ಉಡುಪಿ: ಜೂನ್ 20:ಪರ್ಯಾಯ ಶ್ರೀ ಫುತ್ತಿಗೆ ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಆಶ್ರಯದಲ್ಲಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಕೃಷ್ಣ ಯೋಗ ಕೇಂದ್ರ, ವಿವೇಕಾನಂದ ಯೋಗ ವಿಜ್ನಾನ ಕೇಂದ್ರ ಉಡುಪಿ ಮತ್ತು ಬನ್ನಂಜೆ, ನಿರಂತರ ಯೋಗ ಕೇಂದ್ರ, ಕ್ರೀಡಾ ಭಾರತಿ, ಎಲ್. ಐ. ಸಿ. ಆಫ಼್ ಇಂಡಿಯಾ ಸಹಯೋಗದೊಂದಿಗೆ *ಜೂನ್ ೨೧ ರಂದು ಬೆಳಿಗ್ಗೆ ೫.೩೦ ರಿಂದ ೭.೦೦ ಗಂಟೆಯವರೆಗೆ ರಾಜಾಂಗಣದಲ್ಲಿ ೧೧ನೆಯ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದರ ಯೋಗ ಪ್ರಾತ್ಯಕ್ಶಿಕೆಯೊಂದಿಗೆ ವೈಶಿಷ್ತ್ಯ ಪೂರ್ಣವಾಗಿ ನಡೆಯಲಿದೆ.
ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ದೀಪ ಪ್ರಜ್ವಲನಗೊಳಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಕೆ ರಾಘವೇಂದ್ರ ಭಟ್ ಹಾಗೂ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯರು ತಿಳಿಸಿರುತ್ತಾರೆ.