ಉಡುಪಿ : ಜುಲೈ 30: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠ ಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಕರ್ನಾಟಕ ಯೋಗಾಸನ ಕ್ರೀಡಾಸಂಸ್ಥೆಯ (ರಿ.) ಬೆಂಗಳೂರು ಸಹಯೋಗದೊಂದಿಗೆ ಬರುವ ಆಗಸ್ಟ್ 3 ಭಾನುವಾರದಂದು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ವರ್ಧೆ – 2025 ಆಯೋಜಿಸಲಾಗಿದೆ. ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಯೋಗ ಸ್ವರ್ಧೆ ನಡೆಯಲಿದ್ದು, ಸ್ಥಳದಲ್ಲಿಯೇ ಹೆಸರು ನೊಂದಣೆ ಮಾಡಲು ಅವಕಾಶವಿರುತ್ತದೆ.
-3 10 80 14, 15 80 18, 19 80 28, 29 80 35, 36 ರಿಂದ 45, 46 ರಿಂದ 55 ಪ್ರತ್ಯೇಕವಾಗಿ ಸ್ಪರ್ಧೆಗಳು ಜರುಗುತ್ತವೆ. ಸಾಂಪ್ರದಾಯಕ ಯೋಗಾಸನ, ಮುಂದೆ, ಹಿಂದೆ, ಬಾಗಿ ತಿರುಗಿ, ಕಾಲಿನ ಮೇಲೆ, ಕೈ ಮೇಲೆ, ಬೆನ್ನಿನ ಮೇಲೆ, ಕಲಾತ್ಮಕ ವೈಯಕ್ತಿಕ, ಕಲಾತ್ಮಕ ಜೋಡಿ, ಲಯಬದ್ದ ಜೋಡಿ, ರಿದಮಿಕ್ ಯೋಗಾಸನ ಸ್ಪರ್ಧೆಗಳು ಜರುಗುವುದು. ಹೆಚ್ಚಿನ ಮಾಹಿತಿಗಾಗಿ ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್ (9448952964) ಮತ್ತು ಕೆ. ವೈ. ಎಸ್. ಎ. ನ ಕಾರ್ಯದರ್ಶಿ ಕೆ. ಅಶೋಕ್ ಕುಮಾರ್ (9740539564) ಸಂಪರ್ಕಿಸಬಹುದು. ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ 9.00 ಕ್ಕೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥಪಾದರು ನಡೆಸಲಿದ್ದು ಬಹುಮಾನ ವಿತರಣೆ ಕಾರ್ಯಕ್ರಮ ಅಪರಾಹ್ನ ನಡೆಯಲಿದೆ ಎಂದು ಶ್ರೀ ಮಠದ ಮಂಡಲೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.








