ಕಾರ್ಕಳ:ಜನವರಿ : ನಿಟ್ಟೆ ಗ್ರಾಮದ ಶ್ರೀಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ಪರಿವಾರ ದೈವಗಳಾದ ನಂದಿಗೋಣ ,ರಕ್ತೇಶ್ವರಿ, ಕಾಳರಾತ್ರಿ ,ಕುಕ್ಕಿನಂತಾಯಿ ,ದೈವಗಳ ಪುನರ್ ಪ್ರತಿಷ್ಠೆ ಶ್ರೀ ವೇದಮೂರ್ತಿ ವಾಸುದೇವ ಭಟ್ ಕೈಲಾಜೆ, ಮತ್ತು ವೇದಮೂರ್ತಿ ಮಾಧವ ಭಟ್ ರವರ ಪೌರೋಹಿತ್ಯದಲ್ಲಿ ಪುಣ್ಯಾಹ ವಾಸ್ತು ರಾಕ್ಷೋಗ್ನ ಹಾಗೂ ದೈವಗಳ ಪುನರ್ ಪ್ರತಿಷ್ಠೆ ದಿನಾಂಕ ಜನವರಿ 23 ಮತ್ತು 24 ರಂದು ನಡೆಯಿತು.

ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ಅರ್ಚಕರು ಶ್ರೀ ಶಿವಶಂಕರ್ ಭಟ್, ಹಾಗೂ ಆಡಳಿತ ಮುಕ್ತೆಸರಾದ ಅರವಿಂದ್ ಕಾರ್ನಾಡ್ ಹಾಗೂ ಆಡಳಿತ ಸಮಿತಿಯವರು ಉಪಸ್ಥಿತರಿದ್ದು ದೈವಗಳ ಗಂಧ ಪ್ರಸಾದ ಸ್ವೀಕರಿಸಿದರು.

ವರದಿ ಅರುಣ್ ಭಟ್ ಕಾರ್ಕಳ








