ ಮೊತ್ತ ಬಲಿಷ್ಠವಾಯಿತು.

ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 100 ರ ಸ್ಟ್ರೈಕ್‌ರೇಟ್‌ನಲ್ಲಿ 58 ರನ್‌ಗಳಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಕೇವಲ 24 ಎಸೆತಗಳಲ್ಲಿ 34 ರನ್‌ಗಳಿಸಿ ತಂಡದ ಮೊತ್ತವನ್ನು 288 ರನ್‌ಗಳವರೆಗೆ ಕೊಂಡೊಯ್ದರು.

ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳು ವಿಫಲವಾದ ಕಾರಣ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ಎದುರಿಸಲು ಪ್ರತಿಸ್ಪರ್ಧಿಗಳು ಸಂಪೂರ್ಣವಾಗಿ ವಿಫಲರಾದರು.

ಕೊನೆಗೂ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಭಾರತ ಮಹಿಳಾ ತಂಡವು ಐಸಿಸಿ ಟೂರ್ನಿಯಲ್ಲಿನ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. 

Previous Post

ಹೈದರಾಬಾದ್-ಬಿಜಾಪುರ ರಸ್ತೆಯಲ್ಲಿ ಬಸ್ಸಿಗೆ ಡಿಕ್ಕಿ ಹೊಡೆದ ಟಿಪ್ಪರ್; ಪ್ರಯಾಣಿಕರ ಮೇಲೆ ಬಿದ್ದ ಜಲ್ಲಿಕಲ್ಲು, 20 ಮಂದಿ ದುರ್ಮರಣ!

Next Post

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವದ ಅಸ್ವಸ್ಥತೆಗಳ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ )ಕಾರ್ಯಕ್ರಮ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವದ ಅಸ್ವಸ್ಥತೆಗಳ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ )ಕಾರ್ಯಕ್ರಮ..!!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವದ ಅಸ್ವಸ್ಥತೆಗಳ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ )ಕಾರ್ಯಕ್ರಮ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶಂಕರನಾರಾಯಣ: ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ದ್ರಾವಣ ಸೇವಿಸಿ ವ್ಯಕ್ತಿ ಮೃತ್ಯು

ಉಡುಪಿ: ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

21/09/2026
ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

21/09/2026
ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

21/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

21/09/2026

Recent News

imunify-bot-check