Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಆಂದೋಲನದ ಸಮಾರೋಪ ಸಮಾರಂಭ..!!

Dhrishya News by Dhrishya News
11/12/2024
in ಸುದ್ದಿಗಳು
0
ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಆಂದೋಲನದ ಸಮಾರೋಪ ಸಮಾರಂಭ..!!
0
SHARES
13
VIEWS
Share on FacebookShare on Twitter

ಬ್ರಹ್ಮಾವರ :ಡಿಸೆಂಬರ್ 11:ದಿನಾಂಕ 10-12-2024 ರಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ – ಕೇರಳ,ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ಆಂದೋಲನ ಇದರ ಸಮರೂಪ ಸಮಾರಂಭವು ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನೆರವೇರಿತು.

ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಹಂದಾಡಿ ಗ್ರಾಮ್ ಪಂಚಾಯತ್ ವರೆಗೆ ಡೋಲು ವಾದನ ದ ಜೊತೆಗೆ ಕಾಲ್ನಡಿಗೆ ಜಾಥ ವನ್ನು ಮಾಡಲಾಯಿತು. ಈ ಜಾಥ ದ ಉದ್ಘಾಟನೆಯನ್ನು ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಪೂಜಾರಿ ಅವರು ನೆರವೇರಿಸಿದರು. ಪುತ್ರನ್ ಹೆಬ್ರಿಯವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದರ ಮೂಲಕ ಜಾಥಕ್ಕೆ ಚಾಲನೆ ನೀಡಲಾಯಿತು.

ಹಂದಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿಮಲಾ ಕಲ್ತೂರು ಇವರು ನಿರೂಪಣೆಯನ್ನು ಮಾಡಿ, ದಿವಾಕರ್ ಕಲ್ತೂರು ಆಗಮಿಸಿದ ತಿಥಿಗಳಿಗೆ ಸ್ವಾಗತವನ್ನು ನೀಡಿದರು. ನಂತರದಲ್ಲಿ ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಪೂಜಾರಿ ಇವರು ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆಯ ಅಂಗವಾಗಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.

ನಂತರದಲ್ಲಿ ಬ್ರಹ್ಮಾವರ ತಾಲೂಕಿನ ತಹಶೀಲ್ದಾರರ ಅನುಪಾ ಸ್ಥಿತಿಯಲ್ಲಿ ಉಪತಹಶೀಲ್ದಾರರಾದ ರಾಮಚಂದ್ರ ಇವರು ಸಂಘಟನೆಯ ಮುಖಾಂತರ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಸಾಮಾಜಿಕರಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಸಲಹೆಯನ್ನು ನೀಡಿ ಕಾರ್ಯಕ್ರಮದ ಬಗ್ಗೆ ಹಿತನುಡಿಗಳನ್ನಾಡಿದರು.

ನಂತರದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಇವರು ಸುಮಾರು 35 ವರ್ಷಗಳ ಇತಿಹಾಸವನ್ನು ನೆನಪಿಸುತ್ತ ವಿಶ್ವಮಾನವ ಹಕ್ಕುಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸಮಸ್ಯೆ,ಆರೋಗ್ಯ , ದೌರ್ಜನ್ಯಗಳ ಕುರಿತಾಗಿ ಇತಿಹಾಸವನ್ನು ಪರಿಚಯಿಸಿದರು.

ನಂತರದಲ್ಲಿ 1949 ರ ಡಿಸೆಂಬರ್ 10 ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುವುದರ ಮೂಲಕ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಅವುಗಳನ್ನು ರಕ್ಷಿಸುವ ಸಲುವಾಗಿ ಕಾನೂನುಗಳನ್ನು ಸಂವಿಧಾನವನ್ನು ನೀಡಿದ್ದು ಭಾರತ ಸಂವಿಧಾನದಲ್ಲಿ ಭಾರತ ಪ್ರಜೆ ಸಮಾನವಾಗಿ ಅವಕಾಶಗಳನ್ನು ಈ ಹಕ್ಕುಗಳನ್ನು ಪಡೆದಿರುತ್ತಾನೆ ಜಾತಿ,ಲಿಂಗ,ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ಶೋಷಣೆಗಳನ್ನು ಮಾಡದೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಮಾನವಾಗಿ ಅನುಭವಿಸುವ ಹಕ್ಕನ್ನು ಪಡೆದಿರುತ್ತಾನೆ. ಅವುಗಳ ಚ್ಯುತಿಯಾದಲ್ಲಿ ಕಾನೂನುಗಳ ಮೊರೆಯನ್ನು ಕೂಡ ಹೋಗಬಹುದಾಗಿದೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆಯನ್ನು ನೀಡುವುದರ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಯನ್ನು ಮಾಡಬಹುದಾಗಿದೆ ಎಂಬುದನ್ನುತಿಳಿಸಿದರು.

ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು.ಜಾತಿ ಲಿಂಗ ಧರ್ಮದ ಆಧಾರದಲ್ಲಿ ಯಾವುದೇ ರೀತಿಯ ದೌರ್ಜನ್ಯಗಳು ನಡೆದಲ್ಲಿ ಇವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ ಆಚರಿಸಲಾಗುತ್ತದೆ ಹಾಗೂ ಇವುಗಳನ್ನು ಪ್ರಚಾರಪಡಿಸುವುದಕ್ಕಾಗಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ಸ್ಥರದಲ್ಲಿ ಅತ್ಯಂತ ಕೆಳಸಮುದಾಯವಾದ ಕೊರಗ ಸಮುದಾಯವು ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವಂತಹ ನೆಲೆಯಲ್ಲಿ ಬಂದು ತಲುಪಿದ್ದು, ಆದ್ಯಾಗು ಅನೇಕ ರೀತಿಯ ಸಮಸ್ಯೆಗಳನ್ನು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅನುಭವಿಸುವಂತಾಗಿದೆ.ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಲೈಂಗಿಕ ದೌರ್ಜನ್ಯ ದ ಅರಿವು ಮೂಡಿಸುವ ಅಗತ್ಯವಿದೆ.ಹೆಚ್ಚಿನ ಲೈಂಗಿಕ ಶೋಷಣೆ, ದೌರ್ಜನ್ಯಗಳು ಕುಟುಂಬದೊಳಗಿನ ಸದಸ್ಯರಿಂದಲೆ ಆಗಿದ್ದು, ಇವುಗಳನ್ನು ಪ್ರತಿಭಟಿಸುವಲ್ಲಿ ಅನೇಕ ಮಹಿಳೆಯರು ಮಹಿಳೆಯರು ಸೋಲನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಇಂತಹ ಸಮಸ್ಯೆಗಳ ರಕ್ಷಣೆಯನ್ನು ನೀಡುತ್ತವೆ ಅದರ ಸಲುವಾಗಿ ಹೆಚ್ಚಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಕುಟುಂಬದೊಳಗಿನಿಂದಲೇ ಅನೇಕ ರೀತಿಯ ದೌರ್ಜನ್ಯಗಳು,ಅತ್ಯಾಚಾರಗಳು ಕಾಣಬಹುದಾಗಿದೆ. ಅನೇಕ ಹೆಣ್ಣು ಮಕ್ಕಳು ಈ ರೀತಿಯ ಸಮಸ್ಯೆಗಳಿಗೆ ಪ್ರತಿಭಟಿಸುವಲ್ಲಿ ಸೋಲನ್ನು ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಕುಲನೆಗಳಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ,ವಿಶುಮಾನವ ಹಕ್ಕುಗಳ ಪಕ್ಷ ಸರಣಿ ಕುರಿತದ ಬೀದಿ ನಾಟಕದ ಪ್ರದರ್ಶನವನ್ನು ಈ ರೀತಿಯಾಗಿ ಜನರಲ್ಲಿ ಅರಿವನ್ನು ಮೂಡಿಸಿದರು ಮೂಲಕ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಕೇವಲ ಅಜಲು ಪದ್ಧತಿ ಹಾಗೂ ಕುಡಿತಕ್ಕೆ ಒಳಗಾದ ಕೊರಗ ಸಮಾಜ ಸಂಘಟನೆಯ ಮಹತ್ವದಿಂದಾಗಿ ಅನೇಕ ರೀತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಸ್ಕೃತಿಯನ್ನು ಬಿಂಬಿಸುವುದರ ಮೂಲಕ ಅನೇಕ ರೀತಿಯ ಪ್ರದರ್ಶನಗಳನ್ನು ನೀಡಲು ಅವಕಾಶಗಳು ಸಿಕ್ಕಿವೆ.ಹಾಗಾಗಿ ಹೆಚ್ಚಿನ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂಬುದಾಗಿ ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು. 

  ನಂತರದಲ್ಲಿ ಶ್ರೀ.ಎಚ್.ವಿ ಇಬ್ರಾಹಿಂಪೂರ್ ಕಾರ್ಯನಿರ್ವಹಣಾಧಿಕಾರಿಗಳು, ಇವರು ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಾಗಿ ಅರಿವು ಮೂಡಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಶುಭ ಕೋರಿದರು.

     ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಪೂಜಾರಿ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು . ಹಾಗೂ ಬೊಗ್ರ ಕೊಕ್ಕರ್ಣೆ ಇವರು 1998 ರಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆಯ ಇತಿಹಾಸವನ್ನು ನೆನಪಿಸುತ್ತ ಸಾಮಾಜಿಕ ಪಿಡುಗುಗಳನ್ನು ಹೋರಾಟಗಳ ಮೂಲಕ ಹಾಗೂ ಪ್ರತಿಭಟನೆಗಳ ಮೂಲಕ ಹೋಗಲಾಡಿಸಬೇಕು.ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಮೂಲಕ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ನಿರತರಾಗಬೇಕು.ಅಧಿಕಾರಿಗಳ ಇಚ್ಛ ಶಕ್ತಿಯೊಂದಿಗೆ ಇಂತಹ ಅನೇಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬಹುದಾಗಿದೆ.ಅನೇಕ ಅಧಿಕಾರಿಗಳನ್ನು ನೆನಪಿಸುತ್ತ ಶಿಕ್ಷಣದಲ್ಲಿ ಹೆಚ್ಚಿನ ರೀತಿಯಲ್ಲಿ ಸಾಧನೆ, ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಟ ಪ್ರತಿಭಟಿಸಲು ಸಾಧ್ಯವಾಗಿದೆ .

ಸಂಘಟನೆಯು ಹೆಚ್ಚಿನ ಅವಕಾಶಗಳಿಗೆ ಎಡೆ ಮಾಡಿಕೊಟ್ಟಿದೆ ಸಾಮಾಜಿಕವಾಗಿ ನಾವು ಸಮಾಜದೊಂದಿಗೆ ಹೊಂದಾಣಿಕೆ ಪಡೆಯುವುದಕ್ಕೆ ಸಾಧ್ಯವಾಗಿದೆ.ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಒಕ್ಕೂಟದ ಖಜಾಂಚಿಯಾದ ವಿನಯ ಅಡ್ವೆ ಇವರು ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯದ ವಿರುದ್ಧ ರಕ್ಷಣೆ ಹಾಗೂ ಅನೇಕರಿಗೆ ಶೋಷಣೆಗಳು ಆದರು ಕೂಡ ಅವುಗಳನ್ನು ಹೇಳುವಂತಹ ಪರಿಸ್ಥಿತಿಯಲ್ಲಿರುವುದಿಲ್ಲ ಹೆಚ್ಚಾಗಿ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ ಹಾಗೂ ಇವುಗಳನ್ನು ಸಾಮಾಜಿಕ ಸ್ತರದಲ್ಲಿ ಸಮಾಜದಲ್ಲಿ ಅವುಗಳನ್ನು ಪ್ರತಿಭಟಿಸಲು ಅಥವಾ ಅವುಗಳನ್ನು ಪ್ರತಿಬಿಂಬಿಸುವಲ್ಲಿ ವಿಫಲನಾಗುತ್ತಿದ್ದಾರೆ ಇಂತಹ ಅನೇಕ ಉದಾಹರಣೆಗಳು ಅನೇಕ ರೀತಿಯ ಸಮಸ್ಯೆಗಳನ್ನು ಈ ವಿಶ್ವಮಾನವ ಹಕ್ಕುಗಳ ಮೂಲಕ ಪ್ರಕರಣಗಳನ್ನು ಬಗೆಹರಿಸುವಲ್ಲಿ ಹೆಚ್ಚಿನ ರೀತಿಯ ಮಾಹಿತಿಯನ್ನು ನೀಡಬೇಕಾಗಿದೆ. ಹಾಗೂ ವಿಶ್ವಮಾನವ ಹಕ್ಕುಗಳ ಪಕ್ಷಚರಣೆಯ ಅಂಗವಾಗಿ ಗ್ರಾಮ್ ಪಂಚಾಯತ್ಗಳಲ್ಲಿ ಸಭೆ ಸಮಾರಂಭಗಳನ್ನು ಮಾಡುವುದರ ಮೂಲಕ ಇದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂಬುದಾಗಿ ಅಹವಾಲನ್ನು ನೀಡಿದರು. 

 

ಕೊನೆಯದಾಗಿ ಬ್ರಹ್ಮಾವರದ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳನ್ನು ಹೇಳುವುದರ ಮೂಲಕ ಅವುಗಳನ್ನು ಅವುಗಳಿಗೆ ಪರಿಹಾರ ಕ್ರಮವನ್ನು ನೀಡುವುದರ ಜೊತೆಗೆ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಣೆಯನ್ನು ಮಾಡಿದರು.

Previous Post

ಮುರುಡೇಶ್ವರ : ಸಮುದ್ರ ತೀರದಲ್ಲಿ ಕೊಚ್ಚಿ ಹೋದ ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿನಿಯರು:ಓರ್ವ ವಿದ್ಯಾರ್ಥಿನಿ ಶವ ಪತ್ತೆ..!!

Next Post

ಉಡುಪಿ :ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ :ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025

Recent News

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved