Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೋಟಿಗೀತಾಲೇಖನಯಜ್ಞ : ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಿಳಿಂದ ಪರ್ಯಾಶ್ರೀಪಾದರಿಗೆ ಅರ್ಪಣೆ..!!

Dhrishya News by Dhrishya News
09/06/2025
in ಸುದ್ದಿಗಳು
0
0
SHARES
7
VIEWS
Share on FacebookShare on Twitter

ಉಡುಪಿ: ಜೂನ್ 06 : ಸಂಸ್ಕೃತಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರು ಹಾಗೂ ಅಧ್ಯಾಪಕರು ಇಂದು ೮-೬-೨೦೨೫ ರಂದು ಸ್ವಪ್ರೇರಣೆಯಿಂದ ಬರೆದ ಭಗವದ್ಗೀತಾಲೇಖನ ಪುಸ್ತಕಗಳನ್ನು ಪರ್ಯಾಯಶ್ರೀಪಾದರಾದ ಶ್ರೀಶ್ರೀ ಸುಗುಣೇಂದ್ರತೀರ್ಥಶ್ರೀಪಾದರ ಸಾನ್ನಿಧ್ಯದಲ್ಲಿ ಸಮರ್ಪಿಸಿದರು.  

ಕಿರಿಯಶ್ರೀಪಾದರಾದ ಶ್ರೀಶ್ರೀ ಸುಶ್ರೀಂದ್ರತೀರ್ಥಶ್ರೀಪಾದರೂ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚಿಸಿದ ಪರ್ಯಾಯಶ್ರೀಪಾದರು, ವಿದ್ಯಾರ್ಥಿಜೀವನದಲ್ಲೇ ಭಗವದ್ಗೀತೆಯನ್ನು ಬರೆಯುವುದು ಹಾಗು ಓದುವುದರಿಂದ ಹೆಚ್ಚಿನ ಲಾಭವಿದೆ. 

ಜೀವನದ ಹೆಚ್ಚಿನ ಭಾಗದಲ್ಲಿ ಗೀತೆಯ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ. ಗೀತೆಯನ್ನು ಆವರ್ತಿಸಿದಷ್ಟು ಬಾರಿ ಗೀತೆಯ ಹೊಸ ಹೊಸ ಅಭಿಪ್ರಾಯಗಳು ಕಾಣಿಸಿಕೊಳ್ಳುವವು, 

ನಮ್ಮ ದೇಶ-ಕಾಲ ಪರಿಸ್ಥಿತಿಗೆ ಅನುಗುಣವಾದ ದಾರಿಯನ್ನು ಗೀತೆಯು ತೋರಿಸಿಕೊಡುತ್ತದೆ.

ಗೀತೆಯ ಸಂದೇಶ ತುಂಬಾ ವಿಶಾಲವಾಗಿದೆ. 

ಯಾವುದೇ ದೇಶ-ಭಾಷೆ, ಜಾತಿ-ವರ್ಣ, ಮತ-ಧರ್ಮಗಳ ಗಡಿಗಳನ್ನು ಮೀರಿನಿಂತಿದೆ.   

ಶ್ರೀಕೃಷ್ಣ ದೇವರು, ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ ಎಂಬ ಗೀತೆಯ ಮಾತಿನಲ್ಲಿ ಯಾವುದೇ ಬ್ರಾಹ್ಮಣ ಮೊದಲಾದ ಜಾತಿಯನ್ನಾಗಲೀ ಹಿಂದೂ ಮೊದಲಾದ ಧರ್ಮವನ್ನಾಗಲೀ ಹೆಸರಿಸದೇ ಸಜ್ಜನರ ರಕ್ಷಣೆ ಮತ್ತು ದುರ್ಜನರ ಶಿಕ್ಷಣವೇ ನನ್ನ ಗುರಿ ಎಂದು ಹೇಳಿದ್ದಾರೆ. 

ಇಂತಹಾ ವಿಶಾಲವಾದ ಅನೇಕ ದೃಷ್ಟಿಕೋನದ ಉದ್ಗಾರ ಗೀತೆಯಲ್ಲಿದೆ.

ಮುಂದಿನ ಆಧ್ಯಾತ್ಮಿಕ ಯುಗದಲ್ಲಿ ಗೀತೆಯನ್ನು ಬಲ್ಲವರು ಮತ್ತು ಬೋಧಿಸುವವರಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಆದ್ದರಿಂದ ಸಂಸ್ಕೃತವನ್ನು ಓದಿದವರು ಭಗವದ್ಗೀತೆಯನ್ನು ಅಧ್ಯಯನವನ್ನು ಮಾಡುವುದು ಸಫಲವಾಗಲಿದೆ ಎಂದರು.

