Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ :ಆರಾಧನಾ ರಂಗಪೂಜೆ, ಪಲ್ಲಕಿ ಉತ್ಸವ…!!

Dhrishya News by Dhrishya News
03/10/2025
in मौसम
0
0
SHARES
9
VIEWS
Share on FacebookShare on Twitter

ಉಡುಪಿ, ಅ. 3: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯ ದಶಮಿಯಂದು ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ|ಮೂ| ಸರ್ವೇಶ ತಂತ್ರಿಗಳ ತಂತ್ರತ್ವದಲ್ಲಿ, ವೇ|ಮೂ| ವಿಖ್ಯಾತ್ ಭಟ್ ನೇತೃತ್ವದಲ್ಲಿ ಪುರೋಹಿತ ಗಣೇಶ್ ಸರಳಾಯರ ಸಹಕಾರದಲ್ಲಿ ನೆರವೇರಿತು.

ಸಂಜೆ ಬಲಿ ಉತ್ಸವ, ರಂಗಪೂಜಾ ಮಹೋತ್ಸವ, ಮಹಾಮಂತ್ರಾಕ್ಷತೆ ನೆರವೇರಿತು. ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತು ಆಕರ್ಷಣೆಯಾಗಿತ್ತು. ಪಲ್ಲಕಿ ಉತ್ಸವ, ವಸಂತ ಪೂಜೆ ನಡೆಯಿತು. ವಸಂತ ಪೂಜೆಯಲ್ಲಿ ಸಮರ್ಪಿಸುವ ಅಷ್ಟಾವಧಾನದಲ್ಲಿ ವೇ|ಮೂ| ಡಾ| ಶ್ರೀವತ್ಸ ಅಡಿಗ, ಸ್ವಸ್ತಿಕ್ ಆಚಾರ್ಯ, ನಾಗಶಯನ ಪದಕಣ್ಣಾಯ, ವೀಣಾ ಆರ್. ಭಟ್, ವೇ|ಮೂ| ವಿಜಯ ಭಟ್, ಚಂದ್ರಕಲಾ ಶರ್ಮ, ಶ್ರೀ ದುರ್ಗಾ ಆದಿಶಕ್ತಿ ಭಜನ ಮಂಡಳಿ ಸದಸ್ಯರು ಸಹಕರಿಸಿದ್ದರು. ಪಲ್ಲಕಿ ಚಾಮರ ಸೇವೆ ಸಹಿತ ನೃತ್ಯವನ್ನು ಬೆಳ್ಮಣ್ಣು ವನದುರ್ಗಾ ಬಳಗದವರು ನಡೆಸಿದರು.

ನೃತ್ಯ ಸುತ್ತನ್ನು ಸ್ವಾತಿ ಆಚಾರ್ಯ, ಯಕ್ಷಗಾನ ಸುತ್ತಿನಲ್ಲಿ ಉಪ್ಪೂರು ಭಾಗ್ಯಲಕ್ಷ್ಮೀ, ಭಜನೆ ಸುತ್ತಿನಲ್ಲಿ ಗುಂಡಿಬೈಲು ಕಾಲಭೈರವ ಭಜನ ಮಂಡಳಿ, ಶೃಂಗಾರ ವಾದ್ಯದಲ್ಲಿ ವಿಜಯ ಶೇರಿಗಾರ್ ಮತ್ತು ಬಳಗದವರು, ನಾದಸ್ವರ ವಾದನದಲ್ಲಿ ಮುರಳೀಧರ ಮುದ್ರಾಡಿ ಮತ್ತು ತಂಡ, ಚೆಂಡೆ ವಾದ್ಯದಲ್ಲಿ ಬೆಳ್ಕಳೆ ಚೆಂಡೆ ಬಳಗದ ಸದಸ್ಯರಿಂದ, ಪಂಚ ವಾದ್ಯ ವಾದಕರಿಂದ ಪಂಚ ವಾದ್ಯ ಸೇವೆ ನೆರವೇರಿತು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ಆನಂದ ಬಾಯರಿ ಸರ್ವ ಸೇವೆಯಲ್ಲಿ ಸಹಕರಿಸಿದ್ದರು. ದೇವಿಯ ನರ್ತನ ಸೇವೆಯನ್ನು ಪಳ್ಳಿ ಗುರುಪ್ರಸಾದ್ ಭಟ್ ನಿರ್ವಹಿಸಿದ್ದರು. ನೈವೇದ್ಯ ತಯಾರಿಯಲ್ಲಿ ಸದಾನಂದ ಭಟ್ ಸಹಕರಿಸಿದ್ದರು.

ದೇವಿಯ ಧ್ಯಾನವನ್ನು ಉಲಿದ ಬಳಿಕ ದೀಪಾರಾಧನೆ ಸಹಿತ ನೆರವೇರುವ ರಂಗಪೂಜೆಯ ಮಹತ್ವವನ್ನು ನೆರೆದ ಭಕ್ತರಿಗೆ ವಿವರಿಸಲಾಯಿತು. ರಂಗಪೂಜೆಯಲ್ಲಿ ತಪ್ತತ್ ದೇವತೆಗಳಿಗೆ ಉಣಬಡಿಸಿದ ಅಪೂಪ ಕದಳಿ ಸಹಿತವಾದ ಅನ್ನ ಮುದ್ರೆಯನ್ನು ನೆರೆದ ಭಕ್ತರಿಗೆ ವಿತರಿಸಲಾಯಿತು. ಈ ಅನ್ನ ಮುದ್ರೆಯ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ರಂಗಪೂಜೆಯ ಅನ್ನ ಮುದ್ರೆಯನ್ನು ಸಾಕಷ್ಟು ಭಕ್ತರು ಸ್ವೀಕರಿಸಿದರು.

ರಂಗ ಪೂಜೆಯ ಬಳಿಕ ನೆರವೇರಿದ ಮಹಾಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ದಂಪತಿ, ಆಚಾರ್ಯ, ಕನ್ನಿಕಾ, ಬ್ರಹ್ಮಚಾರಿ ಪೂಜೆ ನೆರವೇರಿತು. ಬೆಳಗ್ಗಿನಿಂದ ರಾತ್ರಿಯವರೆಗೂ ಅನ್ನಪ್ರಸಾದ ನಿರಂತರವಾಗಿ ಕ್ಷೇತ್ರದಲ್ಲಿ ಭಕ್ತರಿಗೆ ಉಣ ಬಡಿಸಲಾಗಿತ್ತು. ಪ್ರಾತಃ ಕಾಲದಿಂದಲೇ ಕ್ಷೇತ್ರಕ್ಕೆ ದಂಡುದಂಡಾಗಿ ಭಕ್ತರು ಭೇಟಿ ನೀಡುತ್ತಿದ್ದು, ಕ್ಷೇತ್ರದಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯು ಭಕ್ತರ ಶ್ಲಾಘನೆಗೆ ಕಾರಣವಾಯಿತು. ನಿರಂತರ 11 ದಿನಗಳ ಕಾಲ ದೇವತಾರಾಧನೆ, ಕಲಾರಾಧನೆ, ಸಮಾರಾಧನೆಯಿಂದ ಉತ್ಸವ ಯಶಸ್ವಿಯಾಗಿ ನೆರವೇರಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

Previous Post

ಸ್ವಚ್ಛ ಭಾರತ್ ಅಭಿಯಾನಕ್ಕೆ ಪರ್ಯಾಯ ಶ್ರೀ ಪುತ್ತಿಗೆ  ಶ್ರೀ ಸುಗುಣೇಂಧ್ರ ತೀರ್ಥ ಶ್ರೀಪಾದರಿಂದ ಚಾಲನೆ..!!

Next Post

ಕಾರ್ಕಳದ ಪುಲ್ಕೆರಿ ಯಲ್ಲಿ ಸ್ವಚ್ಛ ತಾ ಕಾರ್ಯಕ್ರಮ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳದ ಪುಲ್ಕೆರಿ ಯಲ್ಲಿ ಸ್ವಚ್ಛ ತಾ ಕಾರ್ಯಕ್ರಮ..!!

ಕಾರ್ಕಳದ ಪುಲ್ಕೆರಿ ಯಲ್ಲಿ ಸ್ವಚ್ಛ ತಾ ಕಾರ್ಯಕ್ರಮ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶಂಕರನಾರಾಯಣ: ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ದ್ರಾವಣ ಸೇವಿಸಿ ವ್ಯಕ್ತಿ ಮೃತ್ಯು

ಉಡುಪಿ: ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

21/09/2026
ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

21/09/2026
ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

21/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

21/09/2026

Recent News

imunify-bot-check