ಪಡುಬಿದ್ರಿ :ನವೆಂಬರ್ 29:ಮನೆಯಿಂದ ಮೂಲ್ಕಿಗೆ ಹೋಗಿ ಬರುವುದಾಗಿ ಹೇಳಿ ನ. 25ರಂದು ಬೆಳಗ್ಗೆ ಮನೆ ಬಿಟ್ಟು ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ
ಇನ್ನಾ ಗ್ರಾಮದ ಶಂಕರ ಜೆ. ಪೂಜಾರಿ (53) ಮನೆಗೆ ಬಾರದೆ ನಾಪತ್ತೆಯಾಗಿರುವ ವ್ಯಕ್ತಿ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನ. 27ರಂದು ಪ್ರಕರಣ ದಾಖಲಾಗಿರುತ್ತದೆ
ಇವರು ಪಾರ್ಶ್ವವಾಯು ಪೀಡಿತರಾಗಿದ್ದು, ಬಲಗೈ ಸ್ವಾಧೀನವಿರದ ಅವರು ಮೂಲ್ಕಿಯತ್ತ ಹೋಗದೆ ಉಡುಪಿ ಬಸ್ ನಿಲ್ದಾಣದವರೆಗೆ ಹೋಗಿ ಬಳಿಕ ಕಾಣೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಬರ್ಮುಡ ಧರಿಸಿರುವ ಅವರು 5.8 ಅಡಿ ಎತ್ತರ, ಕನ್ನಡ, ತುಳು ಮತ್ತು ಹಿಂದಿ ಮಾತಾಡಬಲ್ಲವರಾಗಿದ್ದಾರೆ. ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ ಹೊಂದಿರುವ ಅವರ ಕುರಿತು ಯಾರಿಗಾದರೂ ಮಾಹಿತಿ ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ .