ಶಿವಮೊಗ್ಗ: ಜನವರಿ 22 ನಂತರ ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿಯ ರಾಜಕೀಯ ವಿರೋಧ ಹೊರತು ರಾಮನ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ ರಾಜಕಾರಣಕ್ಕೆ ಮಾತ್ರ ವಿರೋಧ. ಶ್ರೀರಾಮನ ಭಕ್ತರು ನಾವು. ಆದರೆ ಇವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು.








