ಉಡುಪಿ :ಜುಲೈ 09: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU)ಇಂದು ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ,ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿದಿ ದೇಶಾದ್ಯಂತ ಹರಾತಳ,ಜೈಲು ಭರೋ,ಮುಷ್ಕರ ಕ್ಕೆ ಕರೆ ನೀಡಿದ್ದು ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ ಕೇಂದ್ರಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆದಿದೆ.
ಉಡುಪಿಯಲ್ಲಿ JCTU ನೇತ್ರತ್ವದಲ್ಲಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಉಡುಪಿ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಂಚೆ ಅಧಿಕ್ಷಕರ ಮೂಲಕ ದೇಶದ ಪ್ರಧಾನ ಮಂತ್ರಿಯವರಿಗೆ ಕಾರ್ಮಿಕರ ಬೇಡಿಕೆಗಳ ಮನವಿಯನ್ನು ನೀಡಲಾಯಿತು. ಸಭೆಯನ್ನು ಉದ್ದೇಶಿಸಿ ಪ್ರಧಾನ ವಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಯವರು ಕಾರ್ಮಿಕ ಕಾನೂನು ತಿದ್ದುಪಡಿಯಿಂದಾಹಿ ಕಾರ್ಮಿಕರಿಗೆ ಆಗುವ ಸಮಸ್ಯೆಗಳ ,ಅನ್ಯಾಯದ ವಿರುದ್ಧ ಮಾತಾನಾಡಿದರು.
ಪ್ರತಿಭಟನೆ ಸಭೆಯಲ್ಲಿ JCTU ನ ಭಾಗವಾಗಿ ಇರುವಂತಹ AITUC ಸಂಘದ ಉಡುಪಿ ಜಿಲ್ಲಾ ಮುಖಂಡರಾದ ಯು.ಶಿವನಂದ,ಶಶಿಕಲಾ,INTUC ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ಕಿರಣ್ ಹೆಗ್ಡೆ,ಶಿವರಾಮ್,ಪ್ರದೀಪ್, RMS(ಅಂಚೆ) ಯೂನಿಯನ್ ಉಡುಪಿ ಮುಖಂಡರಾದ ದಾಮೋದರ ಭಟ್ ,AIBEA ಸಂಘಟನೆಯ ಉಡುಪಿ ಜಿಲ್ಲಾ ಮುಖಂಡರಾದ ನಾಗೇಶ್ ನಾಯಕ್ ಮತ್ತು ರಮೇಶ್, ವಿಮಾ ನೌಕರರ ಸಂಘದ ಮುಖಂಡರಾದ ಕೆ.ವಿಶ್ವನಾಥ, ಪ್ರಭಾಕರ್,ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಭಾರತಿ.ಎಸ್,ಕಾರ್ಯದರ್ಶಿ ಸುಶೀಲಾ ನಾಡ,ಕೋಶಾಧಿಕಾರಿ ಯಶೋಧ,ಮುಖಂಡರಾದ ಜಯಲಕ್ಷ್ಮಿ, ಪ್ರಮೀಳಾ, ಪುಷ್ಪ,ಆಶಾ ಕುಂದಾಪುರ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಶೇಖರ್ ಬಂಗೇರ,ದಯಾನಂದ ಕೋಟ್ಯಾನ್, ಸುಭಾಸ್ ನಾಯಕ್,ಗಣೇಶ ನಾಯಕ್, ರಮೇಶ್ಉಡುಪಿ ,ಸೈಯಾದ್ ಅಲಿ,ರಾಮ ಕಾರ್ಕಡ,ರಮೇಶ್ ಬ್ರಹ್ಮವಾರ,ಮುರಳಿ,ವಾಮನ ಪೂಜಾರಿ,ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕಾರದ ಸಂಜೀವ ಬಳ್ಕೂರು,ಅಟೋ ಯೂನಿಯನ್ ಮುಖಂಡರಾದ ಸದಾಶಿವ ಪೂಜಾರಿ ಬ್ರಹ್ಮವಾರ,ಕಾರ್ಕಳ ತಾಲೂಕು ಸಿಐಟಿಯು ಮುಖಂಡರಾದ ಸುನೀತಾ ಶೆಟ್ಟಿ, ನಾಗೇಶ್,ಶೇಖರ್ ಕುಲಾಲ್,ಕಾರ್ಕಳದ ನಿಟ್ಟೆಲೆಮಿನಾ ಯೂನಿಯನ್ ಅಧ್ಯಕ್ಷ ರಾದ ಮೋಹನ್ ಚಂದ್ರ,ಕಾರ್ಯದರ್ಶಿ ನಾಗೇಶ್,ಉಡುಪಿ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಅಧ್ಯಕ್ಷ ರಾದ ನಳಿನಿ.ಎಸ್,ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ವಲಯ ಮುಖಂಡರಾದ ಮೋಹನ್, ಸರೋಜ.ಎಸ್, ರಂಗನಾಥ,ಸಂಜೀವ ಪೂಜಾರಿ ಲಕ್ಷಣ ಶೆಟ್ಟಿ, ಉಪಸ್ಥಿತರಿದ್ದರು JCTU ಉಡುಪಿ ಜಿಲ್ಲಾ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಪ್ರಸ್ತಾವಿಕವಾಗಿ ಮಾತಾನಾಡಿ ಸ್ವಾಗತ ಮಾಡಿದರು,ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಧನ್ಯವಾದ ನೀಡಿದರು