Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇಸ್ರೋ ದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್-08 ಯಶಸ್ವೀ ಉಡಾವಣೆ..!!

Dhrishya News by Dhrishya News
16/08/2024
in ಸುದ್ದಿಗಳು
0
0
SHARES
7
VIEWS
Share on FacebookShare on Twitter

ನವದೆಹಲಿ : ಆಗಸ್ಟ್ 16: ಇಸ್ರೋ ಇಂದು ತನ್ನ EOS-8 ಮಿಷನ್ ಉಡಾವಣೆ ಯಶಸ್ವಿಯಾಗಿ ನಡೆಸಿದೆ. ಇಂದು ಬೆಳಿಗ್ಗೆ 9.19ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ. ಈ ಮಿಷನ್​​​ನ ಉಡಾವಣೆಯನ್ನು ಯಾವ ಕಾರಣಕ್ಕಾಗಿ ಮಾಡಲಾಗಿದೆ. ಇದರ ಮುಖ್ಯ ಉದ್ದೇಶ ಏನು? ಇದರಿಂದ ಭೂಮಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೆಳಿಗ್ಗೆ 9.19ಕ್ಕೆ ತನ್ನ EOS-8 ಮಿಷನ್​​​​​ ಯಶಸ್ವಿಯಾಗಿ ಉಡಾವಣೆ ನಡೆಸಿದೆ. ಇದು ಈ ಮಿಷನ್‌ನ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆಯನ್ನು ನಡೆಸಲಾಗಿದೆ. ಈ ಮಿಷನ್​​​ನ ಉಡಾವಣೆ SSLV ಯ ಅಭಿವೃದ್ಧಿಯ ಹಂತವನ್ನು ಸೂಚಿಸುತ್ತದೆ.

EOS-8 ಮಿಷನ್ 34-ಮೀಟರ್ ಅಡಿಯಿಂದ ಹಾರಾಟ ನಡೆಸಿದ್ದು ಹಾಗೂ 175.5-ಕಿಲೋಗ್ರಾಂ ಭೂಮಿಯ ವೀಕ್ಷಣಾ ಉಪಗ್ರಹ ಹೊತ್ತುಕೊಂಡು ಉಡಾವಣೆಗೊಂಡಿದೆ. ಇದು ಎಲೆಕ್ಟ್ರೋ-ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್, ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ರಿಫ್ಲೆಕ್ಟೋಮೆಟ್ರಿ ಪೇಲೋಡ್ ಮತ್ತು ಸಿಲಿಕಾನ್ ಕಾರ್ಬೈಡ್ ನೇರಳಾತೀತ ಡೋಸಿಮೀಟರ್​​​​​ಗಳನ್ನು ಹೊಂದಿದೆ.

EOS-8 ಮಿಷನ್‌ನ ಮೊದಲು ಗುರಿ ಅಂದರೆ ವಿಜ್ಞಾನದ ಪ್ರಕಾರ ಇದರ ಪ್ರಾಥಮಿಕ ಉದ್ದೇಶ ಮೈಕ್ರೋಸ್ಯಾಟಲೈಟ್ ಅಭಿವೃದ್ಧಿಪಡಿಸುವುದು ಹಾಗೂ ಮೈಕ್ರೋಸ್ಯಾಟಲೈಟ್ ಉಪಕರಣಕ್ಕೆ ಹೊಂದಿಕೆಯಾಗುವ ಪೇಲೋಡ್ ಯಂತ್ರವನ್ನು ಅಳವಡಿಸುವುದು. ಈ ಮೂಲಕ ಭವಿಷ್ಯದ ಉಪಗ್ರಹಗಳಿಗಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ಉಪಗ್ರಹವು ಭೂಮಿಯ ಮೇಲೆ ಒಂದು ಕಣ್ಗಾವಲು ಹಾಗೂ ಭೂಮಿಯ ಮೇಲೆ ಆಗುವ ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆಯನ್ನು ಮಾಡಿದ ಅದರ ಚಿತ್ರಗಳನ್ನು ಇಸ್ರೋ ಕಳುಹಿಸುತ್ತದೆ.

1. ಮೊದಲ ಪೇಲೋಡ್, EOIR, ಮಿಡ್-ವೇವ್ ಇನ್ಫ್ರಾರೆಡ್ (MWIR) ಮತ್ತು ಲಾಂಗ್-ವೇವ್ ಇನ್ಫ್ರಾರೆಡ್ (LWIR) ಬ್ಯಾಂಡ್‌ಗಳು ಹಗಲು ರಾತ್ರಿ ಎರಡೂ ಸಮಯಕ್ಕೂ ಚಿತ್ರಗಳನ್ನು ಸೆರೆಹಿಡಿಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೌಲ್ಯಮಾಪನ, ಕಾಡುಗಿಚ್ಚು, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸೇರಿದಂತೆ ಎಲ್ಲದ ಬಗ್ಗೆ ಮಾಹಿತಿ ನೀಡುತ್ತದೆ.

