Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶ್ರೀ ಕೃಷ್ಣನ ಉಡುಪಿಯಲ್ಲಿ ಜ್ಞಾನದ ಹಬ್ಬ : ಅಕ್ಟೋಬರ್ 24,ರಿಂದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ..!!

Dhrishya News by Dhrishya News
14/10/2024
in ಸುದ್ದಿಗಳು
0
0
SHARES
10
VIEWS
Share on FacebookShare on Twitter

ಉಡುಪಿ: ಅಕ್ಟೋಬರ್ 14:ಅಕ್ಟೋಬರ್ 24, 25 ಮತ್ತು 26 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ 1008 ಶ್ರೀ ಸುಗುಣೇಂದ್ರ ಶ್ರೀಪಾದರ ಅನುಗ್ರಹದೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ (All India Oriental Conference) ನಡೆಯಲಿದೆ.

ಶ್ರೀ ಶ್ರೀ ಪೇಜಾವರ ಶ್ರೀಪಾದರು, ಶ್ರೀ ಶ್ರೀ ವಿದ್ಯಾಶ್ರೀಶ ಶ್ರೀಪಾದರು, ಶ್ರೀ ಶ್ರೀ ಸುಬುಧೇಂದ್ರ ತೀರ್ಥಶ್ರೀಪಾದರು(ಮಂತ್ರಾಲಯ), ಪತಂಜಲಿಯ ಶ್ರೀ ಬಾಬಾ ರಾಮದೇವ ಜಿ, ಶ್ರೀ ಆಚಾರ್ಯ ಬಾಲಕೃಷ್ಣ ಜಿ ಮುಂತಾದ ವಿದ್ವಾಂಸ ಸಂನ್ಯಾಸಿಗಳೂ ಉಪಸ್ಥಿತರಿರುತ್ತಾರೆ.

ಪತಂಜಲಿಯ ಶ್ರೀ ಬಾಬಾ ರಾಮದೇವ ಜಿ, ಶ್ರೀ ಆಚಾರ್ಯ ಬಾಲಕೃಷ್ಣ ಜಿಯವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6ರಿಂದ 7ರ ವರೆಗೆ ಯೋಗ-ಧ್ಯಾನಾದಿ ತರಗತಿಗಳೂ ನಡೆಯುತ್ತವೆ.

ಸುತ್ತಮುತ್ತಲಿನ ಅಷ್ಟಮಠಗಳ ಆವರಣ, ಸಂಸ್ಕೃತ ಕಾಲೇಜು ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾಗಿ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣಗಳು ಪರ್ಯಾಯವಾಗಿ ನಡೆಯಲಿವೆ.

ಭಗವದ್ಗೀತೆಯ ವಿಷಯದಲ್ಲಿ ಹಿರಿಯ ವಿದ್ವಾಂಸರಿಂದ Plenary Session ನಡೆಯಲಿದೆ. ಹಾಗೂ ಐ.ಕೆ.ಎಸ್ ಮುಂತಾದ ವಿಷಯಗಳಲ್ಲಿಯೂ ಉನ್ನತ ಸ್ತರದಲ್ಲಿ ವಿಚಾರ ಮಂಡನೆಯ ಸತ್ರ (Plenary Session) ಗಳು ನಡೆಯಲಿವೆ.

ತರುಣರ ಕವಿಗೋಷ್ಠಿ, ಯುವ ವಿದ್ವಾಂಸ-ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಹಿರಿಯ ಪ್ರಸಿದ್ಧ ವಿದ್ವಾಂಸರಿಂದ ಶಾಸ್ತ್ರಾರ್ಥಸಭೆಗಳು ನಡೆಯಲಿವೆ.

ಕರ್ನಾಟಕದ ಪ್ರಸಿದ್ಧ ಅಭಿನವ ನೃತ್ಯ ಅಕಾಡೆಮಿ ಇಂದ ’ತದ್ಭಾರತಂ’ ನೃತ್ಯ, ಉಡುಪಿಯವರಿಂದ ಯಕ್ಷನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

ಭಾರತದ ಹಲವು ವಿಶ್ವವಿದ್ಯಾಲಯಗಳಿಂದ 18 ಕುಲಪತಿಗಳು ಉಪಸ್ಥಿತರಿರುತ್ತಾರೆ. ಅವರೊಂದಿಗೆ ಸಂವಾದ ಕಾರ್ಯಕ್ರಮವಿರುತ್ತದೆ.

ಭಾರತದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ, ಮಾರಾಟವೂ ನಡೆಯಲಿದೆ.

ಪ್ರಸಿದ್ಧ ವಿದ್ವಾಂಸರ 25 ನೂತನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿರುತ್ತದೆ.

ಭಾರತದ ಹಲವು ಭಾಗಗಳಿಂದ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ 2೦೦೦ ಕ್ಕೂ ಹೆಚ್ಚು ಶ್ರೇಷ್ಠ ವಿದ್ವಾಂಸರು ಆಗಮಿಸಿ, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ (All India Oriental Conference) ಪ್ರಾರಂಭಿಸಿದರು. ಪ್ರಾರಂಭವಾಗಿ ಇಲ್ಲಿಗೆ 102 ವರ್ಷಗಳು ಸಂದಿವೆ. ಅನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಂಸ್ಥೆಯ ಅಧಿವೇಶನ ಭಾರತದ ವಿವಿಧ ಸ್ಥಳಗಳಲ್ಲಿ ನಡೆದು ಬಂದಿದೆ. ಇಲ್ಲಿಯ ತನಕ 50 ಅಧಿವೇಶನಗಳು ನಡೆದಿದ್ದು, ೫೧ನೇ ಅಧಿವೇಶನ ಇದೀಗ ಉಡುಪಿಯಲ್ಲಿ ನಡೆಯುತ್ತಿದೆ. ಇಲ್ಲಿಯತನಕ ಕೇವಲ ಉತ್ತರಭಾರತದಲ್ಲಿಯೇ ನಡೆಯುತ್ತಿದ್ದ ಈ ಸಮ್ಮೇಳನ ಪ್ರಪ್ರಥಮಭಾರಿಗೆ ದಕ್ಷಿಣಭಾರತದಲ್ಲಿ ನಡೆಯುತ್ತಿರುವುದು, ಅದರಲ್ಲೂ ಕರ್ನಾಟಕದ ಆಚಾರ್ಯಮಧ್ವರ ಅವತಾರಭೂಮಿಯಾದ ಉಡುಪಿಯಲ್ಲಿ ನಡೆಯುತ್ತಿರುವುದು ಅತ್ಯಂತ ಸಮುಚಿತವಾದ ವಿಶೇಷ ವಿಷಯವಾಗಿದೆ. ಇದೊಂದು ಅಕ್ಷರಶಃ ಅಕ್ಷರ ಹಬ್ಬವಾಗಿದೆ.

ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ.

ಹಲವು ದಶಕಗಳ ಅನಂತರ ಈ ಸಮ್ಮೇಳನವು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ನಡೆಯುತ್ತಿರುವುದು ಬಹಳ ಮುಖ್ಯ ವಿಷಯವಾಗಿರುತ್ತದೆ.

Previous Post

ದುಬೈನ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ ಗೆ ವಂಚನೆ ಪ್ರಕರಣ: ಆರೋಪಿ ಬಂಧನ..!!

Next Post

ಮೈಸೂರು ದಸರಾ 2024: ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮೈಸೂರು ದಸರಾ 2024: ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

30/01/2026
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026

Recent News

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ

30/01/2026
ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

ಅಗ್ನಿಪಥ್ ನೇಮಕಾತಿ ರ‍್ಯಾಲಿ: ಸ್ವರಾಜ್ಯ ಮೈದಾನದಲ್ಲಿ ಜ.30ರಿಂದ ಆರಂಭ, 15,000 ಅಭ್ಯರ್ಥಿಗಳು ಪಾಲು…!!

30/01/2026
ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

ಮಲೆನಾಡಿನಲ್ಲಿ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ 9 ಪ್ರಕರಣಗಳು ದಾಖಲು…!!

30/01/2026
ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

30/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved