ಉಡುಪಿ: ಮೇ 12:ಭಾರತ ಮತ್ತು ಶತ್ರು ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಈ ಕಠಿಣ ಸನ್ನಿವೇಶದಲ್ಲಿ ಸೈನಿಕರ ಮನೋಸ್ಥೈರ್ಯ ಮತ್ತು ಕ್ಷೇಮಾಭಿವೃದ್ಧಿಗಾಗಿ,ದೇಶ ಮತ್ತು ಧರ್ಮದ ಉಳಿವಿಗಾಗಿ ನರಸಿಂಹ ಜಯಂತಿಯ ಪರ್ವಕಾಲದಲ್ಲಿ ನಿತ್ಯ ನರಸಿಂಹರಾದಾಕರಾದ ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಠದ ವಸಂತ ಮಹಲ್ ನಲ್ಲಿ ವಿವಿಧ ವಲಯದ ವಿಪ್ರ ಭಾಂದವರು ಸೇರಿ 324 ಕ್ಕೂ ಅಧಿಕ ಬಾರಿ ನರಸಿಂಹ ಸ್ತೋತ್ರ ಸ್ತುತಿ ಪಠಣ ನಡೆಸಿದರು.
ಭಾರತೀಯ ಸೇನೆಗೆ ಇನ್ನಷ್ಟು ಶಕ್ತಿ ಭಗವಂತ ಕರುಣಿಸಲಿ ಮತ್ತು ನಮ್ಮ ಸನಾತನ ಧರ್ಮಕ್ಕೆ ಸದಾ ಜಯ ಸಿಗಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಶ್ರೀ ಮಠದ ಪರವಾಗಿ ದಿವಾನರಾದ ನಾಗರಾಜ ಆಚಾರ್ಯ ವಿಪ್ರ ಮಹನೀಯರನ್ನುಸ್ವಾಗತಿಸಿದರು.
ತು.ಶಿ.ಮಾ.ಮ ದ ರವೀಂದ್ರ ಆಚಾರ್ಯ ಹಾಗೂ ಪಣಿಯಾಡಿಯ ಕೆ. ರಾಘವೇಂದ್ರ ಭಟ್ ರವರು ಕಾರ್ಯಕ್ರಮ ನಿರ್ವಹಿಸಿದರು.