2. ಇನ್ನು ಎರಡನೇ ಪೇಲೋಡ್, GNSS-R, ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್ ಅಧ್ಯಯನ, ಪ್ರವಾಹ, ಒಳನಾಡಿನ ಮೇಲ್ವಿಚಾರಣೆ, GNSS-R- ಆಧಾರಿತ ದೂರಸಂವೇದಿ ಸಾಮರ್ಥ್ಯ, ಜಲಮೂಲಗಳ ಬಗ್ಗೆ ಮಾಹಿತಿ ನೀಡುತ್ತದೆ.

3. ಮೂರನೇ ಪೇಲೋಡ್ ಅಂದರೆ ಇಂದು ಉಡಾವಣೆಯಾಗಿರುವ ಮಿಷನ್ SiC UV ಡೋಸಿಮೀಟರ್, ಗಗನ್ಯಾನ್ ಮಿಷನ್‌ ಮೂಲಕ ಮಾಡ್ಯೂಲ್‌ನ ವ್ಯೂಪೋರ್ಟ್‌ನಲ್ಲಿ UV ವಿಕಿರಣವನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಇದು ಗಾಮಾ ವಿಕಿರಣಕ್ಕಾಗಿ ಹೆಚ್ಚಿನ-ಡೋಸ್ ಎಚ್ಚರಿಕೆಯ ಸಂವೇದಕವಾಗಿ ಕಾರ್ಯನಿರ್ವಹಿಸುತ್ತದೆ.

ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರವರಿಯಲ್ಲಿ GSLV-F14/INSAT-3DS ಸೇರಿದಂತೆ SSLV ಯ ಮೂರು ಪರೀಕ್ಷಾ ಹಾರಾಟಗಳನ್ನು ಇಸ್ರೋ ಈ ವರ್ಷ ನಡೆಸಿದೆ. ಸರಿಸುಮಾರು 34 ಮೀಟರ್ ಎತ್ತರ ಮತ್ತು 500 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ, SSLV ಸಣ್ಣ ಉಪಗ್ರಹಕ್ಕೆ ಹೊಂದಾಣಿಕೆ ಆಗುವ ಉಪಕರಣಗಳನ್ನು ಅಳವಡಿಸಲಾಗಿದೆ.

Previous Post

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ವತಿಯಿಂದ ಮಣಿಪಾಲದಲ್ಲಿ CANARA MARATHON FREEDOM 2024..!!

Next Post

ನದಿಯ ಮದ್ಯೆ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನದಿಗೆ ಸೇತುವೆ ರಚಿಸಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರ ಪ್ರೇಮ ಮೆರೆದ ಸಾಲಿಗ್ರಾಮ ಕಯಾಕಿಂಗ್ ತಂಡ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನದಿಯ ಮದ್ಯೆ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನದಿಗೆ ಸೇತುವೆ ರಚಿಸಿ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರ ಪ್ರೇಮ ಮೆರೆದ ಸಾಲಿಗ್ರಾಮ ಕಯಾಕಿಂಗ್ ತಂಡ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪುತ್ತಿಗೆ ಶ್ರೀಗಳನ್ನು ಭೇಟಿಯಾದ ಐಯ್ಯರ್

ಪುತ್ತಿಗೆ ಶ್ರೀಗಳನ್ನು ಭೇಟಿಯಾದ ಐಯ್ಯರ್

31/01/2026
ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

31/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಂಜೆ ಚಿಕಿತ್ಸಾಲಯಗಳ ಆರಂಭ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಂಜೆ ಚಿಕಿತ್ಸಾಲಯಗಳ ಆರಂಭ

31/01/2026
ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

31/01/2026

Recent News

ಪುತ್ತಿಗೆ ಶ್ರೀಗಳನ್ನು ಭೇಟಿಯಾದ ಐಯ್ಯರ್

ಪುತ್ತಿಗೆ ಶ್ರೀಗಳನ್ನು ಭೇಟಿಯಾದ ಐಯ್ಯರ್

31/01/2026
ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

31/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಂಜೆ ಚಿಕಿತ್ಸಾಲಯಗಳ ಆರಂಭ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸಂಜೆ ಚಿಕಿತ್ಸಾಲಯಗಳ ಆರಂಭ

31/01/2026
ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

ಅಸಹಾಯಕ ಸ್ಥಿತಿಯಲ್ಲಿ ವೃದ್ಧೆಯ ರಕ್ಷಣೆ: ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ಸಮಯೋಚಿತ ನೆರವು..!!

31/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved