ಉಡುಪಿ:ಮೇ 12: ಕಾಮಿಡಿ ಕಿಲಾಡಿಗಳು ಸೀಸನ್ -3ರ ವಿನ್ನರ್ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಕಳೆದ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ನಿನ್ನೆಯಷ್ಟೇ ಕಾಂತಾರ ಪ್ರಿಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಾಕೇಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿನ್ನೆಯೇ ಪಾಲ್ಗೊಂಡಿದ್ದರು. ಸ್ನೇಹಿತರ ಜೊತೆ ಇದ್ದಾಗ ಹೃದಯಘಾತ ಸಂಭವಿಸಿದೆ. ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು ಎಂಬ ಮಾಹಿತಿ ಇದೆ.
ರಾಕೇಶ್ ಅವರಿಗೆ ಈಗ ಕೇವಲ 33 ವರ್ಷ ವಯಸ್ಸಾಗಿತ್ತು. ರಾಕೇಶ್ ಅವರು ಈಗ ಅಮ್ಮ ಮತ್ತು ತಂಗಿಯನ್ನು ಅಗಲಿದ್ದಾರೆ. ಇಡೀ ಮನೆಯ ಜವಾಬ್ದಾರಿ ಅವರ ಬಳಿಯೇ ಇತ್ತು.
ರಾಕೇಶ್ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 3’ನ ಭಾಗ ಆಗಿದ್ದರು. ಅವರು ಇದರ ವಿನ್ನರ್ ಕೂಡ ಆದರು.
ನಟ ರಾಕೇಶ್ ಪೂಜಾರಿ ಪ್ರಸ್ತುತ ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್ ಪೂಜಾರಿ ಅವರ ನಿಧನದಿಂದ ಎಲ್ಲರಿಗೂ ಗರಬಡಿದಂತೆ ಆಗಿದ್ದು, ಅದೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ಕೂಡ ಸಂತಾಪ ಸೂಚಿಸಿದ್ದಾರೆ.
ರಾಕೇಶ್ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ ಮಿಡಿದಿದ್ದಾರೆ. ‘ರಾಕೇಶ್ ಬಳಿ ಇನ್ಯಾವಗಲೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಒಳ್ಳೆಯ ವ್ಯಕ್ತಿ ಆಗಿ ಕಾಣಿಸಿದ್ದರು’ ಎಂದಿದ್ದಾರೆ
ಅಷ್ಟೇ ಅಲ್ಲದೇ ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