ಕಾರ್ಕಳ : ಜೂನ್ 19:ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಸುಲ್ಕೇರಿ, ಶ್ರೀರಾಮ ಪ್ರೌಢ ಶಾಲೆ, ಸುಲ್ಕೇರಿಯಲ್ಲಿ ಜೂನ್ 01ರಂದು 2025=2026 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಿತು.,
ವೇದಿಕೆಯಲ್ಲಿ ಶ್ರೀಯುತ ಡಾ.ಪ್ರಸಾದ್ ವೈದ್ಯರು ವಿಜಯ ಪಾಲಿಕ್ಲಿನಿಕ್ ಹೊಸ್ಮಾರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ.ವಿನೋದ ವೈದ್ಯರು ವಿಜಯ ಕ್ಲಿನಿಕ್ ನಾರಾವಿ, ಭಗಿನಿ ಮೀನಾಕ್ಷಿ ಮಾತಾಜಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಸಂಸ್ಕಾರ ಪ್ರಮುಖರು, ಶ್ರೀಯುತ ಗಣೇಶ್ ಹೆಗ್ಡೆ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷರು, ಶ್ರೀಯುತ ರಾಜು ಪೂಜಾರಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಶ್ರೀಯುತ ಎಚ್ .ಎಲ್. ರಾವ್ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.