Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಪತ್ರಿಕೆ ಓದುವುದು ದೃಷ್ಟಿಕೋನ ವಿಸ್ತಾರಕ್ಕೆ ದಾರಿ – ಡಾ. ಮಹಾಬಲೇಶ್ವರ ರಾವ್..!!

Dhrishya News by Dhrishya News
23/07/2025
in मौसम
0
ಪತ್ರಿಕೆ ಓದುವುದು ದೃಷ್ಟಿಕೋನ ವಿಸ್ತಾರಕ್ಕೆ ದಾರಿ – ಡಾ. ಮಹಾಬಲೇಶ್ವರ ರಾವ್..!!
0
SHARES
12
VIEWS
Share on FacebookShare on Twitter

ಕಾರ್ಕಳ: ಜುಲೈ 23:ಪತ್ರಿಕೆ ಓದುವುದರಿಂದ ವಿವಿಧ ದೃಷ್ಟಿಕೋಗಳನ್ನು ಅರಿತುಕೊಳ್ಳಲು ಸಾಧ್ಯವಿದೆ. ಪ್ರತಿದಿನ ಒಂದೇ ಪತ್ರಿಕೆಗೆ ಸೀಮಿತವಾಗದೇ, ಐದಕ್ಕಿಂತ ಹೆಚ್ಚು ಭಿನ್ನ ಪ್ರಕಾರದ ಪತ್ರಿಕೆಗಳನ್ನು ಓದುವ ಅಗತ್ಯವಿದೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳ ಆಳವಾದ ಅಧ್ಯಯನ, ಹಾಗೂ ಕ್ರೀಡೆ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಕಲೆ-ಸಾಹಿತ್ಯ, ಪರಿಸರ ಹಾಗೂ ಆರ್ಥಿಕ ವಿಭಾಗಗಳ ವರದಿಗಳನ್ನು ವಿಶ್ಲೇಷಿಸುವ ಅಭ್ಯಾಸ ವಿದ್ಯಾರ್ಥಿಗಳಲ್ಲಿ ಬೆಳೆಬೇಕು ಎಂದು ಉಡುಪಿ ಟಿ.ಎಂ.ಎ. ಪೈ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಹೇಳಿದರು.

ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು, ಇದರ ಸಹಯೋಗದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ – 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಭಾವೋದ್ವೇಗಾತ್ಮಕ ಅಥವಾ ಸೆನ್ಸೇಷನಲ್ ಸುದ್ದಿಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡಬೇಕು. ಮೌಲ್ಯಾಧಾರಿತ, ವಿಶ್ಲೇಷಣಾತ್ಮಕ ಹಾಗೂ ನೈಜ ಮಾಹಿತಿಗೆ ಹೆಚ್ಚು ಒತ್ತು ನೀಡುವುದು ಬುದ್ಧಿವಿಕಾಸಕ್ಕೆ ಅಗತ್ಯ,” ಎಂದು ಹೇಳಿದರು.

ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾಧ್ಯಮದ ನೈತಿಕ ಬದ್ಧತೆಯ ಕುರಿತು ಮಾತನಾಡಿ, “ಮಾಧ್ಯಮಗಳು ನೈತಿಕತೆ ಮತ್ತು ಸಾಮಾಜಿಕ ಬದ್ಧತೆ ಹೊಂದಿದಾಗ ಮಾತ್ರ ನ್ಯಾಯ, ಸತ್ಯ ಮತ್ತು ಸಮಾನತೆಯ ಪ್ರಬಲ ಸಾಧನಗಳಾಗಿ ಪರಿಣಮಿಸಬಹುದು. ಮಾಧ್ಯಮಗಳು ಲೋಕಜಾಗೃತಿಗೆ ಶಕ್ತಿಯಾಗಬೇಕು; ವೆಬ್ ಮಾಧ್ಯಮಗಳು ಜಾಗೃತಿ ಮೂಡಿಸಬೇಕು ಹೊರತು ಭಯ ಹುಟ್ಟಿಸುವ ಕಾರ್ಯ ಮಾಡಬಾರದು,” ಎಂದರು.

ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಮಾತನಾಡಿ, “ಪತ್ರಿಕೆ ಓದುವುದರಿಂದ ಕನ್ನಡ ಭಾಷೆಯ ಬಳಕೆ ಹಾಗೂ ಬರವಣಿಗೆಯು ಉತ್ತಮಗೊಳ್ಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬರುವ ಜಾಹಿರಾತುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನಂಬಿಕೆ ಇಡುವ ಹಿನ್ನೆಲೆಯಲ್ಲಿ ಅಪರಾಧಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಪತ್ರಿಕೆಗೆ ಮಹತ್ವದ ಪಾತ್ರವಿದೆ,” ಹೇಳಿದರು.

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ಪತ್ರಿಕೆಗಳು ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕ ಸದಾನಂದ ಪಾಟ್ಕರ್ ತೆಳ್ಳಾರು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಕೆ.ಎಂ. ಖಲೀಲ್, ಜಿಲ್ಲಾ ಪ್ರತಿನಿಧಿ ಉದಯ್ ಕುಮಾರ್ ಮುಂಡ್ಕೂರು, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ವಾಸುದೇವ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು ಹಾಗೂ ಅವಿನ್ ಶೆಟ್ಟಿ ಧನ್ಯವಾದ ನೀಡಿದರು.

Previous Post

ನಿಮಿಷಾ ಪ್ರಿಯಾ ಮರಣದಂಡನೆ ರದ್ದು : ಧರ್ಮಗುರು ಡಾ. ಕೆ.ಎ. ಪೌಲ್ ಘೋಷಣೆ..!!

Next Post

ನಿರಂತರ ಮಳೆ: ನಾಳೆ (ಜು. 24) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ, ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನಾಳೆ ಜುಲೈ (17)ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

ನಿರಂತರ ಮಳೆ: ನಾಳೆ (ಜು. 24) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ, ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

02/10/2026
ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

02/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026

Recent News

imunify-bot-check