*ತುಳುಲಿಪಿಯಲ್ಲಿ ಗೀತಾಲೇಖನ*

ಸಂಸ್ಕೃತಕಾಲೇಜಿನ ಉಪನ್ಯಾಸಕರಾದ ಡಾ. ರಾದಾಕೃಷ್ಣ ಭಟ್ ಬೆಂಗ್ರೋಡಿಯವರು ಅಪೂರ್ವವಾಗಿ ತುಳುಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದು ಸಮರ್ಪಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಇವರನ್ನು ಪರ್ಯಾಯಶ್ರೀಪಾದರು ವಿಶೇಷವಾಗಿ ಅಭಿನಂದಿಸಿದರು

ಪ್ರತಿದಿನವೂ ನೂರಾರು ಮಂದಿ ಗೀತಾಲೇಖನ ಸಮರ್ಪಣೆ ಮಾಡುತ್ತಿದ್ದಾರೆ. ಪ್ರಯೊಬ್ಬರೂ ಒಂದೊಂದು ಹೊಸ ಹೊಸ ಲಾಭಪಡೆದ ಅನುಭವವನ್ನು ಹೇಳಿಕೊಳ್ಳುತ್ತಿದ್ದಾರೆ. ಹಾಗೆಯೇ ತಮ್ಮೆಲ್ಲರಿಗೂ ಗೀತಾಚಾರ್ಯ ಶ್ರೀಕೃಷ್ಣನ ಅನುಗ್ರಹವಾಗಲಿ ಎಂದು ಪ್ರಮಾಣಪತ್ರ ಮತ್ತು ಮಂತ್ರಾಕ್ಷತೆಗಳನ್ನಿತ್ತು ಹರಸಿದರು.

ಈ ಸಂದರ್ಭದಲ್ಲಿ ಸಂಸ್ಕೃತಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ವಿ ರಾವ್ ಅವರು ವಿದ್ಯಾರ್ಥಿಗಳವತಿಯಿಂದ ಉಭಯಶ್ರೀಪಾದರುಗಳನ್ನು ಫಲವಿತ್ತು ಶುಷ್ಕಫಲೋಷ್ಣಿಷವನ್ನು ತೊಡಿಸಿ ಗೌರವಿಸಿದರು. 

ವಿದ್ಯಾರ್ಥಿಗಳು ಶ್ರೀಪಾದರ ಹಸ್ತಲಿಖಿತ ಶ್ರೀಪಾದರ ಡಿಜಿಟಲ್ ಚಿತ್ರಕಲೆಯ ವರ್ಣ ಚಿತ್ರವನ್ನು ಸಮರ್ಪಿಸಿದರು. 

ಶ್ರೀಪಾದರ ಅಂತಾರಾಷ್ಟ್ರಿಯ ಕಾರ್ಯದರ್ಶಿಗಳದ ವಿ| ಪ್ರಸನ್ನಾಚಾರ್ಯರು ಮತ್ತು ಕೋಟಿ ಗೀತಾ ಲೇಖನ ಯಜ್ಞದ ಅನಂತ ಕೃಷ್ಣ ಪ್ರಸಾದ್,ಕಾಲೇಜಿನ ಉಪನ್ಯಾಸಕರಾದ ಡಾ. ರಾಧಾಕೃಷ್ಣ ಭಟ್, ವಿ| ಗಣಪತಿ ಭಟ್ ಮತ್ತು ವಿ|ಶ್ರೀನಿವಾಸತಂತ್ರೀ ಉಪಸ್ಥಿತರಿದ್ದರು. 

ಪ್ರೋ.ಷಣ್ಮುಖ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು. 

ವಿದ್ಯಾರ್ಥಿನಾಯಕ ಶ್ರೀವತ್ಸ ಉಪಾಧ್ಯಾಯ, ಶ್ರೀಕರ ಉಪಾಧ್ಯಾಯ ಮತ್ತು ಮುಕುಂದ ಕೊಡಂಕಿರಿ ಸಹಕರಿಸಿದರು.

Previous Post

ಮರವಂತೆ ಬೀಚ್ ನಲ್ಲಿ ಅಲೆಗಳ ಸೆಳೆತಕ್ಕೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದ ಐವರ ರಕ್ಷಣೆ…!

Next Post

ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ಪಣಿಯಾಡಿ : ವಿಶ್ವ ಪರಿಸರ ದಿನಾಚರಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ಪಣಿಯಾಡಿ : ವಿಶ್ವ ಪರಿಸರ ದಿನಾಚರಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

30/01/2026

Recent News

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

ಕೊಪ್ಪಳ: KIMS ಬಿ. ಕಲ್ಲೇಶ್ ಮೇಲೆ ಐದು ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ…!!

30/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved