ಉಡುಪಿ: ಜುಲೈ 11: ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ನಾಡ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ.
ಪಿತ್ರೋಡಿ ನಿವಾಸಿ, ಮೀನುಗಾರ ನೀಲು (48) ಮೃತ ವ್ಯಕ್ತಿ. ಈ ಭಾಗದಲ್ಲಿ ಗಾಳಿ ಮಳೆಯ ತೀವ್ರತೆ ಜೋರಾಗಿದ್ದು ಸಮುದ್ರದ ಅಲೆಯ ಹೊಡೆತಕ್ಕೆ ಇವರಿದ್ದ ನಾಡದೋಣಿ ಮಗುಚಿ ಬಿದ್ದಿದೆ.
ಈ ವೇಳೆ ನೀಲು ಅವರು ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ. ಆಪದ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಮೃತದೇಹವನ್ನು ಮೇಲಕ್ಕೆತ್ತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲು ಸಹಕರಿಸಿದರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.