ಕಾರ್ಕಳ:ಜಿಲ್ಲೆಯ ಖ್ಯಾತ ನೇತ್ರ ತಜ್ಞ ಹಾಗೂ ಕಾರ್ಕಳ ಐ. ಫೌಂಡೇಶನ್ ನಿರ್ದೇಶಕ ಡಾಕ್ಟರ್ ಶ್ರೀಪತಿ ಕಾಮತ್ ಇವರ ನೇತೃತ್ವದಲ್ಲಿ ಮತ್ತು ಹಿತೈಷಿ ಸಹಯೋಗದಿಂದ ದಿನಾಂಕ 11 ಮೇ ಆದಿತ್ಯವಾರ ದಂದು ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಕಳದ ಶ್ರೀನಿವಾಸ ಕಲಾ ಮಂದಿರ ದಲ್ಲಿ ನಡೆಯಿತು.

ಉಚಿತ ನೇತ್ರ ತಪಾಸಣಾ ಶಿಬಿರ ದ ಉದ್ಘಾಟನೆಯನ್ನು ಕೆ.ಕಮಲಾಕ್ಷ ಕಾಮತ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿತೈಷಿ ಸಂಸ್ಥೆಯ ಅಧ್ಯಕ್ಷರಾದ ಗಣಪತಿ ಕಾಮತ್, ಕೋಶಾಧಿಕಾರಿ ಕೆ.ಎಸ್.ಪ್ರಭು,ಟ್ರಸ್ಟೀ ಹಿತೈಷಿ ಅರುಣ್ ಪುರಾಣಿಕ್ ,ನೇತ್ರ ತಜ್ಞ ರಾದ ಡಾಕ್ಟರ್ ಶ್ರೀಪತಿ ಕಾಮತ್ ಹಾಗು ಇನ್ನಿತರರು ಉಪಸ್ಥಿತರಿದ್ದರು.ಸುಮಾರು ನೂರು ಜನರು ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ದ್ದರು. ಸುಮಾರು ಆರು ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.








