ಉಡುಪಿ: ನವೆಂಬರ್ 28: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳ ಒಂದನೆಯ ತಾರೀಕು ಭಾನುವಾರದಂದು ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಲ್ಲಿ ರಂಗ ಪೂಜಾ ಸಹಿತ ದೀಪೋತ್ಸವ ಮಹೋತ್ಸವವೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರಲಿದೆ..
ಅಂದು ಸಂಜೆ ಗಂಟೆ ಆರರಿಂದ ದೀಪೋತ್ಸವ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ದೀಪ ಪ್ರಜ್ವಲನೆಯ ನಂತರ ಕ್ಷೇತ್ರದಲ್ಲಿ ರಾತ್ರಿಯ ಕಲ್ಪೋಕ್ತ ಪೂಜಾ ಸಹಿತ ರಂಗ ಪೂಜೆ,ಪ್ರಸಾದ ವಿತರಣೆ ನೆರವೇರಲಿದೆ.
ಈ ದೀಪೋತ್ಸವ ಮಹೋತ್ಸವದಲ್ಲಿ ಭಕ್ತರುಗಳು ಕ್ಷೇತ್ರಕ್ಕೆ ಎಣ್ಣೆ ಹಣತೆ ಬತ್ತಿಯನ್ನು ಸಮರ್ಪಿಸಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.