Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಡಾ. ಶರತ್ ಕೆ. ರಾವ್ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ನಿರ್ವಹಣೆಯಲ್ಲಿ ಆದರ್ಶ ನಾಯಕತ್ವಕ್ಕಾಗಿ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್, ಲಂಡನ್ ನ ಗೌರವಾನ್ವಿತ ಎಫ್‌ಆರ್‌ಸಿಪಿ ಪ್ರಶಸ್ತಿ..!!

Dhrishya News by Dhrishya News
12/07/2025
in ಸುದ್ದಿಗಳು
0
ಡಾ. ಶರತ್ ಕೆ. ರಾವ್ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ನಿರ್ವಹಣೆಯಲ್ಲಿ ಆದರ್ಶ ನಾಯಕತ್ವಕ್ಕಾಗಿ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್, ಲಂಡನ್ ನ ಗೌರವಾನ್ವಿತ ಎಫ್‌ಆರ್‌ಸಿಪಿ ಪ್ರಶಸ್ತಿ..!!
0
SHARES
108
VIEWS
Share on FacebookShare on Twitter

ಮಣಿಪಾಲ, ಜುಲೈ 12: ಪ್ರಸಿದ್ಧ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಮತ್ತು ಶೈಕ್ಷಣಿಕ ನಾಯಕ ಡಾ. ಶರತ್ ಕುಮಾರ್ ರಾವ್ ಕೆ ಅವರ, ವೈದ್ಯಕೀಯ ನಾಯಕತ್ವ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಅವರ ಸಾಧನೆ ಕೊಡುಗೆಗಳನ್ನು ಗುರುತಿಸಿ, ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅದರ ಗೌರವ ಡಾಕ್ಟರೇಟ್ (ಎಫ್ ಆರ್ ಸಿ ಪಿ) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಜುಲೈ 8 ರಂದು ಲಂಡನ್‌ನ ರಾಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಶರತ್ ಕೆ ರಾವ್ ಅವರಿಗೆ ಅಧಿಕೃತವಾಗಿ ಪ್ರದಾನ ಮಾಡಲಾಯಿತು.

ಡಾ. ರಾವ್ ಅವರು ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸೆಲರ್ (ಪ್ರೊ ಉಪಕುಲಪತಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯನ್ನು ಅವರು 2023ರಿಂದ ನಿಭಿಯಿಸುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು 2019 ರಿಂದ 2023 ರವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ), ಮಣಿಪಾಲ್ ನ ಡೀನ್ ಆಗಿದ್ದರು. ಅದಕ್ಕೂ ಮೊದಲು ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಅಸೋಸಿಯೇಟ್ ಡೀನ್ (2015–2019) ಮತ್ತು ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ (2009–2014) ಆಗಿ ಕಾರ್ಯನಿರ್ವಹಿಸಿದ್ದರು. ಈ ಎಲ್ಲಾ ಹುದ್ದೆಗಳಲ್ಲಿ ಇರುವಾಗ ಅವರು ನಿರಂತರವಾಗಿ ಸಂಸ್ಥೆಯ ಬೆಳವಣಿಗೆ, ಶೈಕ್ಷಣಿಕ ಫಲಿತಾಂಶಗಳ ಸುಧಾರಣೆ, ಮತ್ತು ಕ್ಲಿನಿಕಲ್ ತರಬೇತಿ ಪರಿಸರದ ಬಲಪಡಿಕೆಗೆ ನಿರಂತರ ಶ್ರಮಿಸಿ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ.

ಡಾ. ರಾವ್ ಅವರ ಆಡಳಿತಾತ್ಮಕ ಕೌಶಲ್ಯ ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ವೈದ್ಯಕೀಯ ವೃತ್ತಿಯೂ ಕೂಡ ಸುಪ್ರಸಿದ್ಧವಾಗಿದೆ. ಸಂಕೀರ್ಣ ಗಾಯಚಿಕಿತ್ಸೆ, ಸಂಧಿ ಜೋಡಣೆ, ಬದಲಾವಣೆ ಮತ್ತು ಮಣಿಗಂಟು ಆರ್ಥೋಸ್ಕೋಪಿ (knee arthroscopy) ಯಲ್ಲಿ ನಿಪುಣರಾಗಿರುವ ಅವರು, ಜರ್ಮನಿ, ಇಟಲಿ, ಯುಕೆ, ಮತ್ತು ಆಸ್ಟ್ರೇಲಿಯಾದ ಪ್ರಸಿದ್ಧ ವೈದ್ಯಕೀಯ ಕೇಂದ್ರಗಳಲ್ಲಿ ಮಂಡಿ ಮತ್ತು ಸೊಂಟದ ಬದಲೀ ಶಸ್ತ್ರಚಿಕಿತ್ಸೆಯಲ್ಲಿ ಉನ್ನತ ತರಬೇತಿ ಪಡೆದುಕೊಂಡಿದ್ದಾರೆ. ಈ ಅಂತಾರಾಷ್ಟ್ರೀಯ ಅನುಭವದಿಂದ ಅವರು ಮಾಹೆ ಮತ್ತು ಇತರ ಸಂಸ್ಥೆಗಳಲ್ಲಿ ಆರ್ಥೋಪೆಡಿಕ್ ಆರೈಕೆ ಮತ್ತು ಶಸ್ತ್ರಚಿಕಿತ್ಸಾ ತರಬೇತಿಯ ಗುಣಮಟ್ಟವನ್ನು ಎತ್ತರಕ್ಕೆ ಏರಿಸಿದ್ದಾರೆ.

ಈ ಗೌರವ ಡಾಕ್ಟರೇಟ್ ಡಾ.‌ರಾವ್ ಅವರ ದೂರಗಾಮಿ ಆರೋಗ್ಯ ಸೇವೆಗಳ ನಾಯಕತ್ವ ಮತ್ತು ನೀತಿಯ ದೂರವ್ಯಾಪಿ ಪರಿಣಾಮವನ್ನು ಗುರುತಿಸುತ್ತದೆ. ಶೈಕ್ಷಣಿಕ ಶ್ರೇಷ್ಠತೆ ಮತ್ತು ದಕ್ಷ, ರೋಗಿ-ಕೇಂದ್ರಿತ ಆರೋಗ್ಯ ಸೇವಾ ವಿತರಣೆಯನ್ನು ಸಮತೋಲನಗೊಳಿಸುವ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಅವರ ಕೊಡುಗೆಯನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಲಂಡನ್ ರಾಯಲ್ ಕಾಲೇಜ್ ಇಂತಹ ಗೌರವಗಳನ್ನು ಕೇವಲ ಆರೋಗ್ಯ ಕ್ಷೇತ್ರದಲ್ಲಿ ಶಾಶ್ವತ ಮತ್ತು ಪರಿವರ್ತನಾತ್ಮಕ ಪರಿಣಾಮ ಉಂಟುಮಾಡಿದ ವ್ಯಕ್ತಿಗಳಿಗೆ ಮಾತ್ರ ನೀಡುತ್ತದೆ.

ಈ ಸಾಧನೆಗಾಗಿ ಡಾ. ರಾವ್ ಅವರನ್ನು ಅಭಿನಂಧಿಸಿದ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಮಾತನಾಡಿ, ಈ ಗೌರವಕ್ಕೆ ಡಾ. ಶರತ್ ರಾವ್ ಅವರು ಅತಿ ಹೆಚ್ಚು ಅರ್ಹರಾಗಿದ್ದಾರೆ ‌. ಅವರು ಶೈಕ್ಷಣಿಕ ಸಮಗ್ರತೆ, ವೈದ್ಯಕೀಯ ಶ್ರೇಷ್ಠತೆ ಮತ್ತು ದೂರದೃಷ್ಟಿಯ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಅವರ ಕೆಲಸ ಮಾಹೆಯಲ್ಲಿ ಮಾತ್ರವಲ್ಲದೆ ವಿಶಾಲ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಅಜರಾಮರ ಗುರುತು ಸೃಷ್ಟಿ ಸಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರ ಈ ಸಾಧನೆಗಳನ್ನು ಗುರುತಿಸಿರುವುದು ನಮಗೆ ಹೆಮ್ಮೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ MAHE ನ ಪ್ರೋ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಅವರು 

ಡಾ. ಶರತ್ ರಾವ್ ಅವರು ಉದ್ದೇಶಪೂರ್ಣ ನಾಯಕತ್ವದ ಪ್ರತಿನಿಧಿಯಾಗಿ ಶಸ್ತ್ರಚಿಕಿತ್ಸಾ ಕೋಣೆ, ತರಗತಿ ಕೋಣೆ ಮತ್ತು ಆಡಳಿತ ನಿರ್ವಹಣಾ ಹುದ್ದೆಗಳಲ್ಲಿ ಗುರುತಿಸಲ್ಪಡುತ್ತಾರೆ. ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ನೀಡಿದ ಈ ಗೌರವ ಒಂದು ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೇಲೆ ಅವರ ಶಾಶ್ವತ ಪರಿಣಾಮದ ಪ್ರತಿಫಲ ಆಗಿದೆ.

ಡಾ. ರಾವ್ ಅವರಿಗೆ ದೊರಕಿದ ಗೌರವ ಡಾಕ್ಟರೇಟ್ ಅವರು ಹೊಸತನ್ನು ನಿರಂತರವಾಗಿ ಕಲ್ಪಿಸುವ, ಮಾರ್ಗದರ್ಶಕ ನಾಯಕತ್ವ ವಹಿಸುವ, ಮತ್ತು ರೋಗಿಗಳಿಗೂ ವೈದ್ಯಕೀಯ ವೃತ್ತಿಪರರಿಗೂ ಸೇವೆ ಸಲ್ಲಿಸುವ ವ್ಯವಸ್ಥೆಗಳ ನಿರ್ಮಾಣದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುವ ವೃತ್ತಿಜೀವನದ ಇನ್ನೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು Institution of Eminence ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು. ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ

Previous Post

ಮನೆಮನೆಗೆ ಪೊಲೀಸ್‌” ಅಭಿಯಾನ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಶ್ರೀ ಕಿರಣ್‌ ಎಸ್‌. ಗಂಗಣ್ಣನವರ್‌ ಚಾಲನೆ..!!

Next Post

ಸುರತ್ಕಲ್ ನಲ್ಲಿರುವ MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಕಾರ್ಮಿಕರ ಮೃತ್ಯು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸುರತ್ಕಲ್ ನಲ್ಲಿರುವ MRPLನಲ್ಲಿ ವಿಷಾನಿಲ ಸೋರಿಕೆ – ಇಬ್ಬರು ಕಾರ್ಮಿಕರ ಮೃತ್ಯು..!!

ಸುರತ್ಕಲ್ ನಲ್ಲಿರುವ MRPLನಲ್ಲಿ ವಿಷಾನಿಲ ಸೋರಿಕೆ - ಇಬ್ಬರು ಕಾರ್ಮಿಕರ ಮೃತ್ಯು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

30/07/2025
ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

30/07/2025
ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

30/07/2025
ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

30/07/2025

Recent News

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘಕ್ಕೆ ರೂಪಾಯಿ 1.55ಕೋಟಿ ಲಾಭ..!!

30/07/2025
ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ‘ಕೋಟಿ ಚೆನ್ನಯೆರ್’ ನಾಟಕ ಯಶಸ್ವಿ ಪ್ರದರ್ಶನ

30/07/2025
ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

ಕೆಪಿಸಿಸಿ ಪ್ರಚಾರ ಸಮಿತಿ: ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ..!!

30/07/2025
ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

ಆಗಸ್ಟ್ 3 ರಂದು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!!

30/07/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved