ಉಡುಪಿ : ಜೂನ್ 27: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ 296 ರ ಕಿ.ಮೀ 60.50 ರಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ದಿನಾಂಕ:30-07-2025 ರವರೆಗೆ ಸಿದ್ದಾಪುರ-ಹೆಬ್ರಿ(ಹೆಬ್ರಿ-ಕುಚೂರು-ಕಂಚರಕಾಳ-ಮಾಂಡಿಮೂರಕ್ಕೆ) ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ. ಆದೇಶಿಸಿದ್ದಾರೆ.
ಬದಲಿ ಮಾರ್ಗವಾಗಿ ಗ್ರಾಮೀಣ ರಸ್ತೆಯಾದ ಮಾಂಡಿಮೂರುಕೈ-ಮೀನುಗದ್ದೆ-ಬೇಳಂಜೆ-ಕುಚೂರು-ಹೆಬ್ರಿ ರಸ್ತೆ ಮುಖಾಂತರ ಸಂಚರಿಸಲು ಆದೇಶಿಸುವಂತೆ ಉಲ್ಲೇಖ(1)ರ ಪತ್ರದಲ್ಲಿ ಕಾರ್ಯ ಕಾರ್ಯ ನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಡುಪಿ ವಿಭಾಗ ಉಡುಪಿರವರು ಕೋರಿರುತ್ತಾರೆ.
ಈ ಬಗ್ಗೆ ಉಲ್ಲೇಖ(2)ರಂತೆ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಇವರಿಂದ ಅಭಿಪ್ರಾಯವನ್ನು ಪಡೆಯಲಾಗಿರುತ್ತದೆ.
ಸದ್ರಿಯವರ ವರದಿಯನ್ನು ಅನುಸರಿಸಿ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಸ್ತೆ ಹಾಗೂ ಮೋರಿಯ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎ)(2) & (5) ರನ್ವಯ, 2:27-06-2025 ರಿಂದ 30-07-2025 ರವರೆಗೆ ಸಿದ್ಧಾಪುರ-ಹೆಬ್ರಿ(ಹೆಬ್ರಿ-ಕುಚೂರು-ಕಂಚರಕಾಳ-ಮಾಂಡಿಮೂರುಕೈ) ರಾಜ್ಯ ಹೆದ್ದಾರಿಯ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿದೆ.
ಸದ್ರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಕಂಡ ಪರ್ಯಾಯ ಮಾರ್ಗದ ರಸ್ತೆಯ ಮೂಲಕ ಎಲ್ಲಾ ವಾಹನಗಳು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಮಾಂಡಿಮೂರಕ್ಕೆ-ಮೀನುಗದ್ದೆ-ಬೇಳಂಜೆ-ಕುಚೂರು-ಹೆಬ್ರಿ.